Atmanirbharta word in oxford languages 2020 ಆತ್ಮನಿರ್ಭರತಾ ಪದ ಆಕ್ಸ್​ಫರ್ಡ್ ಭಾಷಾ ಪಟ್ಟಿಗೆ ಸೇರ್ಪಡೆಯಾಯ್ತು!

|

Updated on: Feb 02, 2021 | 6:33 PM

Atmanirbharta word in oxford languages 2020 ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲೇ ಉತ್ಪನ್ನಗಳನ್ನು ತಯಾರಿಸುವಂತೆ ಕರೆ ನೀಡಲು ಸಾರ್ವಜನಿಕವಾಗಿ ಬಳಸಿದ್ದ ಆತ್ಮನಿರ್ಭರ್ ನಂತರದ ದಿನಗಳಲ್ಲಿ ಬಹುಬೇಗ ಜನಪ್ರಿಯವಾಗಿತ್ತು.

Atmanirbharta word in oxford languages 2020 ಆತ್ಮನಿರ್ಭರತಾ ಪದ ಆಕ್ಸ್​ಫರ್ಡ್ ಭಾಷಾ ಪಟ್ಟಿಗೆ ಸೇರ್ಪಡೆಯಾಯ್ತು!
Follow us on

ಆಕ್ಸ್​ಫರ್ಡ್ ಭಾಷೆಗಳ 2020ರ ಪಟ್ಟಿಗೆ ಹಿಂದಿ ವಿಭಾಗದಿಂದ ‘ಆತ್ಮನಿರ್ಭರತಾ’ ಪದ ಆಯ್ಕೆಯಾಗಿದೆ. ಆಕ್ಸ್ಫರ್ಡ್​ನ ಹಿಂದಿ ಭಾಷಾ ತಜ್ಞರ ಸಮಿತಿ ಆತ್ಮನಿರ್ಭರತಾ ಪದವನ್ನು ಸೂಚಿಸಿದ್ದು, ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಪದವಾಗಿ ಇದು ಹೊರಹೊಮ್ಮಿದೆ. ಆದರೆ, ಆಕ್ಸ್​ಫರ್ಡ್ ಶಬ್ದಕೋಶಕ್ಕೂ ಈ ಪದ ಸೇರ್ಪಡೆಯಾಗಲಿದೆ ಎಂದು ಹೇಳಲಾಗದು.

Atmanirbharta word in oxford languages  2020 ಸಾಂಸ್ಕೃತಿಕ ಹಿನ್ನೆಲೆಯೂ ಇರುವ ಆತ್ಮನಿರ್ಭರತಾ ಪದದ ಸಂಪೂರ್ಣ ಕಳೆದ ವರ್ಷದ ವಿದ್ಯಮಾನಗಳನ್ನು ಸಶಕ್ತವಾಗಿ ಪ್ರತಿಬಿಂಬಿಸುತ್ತದೆ. ಹೀಗಾಗಿ ಈ ಪದವನ್ನು ಆಯ್ಕೆ ಮಾಡಲಾಗಿದೆ ಎಂದು ತಜ್ಞರ ಸಮಿತಿ ತಿಳಿಸಿದೆ. ಕೊರೊನಾ ಪಿಡುಗಿನ ಕಾಲದಲ್ಲಿ ಭಾರತದಲ್ಲೇ ತಯಾರಿಸಿದ ಲಸಿಕೆಗಳ ಪ್ರಚಾರದಲ್ಲೂ ಆತ್ಮನಿರ್ಭರ್ ಪದವನ್ನು ಹೆಚ್ಚಾಗಿ ಬಳಸಲಾಗಿತ್ತು. ಕೃತಿಕಾ ಅಗರ್ವಾಲ್, ಪೂನಮ್ ನಿಗಮ್ ಸಹಾಯ್, ಇಮೋಜೆನ್ ಫೊಕ್ಸ್​ವೆಲ್​ರನ್ನು ಒಳಗೊಂಡ ಹಿಂದಿ ಭಾಷಾ ತಜ್ಞರ ಸಮಿತಿ ಈ ಪದವನ್ನು ಆಯ್ಕೆಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲೇ ಉತ್ಪನ್ನಗಳನ್ನು ತಯಾರಿಸುವಂತೆ ಕರೆ ನೀಡಲು ಸಾರ್ವಜನಿಕವಾಗಿ ಬಳಸಿದ್ದ ಆತ್ಮನಿರ್ಭರತಾ ನಂತರದ ದಿನಗಳಲ್ಲಿ ಬಹುಬೇಗ ಜನಪ್ರಿಯವಾಗಿತ್ತು. ಸ್ವದೇಶದಲ್ಲೇ ಉತ್ಪನ್ನಗಳನ್ನು ತಯಾರಿಸುವ ಪ್ರಕ್ರಿಯೆಗೆ ದೇಶದ ಹಲವು ಉದ್ಯಮಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಆತ್ಮನಿರ್ಭರ ಭಾರತ್: ಉದ್ಯೋಗ ಅವಕಾಶ ಹೆಚ್ಚಳಕ್ಕೆ ಕೇಂದ್ರದ ಯೋಜನೆ

Published On - 6:24 pm, Tue, 2 February 21