AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತರಗತಿಯಲ್ಲಿ ಪ್ಯಾಲೆಸ್ತೀನ್ ಪರ ವಿದ್ಯಾರ್ಥಿಯ ಪ್ರತಿಭಟನೆ; ನಾನು ಈ ಸಾಲು ಮುಗಿಸಿಬಿಡಲೇ ಎಂದ ಕೇಳಿದ ಶಿಕ್ಷಕ

ಪ್ಯಾಲೆಸ್ತೀನ್ ಪರ ಬೆಂಬಲಿಗರು ನಂತರ "ಗಾಜಾದಲ್ಲಿ ನರಮೇಧದ ಬಗ್ಗೆ MIT ಮೌನ" ಖಂಡಿಸಿ ಭಾಷಣವನ್ನು ಓದಿದರು. ನಂತರ ಅವರು ಪ್ಯಾಲೆಸ್ತೀನ್ ಧ್ವಜವನ್ನು ಬೀಸಿದರು ಮತ್ತು ಘೋಷಣೆಗಳನ್ನು ಕೂಗಿದ್ದಾರೆ.ವಿಡಿಯೊದಲ್ಲಿ, ಇನ್ನೂ ಕೆಲವರು "ಫ್ರೀ ಪ್ಯಾಲೆಸೀನ್ ಎಂದು ಘೋಷಣೆಗಳನ್ನು ಕೂಗುವುದನ್ನು ಕಾಣಬಹುದು

ತರಗತಿಯಲ್ಲಿ ಪ್ಯಾಲೆಸ್ತೀನ್ ಪರ ವಿದ್ಯಾರ್ಥಿಯ ಪ್ರತಿಭಟನೆ; ನಾನು ಈ ಸಾಲು ಮುಗಿಸಿಬಿಡಲೇ ಎಂದ ಕೇಳಿದ ಶಿಕ್ಷಕ
ಎಂಐಟಿ(ವೈರಲ್ ವಿಡಿಯೊ ಚಿತ್ರ)
Follow us
ರಶ್ಮಿ ಕಲ್ಲಕಟ್ಟ
|

Updated on: Nov 11, 2023 | 6:28 PM

ಜೆರುಸಲೇಮ್ ನವೆಂಬರ್ 11: ಶುಕ್ರವಾರ ಇಸ್ರೇಲ್ ವಿರೋಧಿ ಪ್ರತಿಭಟನಾಕಾರರು (Anti-Israel protesters) ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (Massachusetts Institute of Technology)ಗಣಿತ ತರಗತಿ ನಡೆಯುತ್ತಿರುವಾಗ ಅಡ್ಡಿಪಡಿಸಿ, ಪ್ಯಾಲೆಸ್ತೀನ್ ಧ್ವಜ ಬೀಸಿದ್ದಾರೆ. ಪ್ರತಿಭಟನಾಕಾರರು ತರಗತಿಯ ಮಧ್ಯದಲ್ಲಿ “ಫ್ರೀ ಪ್ಯಾಲೆಸ್ತೀನ್” (free Palestine)ಘೋಷಣೆಗಳನ್ನು ಕೂಗಿದ್ದಾರೆ. ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಯುತ್ತಿರುವ ಗಣಿತ ಉಪನ್ಯಾಸ ನಡುವೆ ಪ್ಯಾಲೆಸ್ಟೈನ್ ಪರ ವಿದ್ಯಾರ್ಥಿ ಘೋಷಣೆ ಕೂಗಲು ಆರಂಭಿಸಿದಾಗ ಪ್ರಾಧ್ಯಾಪಕರು ಅವರು ಬರೆಯುವ ಸಾಲನ್ನು ಮುಗಿಸಲು ಅವಕಾಶ ನೀಡುವಂತೆ ಕೇಳಿಕೊಂಡ ವಿಡಿಯೊ ಇದೀಗ ವೈರಲ್ ಆಗಿದೆ.

ಪ್ಯಾಲೆಸ್ತೀನ್ ಪರ ಬೆಂಬಲಿಗರು ನಂತರ “ಗಾಜಾದಲ್ಲಿ ನರಮೇಧದ ಬಗ್ಗೆ MIT ಮೌನ” ಖಂಡಿಸಿ ಭಾಷಣವನ್ನು ಓದಿದರು. ನಂತರ ಅವರು ಪ್ಯಾಲೆಸ್ತೀನ್ ಧ್ವಜವನ್ನು ಬೀಸಿದರು ಮತ್ತು ಘೋಷಣೆಗಳನ್ನು ಕೂಗಿದ್ದಾರೆ.ವಿಡಿಯೊದಲ್ಲಿ ಇನ್ನೂ ಕೆಲವರು “ಫ್ರೀ ಪ್ಯಾಲೆಸೀನ್ ಎಂದು ಘೋಷಣೆಗಳನ್ನು ಕೂಗುವುದನ್ನು ಕಾಣಬಹುದು. MITಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ, ಶಾಲೆಯಲ್ಲಿದ್ದ ಯಹೂದಿ ವಿದ್ಯಾರ್ಥಿಗಳು ಪ್ರತಿಕೂಲ ಇಸ್ರೇಲ್ ವಿರೋಧಿ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದಂತೆ ಅಡ್ಡಿಪಡಿಸಿದ್ದಾರೆ ಎಂದು ಹೇಳಿದರು. ಶಾಲೆಯು “ಯಹೂದಿಗಳಿಗೆ ಸುರಕ್ಷಿತವಲ್ಲ” ಎಂದು ಅವರು ಹೇಳಿದ್ದಾರೆ.

MIT ಇಸ್ರೇಲ್ ಅಲೈಯನ್ಸ್‌ನ ಬಹಿರಂಗ ಪತ್ರದ ಪ್ರಕಾರ ಪ್ಯಾಲೆಸ್ಟೀನಿಯನ್ ಪರವಾದ ಗುಂಪು Coalition Against Apartheid (CAA) ಯಹೂದಿ ಮತ್ತು ಇಸ್ರೇಲಿ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಹಾಜರಾಗದಂತೆ “ಭೌತಿಕವಾಗಿ” ಅಡ್ಡಿಪಡಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಕಳೆದ ಕೆಲವು ವಾರಗಳಲ್ಲಿ ಯಹೂದಿ ವಿದ್ಯಾರ್ಥಿಗಳು ತರಗತಿಯಲ್ಲಿ ಹಾಜರಾಗುವುದಕ್ಕೆ ಅಡ್ಡಿಪಡಿಸಿದ ನಂತರ ಈ ಘಟನೆ ನಡೆದಿದೆ.ಯಹೂದಿಗಳಿಗೆ MIT ಸುರಕ್ಷಿತವಲ್ಲ ಎಂದು ಅವರು ಭಾವಿಸಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಪ್ಯಾಲೆಸ್ತೀನ್​​ಗೆ ಬೆಂಬಲಿಸಿ ಬೆಂಗಳೂರಿನಲ್ಲಿ ಮೌನ ಪಾದಯಾತ್ರೆ ಮಾಡಿದ್ದವರ ವಿರುದ್ಧ ಎಫ್​ಐಆರ್

MIT ಆಡಳಿತವು ವಿದ್ಯಾರ್ಥಿಗಳಿಗೆ ಕೊಠಡಿ ತೊರೆಯುವಂತೆ ಹೇಳಿತು ಮತ್ತು CAA ಪ್ರತಿಭಟನೆ ಪ್ರಾರಂಭವಾದ ಗಂಟೆಗಳ ನಂತರ ಅವರನ್ನು ಅಮಾನತುಗೊಳಿಸುವುದಾಗಿ ಬೆದರಿಕೆ ಹಾಕಿತು, ಆದರೆ ಪ್ರತಿಯಾಗಿ ಪ್ರತಿಭಟಿಸಲು ಅಲ್ಲಿದ್ದ ಯಹೂದಿ ವಿದ್ಯಾರ್ಥಿಗಳು ಮಾತ್ರ ಅಲ್ಲಿಂದ ಹೊರಹೋಗಿದ್ದಾರೆ.  CAA ದಿಗ್ಬಂಧನವನ್ನು ಆಯೋಜಿಸಿದ್ದು ಅದು MIT ಮಾರ್ಗಸೂಚಿಗಳನ್ನು ನಿರ್ಲಕ್ಷಿಸುತ್ತದೆ ಆದರೆ ಯಹೂದಿ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಹಾಜರಾಗದಂತೆ ತಡೆಯುತ್ತದೆ.

ಗಡುವಿನ ನಂತರ ಕೊಠಡಿ ಉಳಿದಿರುವ ವಿದ್ಯಾರ್ಥಿಗಳನ್ನು ಶೈಕ್ಷಣಿಕೇತರ ಕ್ಯಾಂಪಸ್ ಚಟುವಟಿಕೆಗಳಿಂದ ಅಮಾನತುಗೊಳಿಸಲಾಗುವುದು ಎಂದು MIT ಅಧ್ಯಕ್ಷ ಸ್ಯಾಲಿ ಕಾರ್ನ್‌ಬ್ಲುತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ