ಮೋದಿ ಬಹಳ ಆಧ್ಮಾತ್ಮಿಕ ವ್ಯಕ್ತಿ; ಆಸ್ಟ್ರಿಯಾದ ನೊಬೆಲ್ ವಿಜೇತ ಭೌತಶಾಸ್ತ್ರಜ್ಞ ಆಂಟನ್ ಝೈಲಿಂಗರ್ ಶ್ಲಾಘನೆ

|

Updated on: Jul 10, 2024 | 10:33 PM

ಆಸ್ಟ್ರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಆಸ್ಟ್ರಿಯಾದ ನೊಬೆಲ್ ಪ್ರಶಸ್ತಿ ವಿಜೇತ ಆಂಟನ್ ಝೈಲಿಂಗರ್ ಅವರನ್ನು ಭೇಟಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಬಹಳ ಆಧ್ಯಾತ್ಮಿಕ ವ್ಯಕ್ತಿ ಎಂದು ಆಂಟನ್ ಝೈಲಿಂಗರ್ ಅಭಿಪ್ರಾಯಪಟ್ಟಿದ್ದಾರೆ. ಹಾಗೇ ಪ್ರಧಾನಿ ಮೋದಿ ಅವರಿಗೆ ಆಂಟನ್ ತಮ್ಮ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮೋದಿ ಬಹಳ ಆಧ್ಮಾತ್ಮಿಕ ವ್ಯಕ್ತಿ; ಆಸ್ಟ್ರಿಯಾದ ನೊಬೆಲ್ ವಿಜೇತ ಭೌತಶಾಸ್ತ್ರಜ್ಞ ಆಂಟನ್ ಝೈಲಿಂಗರ್ ಶ್ಲಾಘನೆ
ಆಂಟನ್ ಝೈಲಿಂಗರ್ - ಪ್ರಧಾನಿ ನರೇಂದ್ರ ಮೋದಿ
Follow us on

ವಿಯೆನ್ನಾ: ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮಾತುಕತೆ ನಡೆಸಿದ ನೊಬೆಲ್ ಪ್ರಶಸ್ತಿ ವಿಜೇತ ಆಸ್ಟ್ರಿಯಾದ ಭೌತಶಾಸ್ತ್ರಜ್ಞ ಆಂಟನ್ ಝೈಲಿಂಗರ್ ತಮ್ಮ ನಡುವಿನ ಸಂವಹನದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಕ್ವಾಂಟಮ್ ಮಾಹಿತಿ ಮತ್ತು ಕ್ವಾಂಟಮ್ ತಂತ್ರಜ್ಞಾನಗಳು ಮತ್ತು ಆಧ್ಯಾತ್ಮಿಕತೆಯ ಸಾಧ್ಯತೆಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಪ್ರಧಾನಿ ಮೋದಿಯವರು ತುಂಬಾ ಆತ್ಮೀಯ ವ್ಯಕ್ತಿ ಎಂದು ನನಗೆ ಅನಿಸಿತು ಎಂದು ಹೇಳಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರಿಗೆ ಆಂಟನ್ ತಮ್ಮ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಫೋಟೋಗಳನ್ನು ಪಿಎಂ ನರೇಂದ್ರ ಮೋದಿ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ನರೇಂದ್ರ ಮೋದಿ, ನೊಬೆಲ್ ಪ್ರಶಸ್ತಿ ವಿಜೇತ ಆಂಟನ್ ಝೈಲಿಂಗರ್ ಅವರೊಂದಿಗಿನ ಭೇಟಿ ಬಹಳ ಉತ್ತಮವಾಗಿತ್ತು. ಕ್ವಾಂಟಮ್ ಮೆಕ್ಯಾನಿಕ್ಸ್‌ನಲ್ಲಿ ಅವರ ಕಾರ್ಯ ಅಮೋಘವಾದುದು. ಅದು ಸಂಶೋಧಕರು ಮತ್ತು ನಾವೀನ್ಯತೆಗಳ ಪೀಳಿಗೆಗೆ ಮಾರ್ಗದರ್ಶನ ನೀಡುತ್ತದೆ. ನನಗೆ ಅವರ ಜ್ಞಾನ ಮತ್ತು ಕಲಿಕೆಯ ಉತ್ಸಾಹವು ಸ್ಪಷ್ಟವಾಗಿ ಗೋಚರಿಸಿತು. ನಾನು ರಾಷ್ಟ್ರೀಯ ಕ್ವಾಂಟಮ್ ಮಿಷನ್‌ನಂತಹ ಭಾರತದ ಪ್ರಯತ್ನಗಳ ಬಗ್ಗೆ ಮತ್ತು ತಂತ್ರಜ್ಞಾನ ಮತ್ತು ನಾವೀನ್ಯತೆಗಾಗಿ ನಾವು ಪರಿಸರ ವ್ಯವಸ್ಥೆಯನ್ನು ಹೇಗೆ ಪೋಷಿಸುತ್ತಿದ್ದೇವೆ ಎಂಬುದರ ಕುರಿತು ಅವರೊಂದಿಗೆ ಕೆಲಕಾಲ ಚರ್ಚಿಸಿದೆ ಎಂದು ತಿಳಿಸಿದ್ದಾರೆ.

ರಷ್ಯಾದಿಂದ ವಾಪಸಾಗುತ್ತಿರುವ ಆಸ್ಟ್ರಿಯಾದ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ನೊಬೆಲ್ ಪ್ರಶಸ್ತಿ ವಿಜೇತ ಆಸ್ಟ್ರಿಯಾದ ಭೌತಶಾಸ್ತ್ರಜ್ಞ ಆಂಟನ್ ಝೈಲಿಂಗರ್ ಅವರೊಂದಿಗೆ ಸಂವಾದ ನಡೆಸಿದರು. ಪ್ರಧಾನಿ ಮೋದಿಯವರನ್ನು ಭೇಟಿಯಾದ ನಂತರ, ನೊಬೆಲ್ ಪ್ರಶಸ್ತಿ ಪುರಸ್ಕೃತರು ಪ್ರಧಾನಿಯವರು ಅತ್ಯಂತ ಆಧ್ಯಾತ್ಮಿಕ ವ್ಯಕ್ತಿ ಎಂದು ಹೊಗಳಿದರು ಮತ್ತು ಇತರ ವಿಶ್ವ ನಾಯಕರಿಗೂ ಈ ವೈಶಿಷ್ಟ್ಯ ಇರಬೇಕು ಎಂದು ಹೇಳಿದರು.

ಇದನ್ನೂ ಓದಿ: ಆಸ್ಟ್ರಿಯಾದಲ್ಲಿ ವಂದೇ ಮಾತರಂ ಗೀತೆಯೊಂದಿಗೆ ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ವಿಜಯ್ ಉಪಾಧ್ಯಾಯ ಯಾರು?

“ನಾವು ಕ್ವಾಂಟಮ್ ಮಾಹಿತಿ ಮತ್ತು ಕ್ವಾಂಟಮ್ ತಂತ್ರಜ್ಞಾನಗಳು ಮತ್ತು ಆಧ್ಯಾತ್ಮಿಕತೆಯ ಸಾಧ್ಯತೆಗಳನ್ನು ಚರ್ಚಿಸಿದ್ದೇವೆ. ಪ್ರಧಾನಿ ಮೋದಿ ಅತ್ಯಂತ ಆಧ್ಯಾತ್ಮಿಕ ವ್ಯಕ್ತಿ ಎಂದು ನಾನು ಅನುಭವವಾಯಿತು. ಇದು ಇಂದು ವಿಶ್ವದ ಅನೇಕ ನಾಯಕರು ಹೊಂದಿರಬೇಕಾದ ವೈಶಿಷ್ಟ್ಯವಾಗಿದೆ ಎಂದು ನನಗೆ ಅನಿಸುತ್ತದೆ” ಎಂದು ಆಸ್ಟ್ರಿಯನ್ ಭೌತಶಾಸ್ತ್ರಜ್ಞ ಆಂಟನ್ ಝೈಲಿಂಗರ್ ಹೇಳಿದ್ದಾರೆ.

“ಇದು ಬಹಳ ಆಹ್ಲಾದಕರ ಚರ್ಚೆಯಾಗಿದೆ. ನಾವು ಆಧ್ಯಾತ್ಮಿಕ ವಿಷಯಗಳು, ಕ್ವಾಂಟಮ್ ಮಾಹಿತಿ, ಕ್ವಾಂಟಮ್ ತಂತ್ರಜ್ಞಾನ, ಕ್ವಾಂಟಮ್ ಭೌತಶಾಸ್ತ್ರದ ಮೂಲಭೂತ ಮೂಲಭೂತ ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ ಮತ್ತು ಮಾತನಾಡಿದ್ದೇವೆ. ಪ್ರತಿಭಾನ್ವಿತ ಯುವಕರು ಅವರ ಆಲೋಚನೆಗಳನ್ನು ಭಾರತದಲ್ಲಿ ಅನುಸರಿಸಲು ನೀವು ಬೆಂಬಲಿಸುತ್ತೀರಿ. ಭಾರತ ದೈತ್ಯಾಕಾರದ, ಆಧ್ಯಾತ್ಮಿಕ ಮತ್ತು ತಾಂತ್ರಿಕ ಗತಕಾಲವಾಗಿದೆ” ಎಂದು ಆಂಟನ್ ಝೈಲಿಂಗರ್ ಹೇಳಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವ; ಪ್ರಶಸ್ತಿಯನ್ನು ಭಾರತೀಯರಿಗೆ ಅರ್ಪಿಸಿದ ಪಿಎಂ

ಈ ನಡುವೆ, ಪ್ರಧಾನಮಂತ್ರಿ ಮೋದಿ ಇಂದು ಮುಂಜಾನೆ ಆಸ್ಟ್ರಿಯಾದ ಅಧ್ಯಕ್ಷ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ಅವರನ್ನು ಭೇಟಿ ಮಾಡಿದರು ಮತ್ತು ಉಭಯ ನಾಯಕರು ಪರಿಸರ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವುದು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳ ಕುರಿತು ಚರ್ಚಿಸಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:30 pm, Wed, 10 July 24