ಪುಸ್ತಕಗಳ ಪೇಜ್ ಗಳ ನಡುವೆ ರೂ. 81 ಲಕ್ಷ ಮೌಲ್ಯದ ಕರೆನ್ಸಿ ನೋಟುಗಳನ್ನು ಸಾಗಿಸುತ್ತಿದ್ದ ವಿದೇಶಿ ಮೂಲದ ವ್ಯಕ್ತಿ ಮುಂಬೈ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ!

ಇವನಿಂದ ವಶಪಡಿಸಿಕೊಳ್ಳಲಾದ ಬಂಗಾರ ಸಹ ಪೇಸ್ಟ್ ರೂಪದಲ್ಲಿತ್ತು ಮತ್ತು ಅದನ್ನು ಅವನು ಸಿಲಿಕಾನ್ ರಬ್ಬರ್ ಕ್ಯಾಪ್ಸೂಲ್ ಗಳಲ್ಲಿಟ್ಟು ತನ್ನ ಒಳಉಡುಪಿನಲ್ಲಿ ಅಡಗಿಸಿಟ್ಟುಕೊಂಡಿದ್ದ, ಎಂದು ಅಧಿಕಾರಿಗಳು ಹೇಳಿದ್ದಾರೆ.

ಪುಸ್ತಕಗಳ ಪೇಜ್ ಗಳ ನಡುವೆ ರೂ. 81 ಲಕ್ಷ ಮೌಲ್ಯದ ಕರೆನ್ಸಿ ನೋಟುಗಳನ್ನು ಸಾಗಿಸುತ್ತಿದ್ದ ವಿದೇಶಿ ಮೂಲದ ವ್ಯಕ್ತಿ ಮುಂಬೈ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ!
ಪುಸ್ತಕಗಳಲ್ಲಿ ಅಡಗಿಸಿಟ್ಟಿದ್ದ ಕರೆನ್ಸಿ ನೋಟುಗಳುImage Credit source: The Economic Times
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jan 24, 2023 | 1:33 PM

ಮುಂಬೈ: ಮಂಗಳವಾರದಂದು ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು (customs officials) $90,000 (ಸುಮಾರು ರೂ. 81 ಲಕ್ಷ) ಕರೆನ್ಸಿ ನೋಟುಗಳನ್ನು (currency notes) ಪುಸ್ತಕಗಳಲ್ಲಿ ಅಡಗಿಸಿ ಸಾಗಿಸುವ ಪ್ರಯತ್ನದಲ್ಲಿದ್ದ ವಿದೇಶಿ ಮೂಲದ (foreign origin) ವ್ಯಕ್ತಿಯೊಬ್ಬನನ್ನು ಬಂಧಿಸಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಹಣ ಪತ್ತೆ ಮಾಡಿದ್ದನ್ನು ಪೊಲೀಸರು ವಿಡಿಯೋಗ್ರಾಫಿ ಮಾಡಿದ್ದು ನೋಟುಗಳನ್ನು ಬಹಳ ಜಾಗರೂಕತೆ ಮತ್ತು ಪ್ರತ್ಯೇಕವಾಗಿ ಪುಸ್ತಕದ ಹಾಳೆಗಳ ನಡುವೆ ಅಡಗಿಸಿದ್ದು ಕಾಣಿಸುತ್ತದೆ. ಭಾರತದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಮೋಸ ಮತ್ತು ಕಳುವಿನಿಂದ ಬಂಗಾರ ಮತ್ತು ಕರೆನ್ಸಿಯನ್ನು ಸಾಗಿಸುವಾಗ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬೀಳುವುದು ಅಪರೂಪದ ಸಂಗತಿಯೇನೂ ಅಲ್ಲ. ಕೇವಲ ಒಂದು ದಿನದ ಹಿಂದೆ, ಜೈಪುರ ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರಿಂದ ಅಧಿಕಾರಿಗಳು ರೂ 55 ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ:  Mutual Fund: ಕರಗುತ್ತಿದೆ ವಿದೇಶಗಳಲ್ಲಿ ಹೂಡಿಕೆ ಮಾಡಿದ್ದ ಹಣ; ಇಂಟರ್​ನ್ಯಾಷನಲ್ ಫಂಡ್​ಗಳಲ್ಲಿ ದುಡ್ಡು ಹಾಕಿದವರು ಈಗೇನು ಮಾಡಬೇಕು?

ಶಾರ್ಜಾದಿಂದ ಆಗಮಿಸಿದ್ದ ಪ್ರಯಾಣಿಕನೊಬ್ಬ ಸುಮಾರು ರೂ. 22 ಲಕ್ಷ ಮೌಲ್ಯದ 380 ಗ್ರಾಮ್ ನಷ್ಟು ತೂಕದ ಚಿನ್ನದ ಲೇಪವನ್ನು ತನ್ನ ಪ್ಯಾಂಟ್ ಅಡಿಭಾಗದ ಹೆಮ್ ಗಳಲ್ಲಿ (ಬಾಟಮ್ ನಲ್ಲಿ ಮಡಿಕೆ ಹಾಕಿ ಹೆಮ್ಮಿಂಗ್ ಮಾಡಿರುವ ಭಾಗ) ಅಡಗಿಸಿಕೊಂಡಿದ್ದ. ರಿಯಾದ್ ನಿಂದ ಶಾರ್ಜಾ ಮೂಲಕ ಜೈಪುರ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಇನ್ನೊಬ್ಬ ಪ್ರಯಾಣಿಕನಿಂದ ಅಧಿಕಾರಿಗಳು ರೂ. 33 ಲಕ್ಷ ಮೌಲ್ಯದ 576 ಗ್ರಾಂಗಳಷ್ಟು ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದರು.

ಇವನಿಂದ ವಶಪಡಿಸಿಕೊಳ್ಳಲಾದ ಬಂಗಾರ ಸಹ ಪೇಸ್ಟ್ ರೂಪದಲ್ಲಿತ್ತು ಮತ್ತು ಅದನ್ನು ಅವನು ಸಿಲಿಕಾನ್ ರಬ್ಬರ್ ಕ್ಯಾಪ್ಸೂಲ್ ಗಳಲ್ಲಿಟ್ಟು ತನ್ನ ಒಳಉಡುಪಿನಲ್ಲಿ ಅಡಗಿಸಿಟ್ಟುಕೊಂಡಿದ್ದ, ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ:  Green peas: ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು; ಚಳಿಗಾಲದಲ್ಲಿ ಹಸಿರು ಬಟಾಣಿ ತಿನ್ನುವುದನ್ನು ಮಿಸ್ ಮಾಡಬೇಡಿ

ಅದೇ ದಿನ ತಮಿಳುನಾಡು ತಿರುಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನೊಬ್ಬ ಅಕ್ರಮವಾಗಿ ₹9,600ಗಳನ್ನು (ಸುಮಾರು ರೂ. 7.80 ಲಕ್ಷ) ತನ್ನೊಂದಿಗಿಟ್ಟುಕೊಂಡು ವಿಮಾನ ಹತ್ತುವ ಸಂದರ್ಭದಲ್ಲಿ ಅಧಿಕಾರಿಗಳ ಕೈಗೆ ಸಿಕಿಬಿದ್ದ. ಅಧಿಕಾರಿಗಳ ಹೇಳಿಕೆಯ ಪ್ರಕಾರ ಆ ಪ್ರಯಾಣಿಕ ಹಣವನ್ನು ತನ್ನ ಪಾದರಕ್ಷೆಗಳಲ್ಲಿ ಅಡಗಿಸಿಟ್ಟುಕೊಂಡಿದ್ದ.

ಮತ್ತಷ್ಟು ಕ್ರೈಮ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?