Honour Killing in Pakistan: ನವವಿವಾಹಿತ ಮಗಳನ್ನು ಕರಾಚಿಯ ಕೋರ್ಟೊಂದರಲ್ಲಿ ತಂದೆಯೇ ಗುಂಡಿಟ್ಟು ಕೊಂದ!
ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಮತ್ತು ಮತ್ತು ಕೊಲೆಗೆ ಬಳಸಿದ ಆಯುಧವನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಧಿಕಾರಿ ಹೇಳಿದ್ದಾರೆ.
ಬೆಳೆದ ಮಗಳು ಪ್ರಾಪ್ತಳಾದ ಮೇಲೆ ತಮ್ಮ ಇಚ್ಛೆಗೆ ವಿರುದ್ಧವಾಗಿ ಬೇರೆಯವನನ್ನು ಮದುವೆ ಮಾಡಿಕೊಂಡಾಗ ರೊಚ್ಚಿಗೆದ್ದು ಅವಳನ್ನೋ ಇಲ್ಲವೇ ಅವಳ ಗಂಡನನ್ನೋ ಕೊಲ್ಲುವ ಮರ್ಯಾದಾ ಹತ್ಯೆ ಪ್ರಕರಣಗಳು ಪಾಕಿಸ್ತಾನದಲ್ಲಿ ಹೆಚ್ಚುತ್ತ್ತಿವೆ. ಅಲ್ಲಿನ ಬಂದರು ನಗರ ಕರಾಚಿಯಲ್ಲಿನ (port city Karachi) ಕೋರ್ಟೊಂದರಲ್ಲಿ ಒಬ್ಬ ನವವಿವಾಹಿತ ಮಹಿಳೆಯನ್ನು ಆಕೆಯ ತಂದೆ ಗುಂಡಿಕ್ಕಿ ಕೊಂದ ಘೋರ ಘಟನೆ ನಡೆದಿದೆ ನಗರದ ಪೊಲೀಸರು ತಿಳಿಸಿದ್ದು ಇದನ್ನು ಮರ್ಯಾದಾ ಹತ್ಯೆ (ಆನರ್ ಕಿಲ್ಲಿಂಗ್) (honour killing) ಎಂದು ಹೇಳಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಕರಾಚಿಗೆ ಹತ್ತಿರದ ಪಿರಾಬಾದ್ (Pirabad) ನಿವಾಸಿಯಾಗಿದ್ದ ಮಹಿಳೆಯು ನಗರಕ್ಕೆ ಬಂದು ಕೋರ್ಟೊಂದರಲ್ಲಿ ತನ್ನ ಸ್ವಇಚ್ಛೆಯಿಂದ ಮದುವೆಯಾಗಿರುವು ಬಗ್ಗೆ ಹೇಳಿಕೆಯನ್ನು ದಾಖಲಿಸುವಾಗ ಅವಳ ಹತ್ಯೆ ನಡೆದಿದೆ. ವಜಿರಿಸ್ತಾನದ ಒಂದು ಬುಡಕಟ್ಟು ಜನಾಂಗಕ್ಕೆ ಸೇರಿದ್ದ ನತದೃಷ್ಟ ಮಹಿಳೆಯು ಇತ್ತೀಚಿಗೆ ತನ್ನ ನೆರೆಮನೆಯ ವೈದ್ಯನೊಬ್ಬನನ್ನು ಮದುವೆಯಾಗಿದ್ದಳು ಅಂತ ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಹೇಳಿಕೆ ದಾಖಲಿಸಲು ಬಂದಾಗ ಗುಂಡು ಹಾರಿಸಿದ
‘ಆಕೆ ಇಂದು (ಮಂಗಳವಾರ) ಬೆಳಗ್ಗೆ ಕೋರ್ಟ್ ನಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಲು ಬಂದಾಗ ಅವಳ ತಂದೆ ಗುಂಡು ಹಾರಿಸಿದ್ದರಿಂದ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ಅವಳ ಪಕ್ಕದಲ್ಲಿದ್ದ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡರು. ಅವರ ಪ್ರಾಣಕ್ಕೇನೂ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ,’ ಅಂತ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶಬ್ಬೀರ್ ಸೆಥರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Mohammed Shami: ಮೊಹಮ್ಮದ್ ಶಮಿಗೆ ಬಿಗ್ ಶಾಕ್: ಪತ್ನಿಗೆ ತಿಂಗಳು 50 ಸಾವಿರ ರೂ. ನೀಡುವಂತೆ ಕೋರ್ಟ್ ಆದೇಶ
ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಮತ್ತು ಮತ್ತು ಕೊಲೆಗೆ ಬಳಸಿದ ಆಯುಧವನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಧಿಕಾರಿ ಹೇಳಿದ್ದಾರೆ.
ಮಹಿಳೆಯ ಪುರುಷ ಸಂಬಂಧಿ ಮರ್ಯಾದಾ ಹತ್ಯೆಯಲ್ಲಿ ಭಾಗಿಯಾಗಿರುತ್ತಾನೆ!
ಇಂಥ ಅಂದರೆ ಮರ್ಯಾದಾ ಹತ್ಯೆಯ ಪ್ರತಿಯೊಂದು ಪ್ರಕರಣದಲ್ಲಿ ಮಹಿಳೆಯ ತಂದೆ, ಸಹೋದರ ಅಥವಾ ಯಾರಾದರೊಬ್ಬ ಪುರುಷ ಸಂಬಂಧಿಕ ಭಾಗಿಯಾಗಿರುತ್ತಾನೆ, ಎಂದ ಸೆಥರ್ ಹೇಳಿದ್ದಾರೆ. ಮದುವೆಯ ನಂತರ ಮಹಿಳೆ ತಂದೆತಾಯಿಗಳ ಮನೆ ಬಿಟ್ಟು ಗಂಡನ ಮನೆಗೆ ಹೋಗಿದ್ದು ತಂದೆ ಕೋಪದಿಂದ ಕುದಿಯುತ್ತಿದ್ದ, ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ‘ಗಾಂಧಿ ಗೋಡ್ಸೆ’ ರಿಲೀಸ್ಗೂ ಮೊದಲು ನಿರ್ದೇಶಕನಿಗೆ ಬೆದರಿಕೆ; ಭದ್ರತೆ ಕೋರಿದ ರಾಜ್ಕುಮಾರ್ ಸಂತೋಷಿ
ಮರ್ಯದಾ ಹತ್ಯೆಯ ಹೆಸರಲ್ಲಿ ಪಾಕಿಸ್ತಾನದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಪ್ರತಿವರ್ಷ ನೂರಾರು ಮಹಿಳೆಯರು ಬಲಿಯಾಗುತ್ತಿದ್ದಾರೆ.
ವರ್ಷಕ್ಕೆ 650 ಪ್ರಕರಣಗಳು!
ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ (ಎಚ್ ಆರ್ ಸಿ ಪಿ) ಪ್ರಕಾರ ಕಳೆದೊಂದು ದಶಕದ ಅವಧಿಯಲ್ಲಿ ಪ್ರತಿವರ್ಷ ಸರಾಸರಿ 650 ಮಹಿಳೆಯರನ್ನು ಕೊಲ್ಲಲಾಗಿದೆ. ಆದರೆ, ಮರ್ಯಾದಾ ಹತ್ಯೆಯ ಸಾಕಷ್ಟು ಪ್ರಕರಣಗಳು ವರದಿಯಾಗದೆ ಮುಚ್ಚಿ ಹೋಗುವ ಕಾರಣ ಈ ಸಂಖ್ಯೆ ಜಾಸ್ತಿಯಿರಬಹುದಾದ ಸಾಧ್ಯತೆಯಿದೆ.
ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:21 pm, Tue, 24 January 23