2019ರಲ್ಲಿ ಬಾಲಾಕೋಟ್ನಲ್ಲಿ ನಡೆದ ಏರ್ ಸ್ಟ್ರೈಕ್ ಬಳಿಕ ಪಾಕಿಸ್ತಾನವು ಭಾರತದ ಮೇಲೆ ದಾಳಿ ನಡೆಸಲು ಅಣ್ವಸ್ತ್ರ ಸಿದ್ಧಪಡಿಸಿತ್ತು ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರು ಬರೆದಿರುವ ‘Never Give an Inch’ ಎನ್ನುವ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಬಾಲಾಕೋಟ್ ದಾಳಿಯ ನಂತರ ಪಾಕಿಸ್ತಾನವು ಭಾರತದ ಮೇಲೆ ಪರಮಾಣು ದಾಳಿಗೆ ತಯಾರಿ ನಡೆಸುತ್ತಿದೆ ಎಂದು ಆ ಸಮಯದಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದರು ಎಂದು ಮೈಕ್ ಪಾಂಪಿಯೋ ಹೇಳಿದ್ದಾರೆ. ಭಾರತವೂ ಅದಕ್ಕೆ ಪ್ರತ್ಯುತ್ತರ ನೀಡಲು ಸಿದ್ಧವಾಗಿದೆ ಎಂದಿದ್ದರು.
ಮಂಗಳವಾರ ಬಿಡುಗಡೆಯಾದ ‘ನೆವರ್ ಗಿವ್ ಆನ್ ಇಂಚ್: ಫೈಟಿಂಗ್ ಫಾರ್ ದಿ ಅಮೇರಿಕಾ ಐ ಲವ್’ ಪುಸ್ತಕದಲ್ಲಿ ಮೈಕ್ ಪಾಂಪಿಯೊ ಅವರು ಆ ದಿನ ಯುಎಸ್ ಮತ್ತು ಉತ್ತರ ಕೊರಿಯಾ ನಡುವಿನ ಶೃಂಗಸಭೆಗಾಗಿ ಹನೋಯ್‌ನಲ್ಲಿದ್ದರು.
ರಾತ್ರಿಯಿಡೀ, ಅವರು ಮತ್ತು ಅವರ ತಂಡವು ಭಾರತ ಮತ್ತು ಪಾಕಿಸ್ತಾನದ ಸರ್ಕಾರಗಳೊಂದಿಗೆ ಎರಡು ದೇಶಗಳ ನಡುವೆ ಪರಮಾಣು ಯುದ್ಧವನ್ನು ತಡೆಯಲು ಮಾತುಕತೆ ನಡೆಸಿತು.
ಪಾಂಪಿಯೋ ಪ್ರಕಾರ 2019ರ ಫೆಬ್ರವರಿ 27-28ರಂದು ನಡುವೆ ಬೆಳವಣಿಗೆ ಇದು. ಅವರು ಅಮೆರಿಕ-ಉತ್ತರ ಕೊರಿಯಾ ಶೃಂಗಸಭೆಗಾಗಿ ಹನೋಯಿಯಲ್ಲಿದ್ದಾಗ ಈ ವಿಚಾರ ಬೆಳಕಿಗೆ ಬಂದಿತ್ತು.
ಈ ಬಿಕ್ಕಟ್ಟನ್ನು ಶಮನಗೊಳಿಸಲು ರಾತ್ರಿಯಿಡೀ ನವದೆಹಲಿ ಮತ್ತು ಇಸ್ಲಾಮಾಬಾದ್ ಎರಡೂ ಕಡೆಗಳಲ್ಲಿ ಕಸರತ್ತು ನಡೆದಿದ್ದವು. ಫೆಬ್ರವರಿ 2019ರಲ್ಲಿ ಭಾರತ-ಪಾಕಿಸ್ತಾನದ ಪೈಪೋಟಿಯು ಪರಮಾಣು ದಹನಕ್ಕೆ ಹತ್ತಿರವಾಗುತ್ತಿತ್ತು ಎಂಬುದು ಜಗತ್ತಿಗೆ ತಿಳಿದಿರಲಿಲ್ಲ.
2019ರ ಫೆಬ್ರವರಿಯಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಪುಲ್ವಾಮಾದಲ್ಲಿ ದಾಳಿ ನಡೆಸಿದ್ದ ಕಾರಣ ಭಾರತ 40 ಸಿಆರ್ಪಿಎಫ್ ಯೋಧರನ್ನು ಕಳೆದುಕೊಂಡಿತ್ತು. ಪಾಂಪಿಯೋ ಅವರ ಹೇಳಿಕೆಗೆ ಭಾರತದ ವಿದೇಶಾಂಗ ಸಚಿವಾಲಯ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ ಭಯಾನಕ ಯುದ್ಧವನ್ನು ತಪ್ಪಿಸಲು ನಾವು ಆ ರಾತ್ರಿ ಮಾಡಿದ್ದನ್ನು ಬೇರೆ ಯಾವ ರಾಷ್ಟ್ರವೂ ಮಾಡಲಾರದು. ಎಲ್ಲಾ ರಾಜತಾಂತ್ರಿಕತೆಯಂತೆ ಸಮಸ್ಯೆಯ ಮೇಲೆ ಕೆಲಸ ಮಾಡುವ ಜನರು ಬಹಳ ಮುಖ್ಯ ಎಂದಿದ್ದಾರೆ.
ಪುಲ್ವಾಮಾ ಭಯೋತ್ಪಾಸಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಯುದ್ಧ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್ನಲ್ಲಿರುವ ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ತರಬೇತಿ ಕೇಂದ್ರವನ್ನು ಧ್ವಂಸಗೊಳಿಸಿದ್ದವು. ಈ ಸರ್ಜಿಕಲ್ ಸ್ಟ್ರೈಕ್ ಬಳಿಕ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಪಾಕಿಸ್ತಾನ ಹೊಂಚು ಹಾಕಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ