ಇಸ್ರೇಲ್ ಜತೆ ಶೀಘ್ರದಲ್ಲೇ ಕದನ ವಿರಾಮ: ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹೇಳಿದ್ದಿಷ್ಟು…

ಒಂದು ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಐದು ದಿನಗಳ ಕದನ ವಿರಾಮವನ್ನು ಒಳಗೊಂಡಿದೆ. ಇದು ಭೂ ಸೇನಾ ದಾಳಿಗೆ ವಿರಾಮ ಮತ್ತು ದಕ್ಷಿಣ ಗಾಜಾದ ಮೇಲೆ ಇಸ್ರೇಲಿ ವಾಯು ಕಾರ್ಯಾಚರಣೆಗಳಿಗೆ ಮಿತಿ ಹೇರುವುದನ್ನು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ‘ಎಎಫ್​ಪಿ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಇಸ್ರೇಲ್ ಜತೆ ಶೀಘ್ರದಲ್ಲೇ ಕದನ ವಿರಾಮ: ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹೇಳಿದ್ದಿಷ್ಟು...
ಇಸ್ಮಾಯಿಲ್ ಹನಿಯೆಹ್
Follow us
| Updated By: ಗಣಪತಿ ಶರ್ಮ

Updated on: Nov 21, 2023 | 4:31 PM

ದೋಹಾ, ನವೆಂಬರ್ 21: ಇಸ್ರೇಲ್​ (Isrel) ಜತೆಗೆ ಕದನ ವಿರಾಮಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಶೀಘ್ರದಲ್ಲೇ ಒಪ್ಪಂದಕ್ಕೆ ಬರುವ ನಿರೀಕ್ಷೆ ಇದೆ ಎಂದು ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ (Ismail Haniyeh) ತಿಳಿಸಿದ್ದಾರೆ. ಈ ಕುರಿತು ಟೆಲಿಗ್ರಾಂ ಸಂದೇಶದಲ್ಲಿ ಮಾಹಿತಿ ನೀಡಿದ ಅವರು, ನಾವು ಕದನವಿರಾಮ ಒಪ್ಪಂದಕ್ಕೆ ತೀರಾ ಸನಿಹದಲ್ಲಿದ್ದೇವೆ. ಸುಮಾರು 240 ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ ವಿಚಾರವಾಗಿ ಮಧ್ಯವರ್ತಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಿದ್ದ ವೇಳೆ ಅಕ್ಟೋಬರ್​​ 7ರಂದು 240 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳಲಾಗಿತ್ತು. ಹಮಾಸ್ ದಾಳಿಕೋರರು ಸುಮಾರು 1,200 ಮಂದಿಯನ್ನು ಹತ್ಯೆ ಮಾಡಿದ್ದರು. ದಾಳಿಯಲ್ಲಿ ಮೃತರ ಪೈಕಿ ಹೆಚ್ಚಿನವರು ನಾಗರಿಕರಾಗಿದ್ದರು.

ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ನಿರಂತರ ಬಾಂಬ್ ದಾಳಿಯ ಕಾರ್ಯಾಚರಣೆಯನ್ನು ಮತ್ತು ಭೂ ಸೇನಾ ದಾಳಿಯನ್ನು ಪ್ರಾರಂಭಿಸಿತು, ಹಮಾಸ್ ಅನ್ನು ನಾಶಮಾಡಲು ಮತ್ತು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಪ್ರತಿಜ್ಞೆ ಮಾಡಿತು.

ಗಾಜಾದ ಹಮಾಸ್ ಸರ್ಕಾರದ ಪ್ರಕಾರ, ಯುದ್ಧದಲ್ಲಿ 13,300 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ಪೈಕಿ ಸಾವಿರಾರು ಮಕ್ಕಳೂ ಸೇರಿದ್ದಾರೆ.

ಇದೀಗ ಕತಾರ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮದ ಮಾತುಕತೆಗಳು ಬಿರುಸಿನಿಂದ ನಡೆಯುತ್ತಿವೆ.

ಕೆಲವು ಒತ್ತೆಯಾಳುಗಳನ್ನು ಮುಕ್ತಗೊಳಿಸುವ ಒಪ್ಪಂದದ ಮೂಲಕ ತಾತ್ಕಾಲಿಕ ಕದನ ವಿರಾಮಕ್ಕೆ ಮುಂದಾಗಬಹುದು. ಇದು ಪ್ರಾಯೋಗಿಕ ಸಮಸ್ಯೆಗಳ ಮೇಲೆ ಅವಲಂಬಿತವಾಗಿದೆ ಎಂದು ಕತಾರ್‌ನ ಪ್ರಧಾನ ಮಂತ್ರಿ ಭಾನುವಾರ ಹೇಳಿದ್ದರು. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಒತ್ತೆಯಾಳುಗಳನ್ನು ಮುಕ್ತಗೊಳಿಸುವ ಒಪ್ಪಂದವು ಹತ್ತಿರದಲ್ಲಿದೆ ಎಂದು ಭಾವಿಸಿರುವುದಾಗಿ ಸೋಮವಾರ ಹೇಳಿದ್ದರು.

ಒಂದು ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಐದು ದಿನಗಳ ಕದನ ವಿರಾಮವನ್ನು ಒಳಗೊಂಡಿದೆ. ಇದು ಭೂ ಸೇನಾ ದಾಳಿಗೆ ವಿರಾಮ ಮತ್ತು ದಕ್ಷಿಣ ಗಾಜಾದ ಮೇಲೆ ಇಸ್ರೇಲಿ ವಾಯು ಕಾರ್ಯಾಚರಣೆಗಳಿಗೆ ಮಿತಿ ಹೇರುವುದನ್ನು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ‘ಎಎಫ್​ಪಿ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾವನ್ನು ನಿಷೇಧಿಸಿದ ಇಸ್ರೇಲ್, ಮುಂಬೈ ದಾಳಿಯೇ ಕಾರಣ

ಪ್ರತಿಯಾಗಿ, ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದಿಗಳು, ಪ್ರತ್ಯೇಕ ಪ್ಯಾಲೇಸ್ಟಿನಿಯನ್ ಗುಂಪು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿರುವ 50 ರಿಂದ 100 ಕೈದಿಗಳನ್ನು ಬಿಡುಗಡೆ ಮಾಡಬೇಕಾಗಿದೆ. ಒತ್ತೆಯಾಳುಗಳಲ್ಲಿ ಇಸ್ರೇಲಿ ನಾಗರಿಕರು ಮತ್ತು ಇತರ ರಾಷ್ಟ್ರಗಳ ಬಂಧಿತರು ಒಳಗೊಂಡಿರುತ್ತಾರೆ, ಆದರೆ ಸೇನಾ ಸಿಬ್ಬಂದಿ ಇಲ್ಲ.

ಪ್ರಸ್ತಾವಿತ ಒಪ್ಪಂದದ ಅಡಿಯಲ್ಲಿ, ಮಹಿಳೆಯರು ಮತ್ತು ಮಕ್ಕಳು ಒಳಗೊಂಡಂತೆ ಸುಮಾರು 300 ಪ್ಯಾಲೆಸ್ಟೀನಿಯನ್ನರನ್ನು ಇಸ್ರೇಲಿ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ. ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂದು ಅಮೆರಿಕದ ಶ್ವೇತ ಭವನ ಕೂಡ ಹೇಳಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ