ಲಯನ್, ಮ್ಯಾಡ್​ಮ್ಯಾನ್, ಟ್ರಂಪ್: ಸತ್ತ ನಾಯಿಯಿಂದ ಸಲಹೆ ಪಡೆಯುವ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್​ಗೆ ಈ ಅಡ್ಡ ಹೆಸರುಗಳೇಕೆ?

ಅರ್ಜೆಂಟೀನಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಲಪಂಥೀಯ ನಾಯಕ ಜೇವಿಯರ್ ಮಿಲಿ ಗೆಲುವು ಸಾಧಿಸಿದ್ದಾರೆ. ಶೇ.55.7ರಷ್ಟು ಮತ ಗಳಿಸುವ ಮೂಲಕ ಅರ್ಜೆಂಟೀನಾ ರಾಜಕಾರಣದಲ್ಲಿ ದೀರ್ಘ ಕಾಲದಿಂದಲೂ ಪ್ರಾಬಲ್ಯ ಹೊಂದಿದ್ದ ಎಡ ಪಕ್ಷಗಳ ಮೈತ್ರಿಕೂಟವನ್ನು ಜೇವಿಯರ್ ಅಧಿಕಾರದಿಂದ ಕೆಳಗಿಳಿಸಿದ್ದಾರೆ.

ಲಯನ್, ಮ್ಯಾಡ್​ಮ್ಯಾನ್, ಟ್ರಂಪ್: ಸತ್ತ ನಾಯಿಯಿಂದ ಸಲಹೆ ಪಡೆಯುವ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್​ಗೆ ಈ ಅಡ್ಡ ಹೆಸರುಗಳೇಕೆ?
ಜೇವಿಯರ್ ಮಿಲಿImage Credit source: TV9 Bharatvarsh
Follow us
|

Updated on: Nov 21, 2023 | 1:09 PM

ಅರ್ಜೆಂಟೀನಾ(Argentina)ದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಲಪಂಥೀಯ ನಾಯಕ ಜೇವಿಯರ್ ಮಿಲಿ(Javier Milei) ಗೆಲುವು ಸಾಧಿಸಿದ್ದಾರೆ. ಶೇ.55.7ರಷ್ಟು ಮತ ಗಳಿಸುವ ಮೂಲಕ ಅರ್ಜೆಂಟೀನಾ ರಾಜಕಾರಣದಲ್ಲಿ ದೀರ್ಘ ಕಾಲದಿಂದಲೂ ಪ್ರಾಬಲ್ಯ ಹೊಂದಿದ್ದ ಎಡ ಪಕ್ಷಗಳ ಮೈತ್ರಿಕೂಟವನ್ನು ಜೇವಿಯರ್ ಅಧಿಕಾರದಿಂದ ಕೆಳಗಿಳಿಸಿದ್ದಾರೆ.

ವರ್ಷಗಳಿಂದ ಹಣಿಗೆಯನ್ನೇ ಕಂಡಿರದ ತಲೆ ಕೂದಲು, ವಿಚಿತ್ರ ಬಟ್ಟೆ, ಯಾರೂ ಊಹಿಸದ ವ್ಯಕ್ತಿತ್ವ ಜೇವಿಯರ್​ದ್ದು. ನೋಡಲು ಸಿಂಹದಂತೆ, ನಡೆ ಟ್ರಂಪ್​ನಂತೆ, ಬಟ್ಟೆ ಹುಚ್ಚರಂತೆ ಹೀಗಾಗಿ ಅವರನ್ನು ಲಯನ್, ಮ್ಯಾಡ್​ಮ್ಯಾನ್, ಟ್ರಂಪ್​ ಎಂದೂ ಕರೆಯುತ್ತಾರೆ. ಭಾನುವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅರ್ಜೆಂಟೀನಾದ ಆರ್ಥಿಕ ಸಚಿವ ಸೆರ್ಗಿಯೊ ಮಸ್ಸಾ ಅವರು ಜೇವಿಯರ್ ಮಿಲಿ ವಿರುದ್ಧದ ಸೋಲನ್ನು ಒಪ್ಪಿಕೊಂಡಿದ್ದಾರೆ.

ಸರ್ಕಾರ ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಪೆರೋನಿಸ್ಟ್ ಪಕ್ಷದ ಸೆರ್ಗಿಯೋ ಚುನಾವಣೆಯಲ್ಲಿ ಗೆದ್ದ ಜೇವಿಯರ್ ಅವರನ್ನು ಅಭಿನಂದಿಸಿದ್ದಾರೆ. ತನ್ನನ್ನು ಅರಾಜಕತಾವಾದಿ-ಬಂಡವಾಳಶಾಹಿ ಎಂದು ಕರೆದುಕೊಳ್ಳುವ ಮಿಲ್ಲಿಯನ್ನು ಸಾಮಾನ್ಯವಾಗಿ ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹೋಲಿಸಲಾಗುತ್ತದೆ. ಕೆಲವೊಮ್ಮೆ ಅವರ ನಡವಳಿಕೆ, ಕೆಲವೊಮ್ಮೆ ಅವರ ಕೆಲಸದ ಆಧಾರದ ಮೇಲೆ ಈ ಹೆಸರಿನಲ್ಲಿ ಕರೆಯಲಾಗುತ್ತದೆ.

ಅರ್ಜೆಂಟೀನಾದ ಹೊಸ ಅಧ್ಯಕ್ಷರನ್ನು ದಿ ಲಯನ್, ದಿ ವಿಗ್ ಮತ್ತು ದಿ ಮ್ಯಾಡ್‌ಮ್ಯಾನ್ ಎಂಬ ಮೂರು ಅಡ್ಡಹೆಸರುಗಳಿಂದ ಕರೆಯಲಾಗುತ್ತದೆ. ಸತ್ತ ನಾಯಿಯಿಂದ ಸಲಹೆಯನ್ನು ಪಡೆಯುವ ಕಾರಣ ಅವರನ್ನು ಮ್ಯಾಡ್​ಮ್ಯಾನ್​ ಎಂದು ಹೆಸರಿಸಲಾಗಿದೆ. ರಾಜಕೀಯ ಸಭೆಗಳಿಗೆ ವಿಚಿತ್ರ ಬಟ್ಟೆಗಳನ್ನು ಧರಿಸಿ ಆಗಮಿಸುತ್ತಾರೆ. ಜೇವಿಯರ್ ಅವರ ತಂದೆ ಬಸ್​ ಚಾಲಕರಾಗಿದ್ದರು, ಹೀಗಾಗಿ ಅವರಿಗೂ ರಾಜಕೀಯಕ್ಕೂ ದೂರದ ಸಂಬಂಧವೇನೂ ಇಲ್ಲ.

ಅವರ ತಂದೆಯೊಂದಿಗಿನ ಸಂಬಂಧವು ಉತ್ತಮವಾಗಿಲ್ಲ. ಮಿಲಿ ತನ್ನ ಬಾಲ್ಯದಲ್ಲಿ ತನ್ನ ಹೆತ್ತವರಿಂದ ಪ್ರೀತಿಯನ್ನು ಪಡೆಯಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಮಿಲಿ ಫುಟ್ಬಾಲ್ ಅನ್ನು ಪ್ರೀತಿಸುತ್ತಿದ್ದರು ಮತ್ತು ಉತ್ತಮ ಗೋಲ್ಕೀಪರ್ ಆಗಿದ್ದರು. ಆದರೆ ಅವರು 18 ವರ್ಷವಾದಾಗ, ಅವರು ಅರ್ಥಶಾಸ್ತ್ರದಲ್ಲಿ ಆಸಕ್ತಿ ಬಂದಾಗ ವಿಶ್ವವಿದ್ಯಾಲಯಕ್ಕೆ ಹೋಗಿ ಅದರ ಉಪನ್ಯಾಸಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ನಂತರ ಅವರು ಹಲವಾರು ಹಣಕಾಸು ಸಂಸ್ಥೆಗಳಲ್ಲಿ ಅರ್ಥಶಾಸ್ತ್ರಜ್ಞರಾಗಿ ಕೆಲಸ ಮಾಡಿದರು.

13ನೇ ವಯಸ್ಸಿನಿಂದ ಕೂದಲು ಬಾಚುವುದನ್ನು ನಿಲ್ಲಿಸಿದ್ದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಈ ಕಾರಣದಿಂದ ಅವರನ್ನು ಸಿಂಹ ಎಂದೂ ಕರೆಯಲಾಗುತ್ತದೆ. ದೇಶದ ಮರು ನಿರ್ಮಾಣ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ