ಶಿಶುವನ್ನು ಅಪಹರಿಸಿ ಗಂಡು ಮಗುವಿಗಾಗಿ ಕಾಯುತ್ತಿದ್ದ ಸಂಬಂಧಿಕರಿಗೆ ಮಾರಾಟ!
ಆಗಸ್ಟ್ 19ರಂದು ತಮಿಳುನಾಡಿನ ಚೆನ್ನೈ ನಿವಾಸಿಯಾಗಿರುವ ಮಗುವಿನ ತಾಯಿ ತನ್ನ ಕಂದನೊಂದಿಗೆ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಆಕೆ ರೈಲಿನಲ್ಲಿ ದೆಹಲಿಗೆ ಬಂದಿಳಿದಾಗ ಈ ಘಟನೆ ನಡೆದಿದೆ. ಆಕೆಯ ಕೈಯಲ್ಲಿದ್ದ ಮಗುವನ್ನು ಕಿತ್ತುಕೊಂಡ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಇದರಿಂದ ಕಂಗಾಲಾದ ಆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಈ ಘಟನೆ ನಡೆದ 18 ಗಂಟೆಯೊಳಗೆ ಪೊಲೀಸರು ಆಕೆಯ ಮಗುವನ್ನು ಹುಡುಕಿಕೊಟ್ಟಿದ್ದಾರೆ.

ನವದೆಹಲಿ, ಆಗಸ್ಟ್ 22: ಹಣದ ಆಸೆಗೆ ವ್ಯಕ್ತಿಯೊಬ್ಬ ಮಹಿಳೆಯ ಜೊತೆಯಲ್ಲಿದ್ದ ಪುಟ್ಟ ಕಂದನನ್ನು ಅಪಹರಿಸಿರುವ ಘಟನೆ ದೆಹಲಿಯಲ್ಲಿ (Delhi News) ನಡೆದಿದೆ. ಆತನ ಸಂಬಂಧಿಕರು ಗಂಡು ಮಗು ಬೇಕೆಂದು ಬಯಸಿದ್ದರು. ತಮಗೆ ಗಂಡು ಮಗುವನ್ನು ತಂದುಕೊಟ್ಟರೆ ನಿನಗೆ ಎಷ್ಟು ಬೇಕಾದರೂ ದುಡ್ಡು ಕೊಡುತ್ತೇವೆ ಎಂದು ಅವರು ಹೇಳಿದ್ದರು. ಹಣದ ಆಸೆಯಿಂದ ಆತ ರೈಲ್ವೆ ನಿಲ್ದಾಣದಲ್ಲಿ ಸಣ್ಣ ಗಂಡು ಮಗುವೊಂದನ್ನು ಅಪಹರಿಸಿದ್ದಾನೆ. ಬಳಿಕ ಆ ಮಗುವನ್ನು ತನ್ನ ಸಂಬಂಧಿಕರಿಗೆ ಕೊಟ್ಟಿದ್ದಾನೆ.
ದೆಹಲಿಯಿಂದ ಮಗುವನ್ನು ಅಪಹರಿಸಿದ ರಾಜಸ್ಥಾನದ ಖೇತ್ರಿಯ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಶಿಶುವನ್ನು ಸುರಕ್ಷಿತವಾಗಿ ತಾಯಿಗೆ ಒಪ್ಪಿಸಲಾಗಿದೆ. ಮಗುವನ್ನು ಕದ್ದ ಆರೋಪಿಯನ್ನು ಜಿತೇಂದರ್ ಕುಮಾರ್ (32) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 19ರಂದು ಚೆನ್ನೈ ನಿವಾಸಿಯಾಗಿರುವ ಮಗುವಿನ ತಾಯಿ ಸಂಬಂಧಿಕರನ್ನು ಭೇಟಿ ಮಾಡಲು ತನ್ನ ಮಗುವಿನೊಂದಿಗೆ ರೈಲಿನಲ್ಲಿ ದೆಹಲಿಗೆ ಬಂದಾಗ ಅವರ ಮಗುವನ್ನು ಅಪಹರಿಸಲಾಗಿತ್ತು.
ಇದನ್ನೂ ಓದಿ: Video: ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಅದೇ ರೈಲಿನಲ್ಲಿ ಪ್ರಯಾಣಿಸಿದ್ದ ಜಿತೇಂದರ್ ಕುಮಾರ್ ಪ್ರಯಾಣದ ಸಮಯದಲ್ಲಿ ನನ್ನೊಂದಿಗೆ ಸ್ನೇಹ ಬೆಳೆಸಿದನು. ಸುಮಾರು ಎರಡು ಗಂಟೆಗಳ ಕಾಲ ತನ್ನೊಂದಿಗೆ ಮಾತನಾಡಿದನು. ಆತನನ್ನು ನಾನು ನಂಬಿದ್ದೆ. ಆದರೆ, ರೈಲು ಇಳಿಯುತ್ತಿದ್ದಂತೆ ಅಲ್ಲೇ ಪಕ್ಕದಲ್ಲಿದ್ದ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋದ. ಅಲ್ಲಿ 150 ರೂ. ನೀಡಿ ಮಗುವಿಗೆ ಏನಾದರೂ ಬಟ್ಟೆ ತೆಗೆದುಕೊಂಡು ಬಾ ಎಂದು ಹೇಳಿದ. ನಾನು ಮಗುವನ್ನು ಆತನ ಜೊತೆ ಬಿಟ್ಟು ಬಟ್ಟೆಯಂಗಡಿಗೆ ಹೋಗಿ ಹೊರಗೆ ಬರುವಷ್ಟರಲ್ಲಿ ಆತ ಮಗುವನ್ನು ಎತ್ತಿಕೊಂಡು ಓಡಿಹೋಗಿದ್ದಾನೆ ಎಂದು ಅವಳು ಪೊಲೀಸರಿಗೆ ತಿಳಿಸಿದ್ದಾಳೆ.
ಇದನ್ನೂ ಓದಿ: Video: ಇವರೇ ನಿಜವಾದ ಹೀರೋ, ಕಾರೊಳಗೆ ಸಿಲುಕಿದ್ದ ಮಗುವನ್ನು ಮೊಬೈಲ್ ಬಳಸಿ ರಕ್ಷಿಸಿದ್ಹೇಗೆ ನೋಡಿ
ಪೊಲೀಸರು ಸುಮಾರು 100 ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ, ಆರೋಪಿಯನ್ನು ಪತ್ತೆಹಚ್ಚಿದ್ದರು. ಆತನ ಚಲನವಲನಗಳನ್ನು ಪತ್ತೆಹಚ್ಚಿದ ನಂತರ, ಸ್ಥಳೀಯ ಪೊಲೀಸರ ಸಹಾಯದಿಂದ ಜಿತೇಂದರ್ ಕುಮಾರನನ್ನು ರಾಜಸ್ಥಾನದ ಖೇತ್ರಿಯಲ್ಲಿರುವ ಅವನ ಹಳ್ಳಿಯಲ್ಲಿ ಪತ್ತೆಹಚ್ಚಲಾಯಿತು. ದೆಹಲಿ ಪೊಲೀಸ್ ತಂಡವು ಖೇತ್ರಿಯಿಂದ ಆತನನ್ನು ಬಂಧಿಸಿ ಮಗುವನ್ನು ರಕ್ಷಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
