ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಏಳು ಅಂತಸ್ತಿನ ಕಟ್ಟಡದಿಂದ ಬಿದ್ದ 20 ವರ್ಷದ ಯುವತಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾಳೆ. ಆದರೆ, ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು News.com.au ವರದಿ ಮಾಡಿದೆ. ಟೊಮಿನಿ ರೀಡ್ ಮೆಲ್ಬೋರ್ನ್‌ನ ಆಲ್ಫ್ರೆಡ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಮುಂಜಾನೆ 1.30ಕ್ಕೆ ಘಟನೆ ನಡೆದಿದ್ದು, ಈ ಕುರಿತು ಎಮ್‌ಎಸ್ ರೀಡ್ ಅವರ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಲಾಗಿತ್ತು.
ಆಸ್ಪತ್ರೆಯಲ್ಲಿ ಯುವತಿಗೆ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಆಕೆ ಬದುಕುಳಿದಿರುವುದೇ ಪವಾಡ ಎಂದು ವೈದ್ಯರು ಹೇಳಿದ್ದಾರೆ.
ಆದಾಗ್ಯೂ, ಆಕೆಯ ಚೇತರಿಕೆಯ ಹಾದಿಯು ದೀರ್ಘ ಮತ್ತು ಸವಾಲಿನದಾಗಿರುತ್ತದೆ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ. ರೀಡ್ ಅವರ ತಂದೆ ಬ್ರಾಡ್ ಅವರು ಅಪಘಾತದ ಸುದ್ದಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಆಕೆ ಹೋರಾಟಗಾರ್ತಿ ಆಕೆಯಲ್ಲಿರುವ ದೃಢ ಮನಸ್ಸು ಛಲವೇ ಆಕೆಯನ್ನು ಮೊದಲಿನಂತೆ ಮಾಡಲು ಸಹಕಾರಿಯಾಗುತ್ತದೆ ಎಂದು ಆಕೆಯ ತಂದೆ ಹೇಳಿದ್ದಾರೆ.
ಮತ್ತಷ್ಟು ಓದಿ: Bengaluru: ಬೆಂಗಳೂರಿನಲ್ಲಿ ಯುನಿಟಿ ಕಟ್ಟಡದಿಂದ ಬಿದ್ದು ಮಹಿಳೆ ಸಾವು; ಆತ್ಮಹತ್ಯೆ ಶಂಕೆ
ಟೊಮಿನಿ ರೀಡ್ ಅವರ ಚಿಕ್ಕಮ್ಮ, ಕಿರ್ಸ್ಟಿನ್ ಸ್ಮಾಲ್, ಕುಟುಂಬವನ್ನು ಬೆಂಬಲಿಸಲು GoFundMe ಪುಟವನ್ನು ರಚಿಸಿದ್ದಾರೆ. ಕುಟುಂಬವು 43,500 ಡಾಲರ್ ಸಂಗ್ರಹಿಸಿದೆ, 50,000 ಡಾಲರ್ ಗುರಿಯ ಸಮೀಪದಲ್ಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ