ಇರಾನ್ ಜನರಲ್ ಖಾಸೆಮ್ ಸುಲೇಮಾನಿ ಸಮಾಧಿ ಬಳಿ ಅವಳಿ ಸ್ಫೋಟ; 103 ಜನರು ಸಾವು
ಸಾಹೇಬ್ ಅಲ್-ಜಮಾನ್ ಮಸೀದಿ ಬಳಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಸಾಹೇಬ್ ಅಲ್-ಜಮಾನ್ ಮಸೀದಿಯ ಬಳಿ ಎರಡನೇ ಸ್ಫೋಟದ ಸದ್ದು ಕೇಳಿಸಿತು" ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ. . ಯುಎಸ್ ಡ್ರೋನ್ ದಾಳಿಯಲ್ಲಿ ದೇಶದ ಉನ್ನತ ಕಮಾಂಡರ್ ಖಾಸೆಮ್ ಮೃತಪಟ್ಟಿದ್ದುಅವರ ಪುಣ್ಯ ಸ್ಮರಣೆ ಆಚರಿಸಲು ಜನರು ಸಮಾರಂಭವನ್ನು ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ತೆಹ್ರಾನ್ ಜನವರಿ 03: ಆಗ್ನೇಯ ನಗರವಾದ ಕೆರ್ಮನ್‌ನಲ್ಲಿರುವ (Kerman) ಇರಾನ್ (Iran) ಜನರಲ್ ಖಾಸೆಮ್ ಸುಲೇಮಾನಿ (General Qasem Soleimani)ಅವರ ಸಮಾಧಿ ಬಳಿ ಏಕಕಾಲದಲ್ಲಿ ಸಂಭವಿಸಿದ ಎರಡು ಸ್ಫೋಟಗಳಲ್ಲಿ 103 ಜನರು ಸಾವಿಗೀಡಾಗಿದ್ದು, 141 ಮಂದಿ ಗಾಯಗೊಂಡಿದ್ದಾರೆ. ಯುಎಸ್ ಡ್ರೋನ್ ದಾಳಿಯಲ್ಲಿ ದೇಶದ ಉನ್ನತ ಕಮಾಂಡರ್ ಖಾಸೆಮ್ ಮೃತಪಟ್ಟಿದ್ದು, ಅವರ ಪುಣ್ಯ ಸ್ಮರಣೆ ಆಚರಿಸಲು ಜನರು ಸಮಾರಂಭವನ್ನು ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಸಾಹೇಬ್ ಅಲ್-ಜಮಾನ್ ಮಸೀದಿ ಬಳಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಸಾಹೇಬ್ ಅಲ್-ಜಮಾನ್ ಮಸೀದಿಯ ಬಳಿ ಎರಡನೇ ಸ್ಫೋಟದ ಸದ್ದು ಕೇಳಿಸಿತು” ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ. ನೂರ್‌ನ್ಯೂಸ್ ಪ್ರಕಾರ “ಸ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ ಹಲವಾರು ಗ್ಯಾಸ್ ಕ್ಯಾನಿಸ್ಟರ್‌ಗಳು ಸ್ಫೋಟಗೊಂಡಿವೆ. ಸ್ಥಳೀಯ ಅಧಿಕಾರಿಯೊಬ್ಬರು “ಸ್ಫೋಟಗಳು ಗ್ಯಾಸ್ ಸಿಲಿಂಡರ್‌ಗಳಿಂದ ಸಂಭವಿಸಿವೆಯೇ ಅಥವಾ ಭಯೋತ್ಪಾದಕ ದಾಳಿಯಿಂದ ಉಂಟಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ” ಎಂದು ಹೇಳಿರುವುದಾಗಿ ಇರಾನ್ ಸರ್ಕಾರಿ ಮಾಧ್ಯಮವು ಉಲ್ಲೇಖಿಸಿದೆ.
ಸುಲೈಮಾನಿ ಅವರ ಪುಣ್ಯ ತಿಥಿ ಗುರುತಿಸಲು ನೂರಾರು ಇರಾನಿಯನ್ನರು ಜಮಾಯಿಸಿದ ಸಮಾರಂಭದಲ್ಲಿ ಬಾಂಬ್ ಸ್ಫೋಟವಾಗಿದ್ದು, ರೆಡ್ ಕ್ರೆಸೆಂಟ್ ರಕ್ಷಕರು ಗಾಯಗೊಂಡ ಜನರಿಗೆ ಸಹಾಯ ಮಾಡುತ್ತಿರುವುದನ್ನು ಸ್ಟೇಟ್ ಟಿವಿ ತೋರಿಸಿದೆ. ಕನಿಷ್ಠ 50 ಜನರು ಗಾಯಗೊಂಡಿದ್ದಾರೆ ಎಂದು ಕೆಲವು ಇರಾನ್ ಸುದ್ದಿ ಸಂಸ್ಥೆಗಳು ತಿಳಿಸಿವೆ.
ಇದನ್ನೂ ಓದಿ: ಇರಾನ್ ಮಾದಕವಸ್ತು ವ್ಯಸನ ಮುಕ್ತಿ ಕೇಂದ್ರದಲ್ಲಿ ಶುಕ್ರವಾರ ಭಾರೀ ಅಗ್ನಿ ದುರಂತ: 32 ಮಂದಿ ಸಾವು
ನಮ್ಮ ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ಗಾಯಗೊಂಡವರನ್ನು ಸ್ಥಳಾಂತರಿಸುತ್ತಿವೆ. ಆದರೆ ಜನಸಂದಣಿಯಿಂದಾಗಿ ಸಂಚಾರ ಸುಗಮ ಆಗಿಲ್ಲ ಎಂದು ಎಂದು ಕರ್ಮನ್ ಪ್ರಾಂತ್ಯದ ರೆಡ್ ಕ್ರೆಸೆಂಟ್ ಮುಖ್ಯಸ್ಥ ರೆಜಾ ಫಲ್ಲಾಹ್ ಸ್ಟೇಟ್ ಟಿವಿಗೆ ತಿಳಿಸಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:04 pm, Wed, 3 January 24