Russia Ukraine War: ಅತಿದೊಡ್ಡ ದಾಳಿಗೆ ರಷ್ಯಾ ಸಿದ್ಧತೆ; ಉಕ್ರೇನ್​ಗೆ ಟ್ಯಾಂಕ್ ರವಾನಿಸಲು ಅಮೆರಿಕ, ಜರ್ಮನಿ ಸಮ್ಮತಿ

Recession Fear: ವಿಶ್ವದ ಹಲವು ದೇಶಗಳು ನೇರವಾಗಿ ಭಾಗಿಯಾದರೆ ಜಾಗತಿಕ ಆರ್ಥಿಕತೆಗೆ ಮಾರಕ ಹೊಡೆತ ಬೀಳಲಿದೆ. ಆರ್ಥಿಕ ಹಿಂಜರಿತದ ಭೀತಿಯನ್ನು ಈ ಬೆಳವಣಿಗೆ ಹೆಚ್ಚಿಸಿದೆ.

Russia Ukraine War: ಅತಿದೊಡ್ಡ ದಾಳಿಗೆ ರಷ್ಯಾ ಸಿದ್ಧತೆ; ಉಕ್ರೇನ್​ಗೆ ಟ್ಯಾಂಕ್ ರವಾನಿಸಲು ಅಮೆರಿಕ, ಜರ್ಮನಿ ಸಮ್ಮತಿ
ಜರ್ಮನಿಯ ಲೆಪಾರ್ಡ್​2 ಯುದ್ಧ ಟ್ಯಾಂಕ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 25, 2023 | 10:11 AM

ಬರ್ಲಿನ್ / ಕೀವ್: ರಷ್ಯಾ ಮತ್ತು ಉಕ್ರೇನ್ ಯುದ್ಧ (Russia Ukriane War) ಆರಂಭವಾಗಿ ಇದೇ ಫೆಬ್ರುವರಿ 24ಕ್ಕೆ ಒಂದು ವರ್ಷವಾಗಲಿದೆ. ಆರಂಭದಲ್ಲಿ ರಷ್ಯಾದ ಮೇಲುಗೈ ಕಂಡುಬಂದಿತ್ತು. ಆದರೆ ಸಾವರಿಸಿಕೊಂಡ ಉಕ್ರೇನ್ ಪ್ರತಿದಾಳಿ ಆರಂಭಿಸಿದ ನಂತರ ರಷ್ಯಾ ಹಿಮ್ಮೆಟ್ಟಬೇಕಾಯಿತು. ಉಕ್ರೇನ್​ನ ಪೂರ್ವ ಮತ್ತು ದಕ್ಷಿಣ ಭಾಗದ ಸಾವಿರಾರು ಕಿಲೋಮೀಟರ್​ಗಳಷ್ಟು ಅಂತರದಲ್ಲಿ ಸಮರಭೂಮಿ (War Zone) ವಿಸ್ತರಿಸಿಕೊಂಡಿದ್ದು, ಎರಡೂ ಸೇನೆಗಳು ಪರಸ್ಪರರ ಮೇಲಿನ ದಾಳಿ-ಪ್ರತಿದಾಳಿ, ಆಕ್ರಮಣ-ರಕ್ಷಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಸದ್ಯಕ್ಕೆ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಯಾವಾಗ ಏನು ಬೇಕಾದರೂ ಆಗಬಹುದು ಎಂಬ ಪರಿಸ್ಥಿತಿಯಿದೆ. ಫೆಬ್ರುವರಿ 24ಕ್ಕೆ ದಾಳಿಯ ವರ್ಷಾಚರಣೆ ಇರುವುದರಿಂದ ಅಷ್ಟರೊಳಗೆ ನಿರ್ಣಾಯಕ ಫಲಿತಾಂಶ ತೋರಿಸದಿದ್ದರೆ ರಷ್ಯಾದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಒಲವು ಕಡಿಮೆಯಾಗುವ ಭೀತಿ ಕಾಣಿಸಿಕೊಂಡಿದ್ದು, ರಷ್ಯಾ ಸೇನೆ ಮತ್ತೊಮ್ಮೆ ಹಠಾತ್ ದಾಳಿ ಮಾಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಸ್ವದೇಶ-ವಿದೇಶಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ರ ಜನಪ್ರಿಯತೆ ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ ಉಕ್ರೇನ್​ ಅಧ್ಯಕ್ಷ ವೊಲಿಡಿಮಿರ್ ಝೆಲೆನ್​ಸ್ಕಿ ಜನಪ್ರಿಯತೆ ಹೆಚ್ಚಾಗುತ್ತಿದೆ. ಇಂದು (ಜ 25) ಝೆಲೆನ್​ಸ್ಕಿ ಹುಟ್ಟುಹಬ್ಬ. ಇದೇ ನೆಪದಲ್ಲಿ ಝೆಲೆನ್​ಸ್ಕಿ ವಿಶ್ವದ ಇತರ ದೇಶಗಳ ನಾಯಕರೊಂದಿಗೆ ಮಾತನಾಡಿದ್ದು ಉಕ್ರೇನ್​ಗೆ ಅಗತ್ಯವಿರುವ ಆರ್ಥಿಕ ಮತ್ತು ಸೈನಿಕ ನೆರವು ಒದಗಿಸುವಂತೆ ಮನವಿ ಮಾಡಿದರು. ‘ಚರ್ಚೆಗಳು ನಿರ್ಧಾರಗಳೊಂದಿಗೆ ಅಂತ್ಯವಾಗಬೇಕು. ಒಂದು ದೊಡ್ಡ ದೇಶದ ಬೆಂಬಲ ಇರುವ ಭಯೋತ್ಪಾದಕರು ಹಾಗೂ ಅವರ ಸಹವರ್ತಿಗಳ ವಿರುದ್ಧ ಜಯಗಳಿಸಲು ನಮಗೆ ಅಗತ್ಯ ನೆರವು ಒದಗಿಸಬೇಕು. ಮುಖ್ಯವಾಗಿ ಯುದ್ಧ ಟ್ಯಾಂಕ್​ಗಳನ್ನು ಒದಗಿಸಬೇಕು’ ಎಂದು ಕೋರಿದರು.

ಉಕ್ರೇನ್​ನ ಬೇಡಿಕೆ ಕುರಿತು ಹಲವು ದಿನಗಳಿಂದ ಚರ್ಚೆ ನಡೆಸುತ್ತಿದ್ದ ಅಮೆರಿಕ ಇದೀಗ ‘ಎಂ1 ಅಬ್ರಾಹಂ’ ಯುದ್ಧಟ್ಯಾಂಕ್​ಗಳನ್ನು ರವಾನಿಸಲು ಸಮ್ಮತಿಸಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಸುಮಾರು 30 ಟ್ಯಾಂಕ್​ಗಳು ಉಕ್ರೇನ್ ತಲುಪುವ ಸಾಧ್ಯತೆಯಿದೆ ಎಂದು ಅಮೆರಿಕ ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್​ ಸುದ್ದಿಸಂಸ್ಥೆಯು ವರದಿ ಮಾಡಿದೆ. ಈ ನಡುವೆ ಜರ್ಮನಿಯ ಚಾನ್ಸೆಲರ್ ಒಲಾಫ್ ಸ್ಕೊಲಾಜ್ ‘ಲೆಪಾರ್ಡ್​-2’ ಯುದ್ಧಟ್ಯಾಂಕ್​ಗಳನ್ನು ಉಕ್ರೇನ್​ಗೆ ಕಳಿಸಲು ಸಮ್ಮತಿಸಿದ್ದಾರೆ. ಜರ್ಮನಿಯಿಂದ ಟ್ಯಾಂಕ್​ಗಳನ್ನು ಖರೀದಿಸಿರುವ ಪೊಲೆಂಡ್, ಸ್ಕಾಂಡಿನೇವಿಯಾದಂಥ ಇತರ ದೇಶಗಳು ಟ್ಯಾಂಕ್​ಗಳನ್ನು ಉಕ್ರೇನ್​ಗೆ ಒದಗಿಸುವ ಬಗ್ಗೆ ಯಾವುದೇ ಆಕ್ಷೇಪಗಳಿಲ್ಲ ಎಂದು ಹೇಳಿದ್ದಾರೆ. ಜರ್ಮನಿಯು ಕನಿಷ್ಠ 14 ‘ಲೆಪಾರ್ಡ್’​ ಯುದ್ಧಟ್ಯಾಂಕ್​ಗಳನ್ನು ಉಕ್ರೇನ್​ಗೆ ರವಾನಿಸಬಹುದು ಎಂದು ಹೇಳಲಾಗುತ್ತಿದೆ.

ಉಕ್ರೇನ್​ನ ಪ್ರತಿಹೋರಾಟಕ್ಕೆ ಯುದ್ಧಟ್ಯಾಂಕ್​ಗಳು ಅತ್ಯಗತ್ಯ. ಇದು ಈ ಸಂಘರ್ಷದ ಮಹತ್ವದ ಬೆಳವಣಿಗೆಯಾಗಲಿದೆ. ರಷ್ಯಾಕ್ಕೆ ಹೊಸ ಬಲದಿಂದ ಸರಿಯಾಗಿ ಗುದ್ದುತ್ತೇವೆ ಎಂದು ಉಕ್ರೇನ್ ಆಡಳಿತದ ಮುಖ್ಯಸ್ಥ ಅಂಡ್ರೀ ಯೆರ್​ಮಕ್ ತಮ್ಮ ಟೆಲಿಗ್ರಾಮ್ ಸಂದೇಶದಲ್ಲಿ ತಿಳಿಸಿದ್ದಾರೆ.

ಲೆಪಾರ್ಡ್​ಗೆ ಒಲವು

ಅಮೆರಿಕವು ತನ್ನ ‘ಅಬ್ರಾಹಂ’ ಟ್ಯಾಂಕ್​ಗಳನ್ನು ಕಳಿಸುವುದಾಗಿ ಹೇಳಿರುವುದು ಉಕ್ರೇನ್​ಗೆ ನೆರವು ನೀಡಲು ಬಯಸಿದ್ದ ಇತರ ದೇಶಗಳಿಗೆ ಮಾರ್ಗ ಸುಗಮಗೊಳಿಸಿದೆ. ಆದರೆ ಉಕ್ರೇನ್​ಗೆ ಅಮೆರಿಕದ ಅಬ್ರಾಹಂ ಟ್ಯಾಂಕ್​ಗಳಿಗಿಂತಲೂ ಜರ್ಮನಿಯ ಲೆಪಾರ್ಡ್​ ಟ್ಯಾಂಕ್​ಗಳು ಹೆಚ್ಚು ಅಗತ್ಯ ಎನಿಸಿದೆ. ಹೀಗಾಗಿ ಅದು ಸಾಧ್ಯವಾದಷ್ಟೂ ಹೆಚ್ಚು ಲೆಪಾರ್ಡ್​ ಟ್ಯಾಂಕ್​ಗಳನ್ನು ಸಂಪಾದಿಸಿಕೊಳ್ಳಲು ಯತ್ನಿಸುತ್ತಿದೆ. ಅಬ್ರಾಹಂ ಟ್ಯಾಂಕ್​ಗಳಿಗೆ ಹೋಲಿಸಿದರೆ ಲೆಪಾರ್ಡ್ ಟ್ಯಾಂಕ್​ಗಳ ತೂಕ ಕಡಿಮೆ, ಮೈಲೇಜ್ ಸಹ ಹೆಚ್ಚು. ತಾಂತ್ರಿಕ ನಿರ್ವಹಣೆಯು ಅಬ್ರಾಹಂನಷ್ಟು ಕಷ್ಟವಲ್ಲ, ಯುದ್ಧಭೂಮಿಗೆ ನಿಯೋಜಿಸುವುದೂ ಸುಲಭ ಎನ್ನುವುದು ಇದಕ್ಕೆ ಮುಖ್ಯ ಕಾರಣ.

1979ರಿಂದ ಉತ್ಪಾದನೆಯಾಗುತ್ತಿರುವ ‘ಲೆಪಾರ್ಡ್​ 2’ ಟ್ಯಾಂಕ್ ಹಲವು ಬಾರಿ ಬದಲಾವಣೆಗೆ ಒಳಪಟ್ಟಿದೆ. ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ​ಪೊಲೆಂಡ್, ಫಿನ್​ಲೆಂಡ್ ಸೇರಿದಂತೆ ಹಲವು ದೇಶಗಳು ಈ ಟ್ಯಾಂಕ್​ ಬಳಸುತ್ತಿವೆ. ಸುಮಾರು 2,000 ಟ್ಯಾಂಕ್​ಗಳು ಯುರೋಪ್​ನಲ್ಲಿ ಕಾರ್ಯನಿರ್ವಹಿಸುತ್ತಿವೆ. 120 ಎಂಎಂ ಸ್ಮೂತ್​ಬೋರ್​ ನಳಿಕೆ, 7.62 ಎಂಎಂ ಮಿಷಿನ್​ಗನ್ ಹೊಂದಿರುವ ಈ ಟ್ಯಾಂಕ್ ಗಂಟೆಗೆ 70 ಕಿಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಈ ಟ್ಯಾಂಕ್​ಗೆ ಇದೆ.

ಹೀಗಾಗಿಯೇ ಲೆಪಾರ್ಡ್​-2 ಟ್ಯಾಂಕ್​ಗಳ ನಿಯೋಜನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದು, ರಷ್ಯಾದ ಯುದ್ಧತಂತ್ರಗಳು ಬದಲಾಗಬಹುದು ಎಂದು ಹೇಳಲಾಗುತ್ತಿದೆ. ಯುದ್ಧವು ಮತ್ತಷ್ಟು ತಿಂಗಳು ಅಥವಾ ವರ್ಷಗಳ ಅವಧಿಗೆ ಮುಂದುವರಿದರೆ, ವಿಶ್ವದ ಹಲವು ದೇಶಗಳು ನೇರವಾಗಿ ಭಾಗಿಯಾದರೆ ಜಾಗತಿಕ ಆರ್ಥಿಕತೆಗೆ ಮಾರಕ ಹೊಡೆತ ಬೀಳಲಿದೆ. ಆರ್ಥಿಕ ಹಿಂಜರಿತದ ಭೀತಿಯನ್ನು ಈ ಬೆಳವಣಿಗೆ ಹೆಚ್ಚಿಸಿದೆ.

ಇದನ್ನೂ ಓದಿ: Ukraine And Russia War: ಉಕ್ರೇನ್ ಮೇಲೆ ಸಾರಿರುವ ಯುದ್ಧ ನಿಲ್ಲಿಸಲು ರಷ್ಯಾ ಚಿಂತನೆ

ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:11 am, Wed, 25 January 23

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ