ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾವನ್ನು ನಿಷೇಧಿಸಿದ ಇಸ್ರೇಲ್, ಮುಂಬೈ ದಾಳಿಯೇ ಕಾರಣ

Lashkar-e-Taiba, LeT ban: ಇಸ್ರೇಲ್​​, ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (Lashkar-e-Taiba)ವನ್ನು ನಿಷೇಧಿಸಿದೆ. ನವೆಂಬರ್​​​ 26ರಂದು ಭಾರತದ ಮುಂಬೈ ಹೊಟೇಲ್​​​ ಮೇಲೆ ದಾಳಿ ಮಾಡಿದ ಈ ಸಂಘಟನೆಯನ್ನು ನಿಷೇಧಿಸಲು ಇಸ್ರೇಲ್​​​ ಮುಂದಾಗಿದೆ. ಇದರ ಜತೆಗೆ ಲಷ್ಕರ್-ಎ-ತೊಯ್ಬಾವನ್ನು ಇಸ್ರೇಲ್​​ ತನ್ನ ಭಯೋತ್ಪಾದನ ಪಟ್ಟಿಯಲ್ಲಿ ಸೇರಿಸಿದ್ದು, ಈ ಬಗ್ಗೆ ಇಸ್ರೇಲ್​​​ ರಾಯಭಾರಿ ಕಚೇರಿ ಒಂದು ವರದಿಯನ್ನು ಭಾರತ ಸರ್ಕಾರಕ್ಕೆ ನೀಡಿದೆ. ಲಷ್ಕರ್-ಎ-ತೈಬಾವನ್ನು ಇಸ್ರೇಲಿ ಕಾನೂನುಬಾಹಿರ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.

ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾವನ್ನು ನಿಷೇಧಿಸಿದ ಇಸ್ರೇಲ್, ಮುಂಬೈ ದಾಳಿಯೇ ಕಾರಣ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Nov 21, 2023 | 2:32 PM

ಇಸ್ರೇಲ್​​, ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (Lashkar-e-Taiba)ವನ್ನು ನಿಷೇಧಿಸಿದೆ. ನವೆಂಬರ್​​​ 26ರಂದು ಭಾರತದ ಮುಂಬೈ ಹೊಟೇಲ್​​​ ಮೇಲೆ ದಾಳಿ ಮಾಡಿದ ಈ ಸಂಘಟನೆಯನ್ನು ನಿಷೇಧಿಸಲು ಇಸ್ರೇಲ್​​​ ಮುಂದಾಗಿದೆ. ಇದರ ಜತೆಗೆ ಲಷ್ಕರ್-ಎ-ತೊಯ್ಬಾವನ್ನು ಇಸ್ರೇಲ್​​ ತನ್ನ ಭಯೋತ್ಪಾದನ ಪಟ್ಟಿಯಲ್ಲಿ ಸೇರಿಸಿದ್ದು, ಈ ಬಗ್ಗೆ ಇಸ್ರೇಲ್​​​ ರಾಯಭಾರಿ ಕಚೇರಿ ಒಂದು ವರದಿಯನ್ನು ಭಾರತ ಸರ್ಕಾರಕ್ಕೆ ನೀಡಿದೆ. ಲಷ್ಕರ್-ಎ-ತೈಬಾವನ್ನು ಇಸ್ರೇಲಿ ಕಾನೂನುಬಾಹಿರ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಇದರ ಬಗ್ಗೆ ಭಾರತ ಸರ್ಕಾರವು ಒಂದು ನಿರ್ಧಾರಕ್ಕೆ ಬರಬೇಕು ಎಂದು ಹೇಳಿದೆ. ಈ ಕ್ರಮಕ್ಕೆ ಭಾರತದ ಯಾವುದೇ ಒತ್ತಡ ಇಲ್ಲ, ನಾವೇ ಸ್ವತಃ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನವೆಂಬರ್​​​ 26ರಂದು ಭಾರತದ ಮುಂಬೈ ಮೇಲೆ ದಾಳಿ ಮಾಡಿ, ಅನೇಕ ಭಾರತೀಯರ ಹತ್ಯೆ ಕಾರಣವಾಗಿದ್ದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾವನ್ನು ನಿಷೇಧಿಸಲು ಭಾರತದ ಕೂಡ ನಮ್ಮ ಜತೆಗೆ ಇದೆ ಎಂದು ಹೇಳಿದೆ.

ಈಗಾಗಲೇ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾವನ್ನು ನಿಷೇಧ ಮಾಡಲು ಎಲ್ಲ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಔಪಚಾರಿಕ ಕಾರ್ಯವಿಧಾನವನ್ನು ತಯಾರಿಸಲಾಗಿದೆ ಎಂದು ಇಸ್ರೇಲ್​​​ ಹೇಳಿದೆ. ಜತೆಗೆ ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಪ್ರತಿಕಾ ಪ್ರಕಟನೆಯನ್ನು ಕಳುಹಿಸಲಾಗಿದೆ ಎಂದು ಹೇಳಿದೆ.

ಇಸ್ರೇಲ್ ತನ್ನ ಗಡಿಯೊಳಗೆ ಅಥವಾ ಅದರ ಸುತ್ತಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ಮಾತ್ರ ನಿಷೇಧಿಸಲು ಪಟ್ಟಿ ಮಾಡುತ್ತದೆ. ಆದರೆ ಇದೇ ಮೊದಲು ವಿದೇಶಿ ರಾಷ್ಟ್ರಕ್ಕೆ ತೊಂದರೆ ನೀಡಿದ ಸಂಘಟನೆಯನ್ನು ಪಟ್ಟಿ ಮಾಡಿದೆ. ಇನ್ನು ಈ ನಿಷೇಧವನ್ನು ನವೆಂಬರ್​​ 26ರಂದು ಮಾಡಲಿದೆ. ಈ ದಿನ ಭಾರತಕ್ಕೆ ಅತಂತ್ಯ ಕರಾಳ ದಿನವಾಗಿದ್ದು, ಇದಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಇಸ್ರೇಲ್ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಮಂತ್ರಿ ಹೇಳಿದ್ದಾರೆ.

ಇದನ್ನೂ ಓದಿ: ಶೋಪಿಯಾನ್​ನಲ್ಲಿ ಲಷ್ಕರ್-ಎ-ತೊಯ್ಬಾದ ಇಬ್ಬರು ಉಗ್ರರ ಎನ್​ಕೌಂಟರ್; ಶಸ್ತ್ರಾಸ್ತ್ರಗಳು ವಶಕ್ಕೆ

ನವೆಂಬರ್​​ 26ರಂದು ಭಾರತದ ಮುಂಬೈನಲ್ಲಿರುವ ತಾಜ್​​​​​ ಹೊಟೇಲ್​​ ಮೇಲೆ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರರು ದಾಳಿ ಮಾಡಿದ್ದಾರೆ. ಇದರಿಂದ ಅನೇಕ ಭಾರತೀಯರ ಹತ್ಯೆಗೆ ಕಾರಣವಾಗಿದೆ. ಇಂತಹ ಕೃತ್ಯವನ್ನು ಎಲ್ಲ ದೇಶಗಳು ಖಂಡಿಸಬೇಕು ಅದಕ್ಕಾಗಿ ಈ ಸಂಘಟನೆಯನ್ನು ನಿಷೇಧ ಮಾಡಲು ಮುಂದಾಗಿದ್ದೇವೆ. ನಾವು ಕೂಡ ಭಾರತದ ಜತೆಗೆ ಇದ್ದೇವೆ ಎಂಬುದನ್ನು ಇಸ್ರೇಲ್​​ ಮತ್ತೊಮ್ಮೆ ಸಾಬೀತು ಪಡಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:27 pm, Tue, 21 November 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್