‘ಬಾಲಾಕೋಟ್ ದಾಳಿಯಿಂದ ಬದಲಾಗಿದ್ದಾದರೂ ಏನು? ಬಿಜೆಪಿ ರಾಜಕೀಯ ಮೈಲೇಜ್ ಪಡೆಯುವ ವಿಷಯವಷ್ಟೇ ಅದು’-ಫಾರೂಕ್ ಅಬ್ದುಲ್ಲಾ
ಬಿಜೆಪಿ ಸರ್ಕಾರ ಇಂದಿಗೂ ಬಾಲಾಕೋಟ್ ದಾಳಿಯ ಬಗ್ಗೆ ಮಾತನಾಡುತ್ತಿದೆ. ಮುಂಬರುವ ಉತ್ತರಪ್ರದೇಶ ಚುನಾವಣೆಗಾಗಿ ಮತ್ತಷ್ಟು ದ್ವೇಷವನ್ನೇ ಹರಡುತ್ತಿದ್ದಾರೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.
ಜಮ್ಮು: 2019ರಲ್ಲಿ ಭಾರತೀಯ ವಾಯುಸೇನೆ (Indian Air Force) ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆಸಿದ ಏರ್ಸ್ಟ್ರೈಕ್(Balakot Airstrike) ನಿಜಕ್ಕೂ ಭಾರತೀಯರ ಪಾಲಿಗೆ ಹೆಮ್ಮೆಯ ವಿಚಾರ. ಆದರೆ ಈ ಬಾಲಾಕೋಟ್ ವಾಯುದಾಳಿಯನ್ನು ಮುಂಬರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆ(Uttar Pradesh Assembly Election)ಯಲ್ಲಿ ರಾಜಕೀಯ ಮೈಲೇಜ್ ಪಡೆಯಲು ಬಿಜೆಪಿ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಜಮ್ಮು-ಕಾಶ್ಮೀರದ ನ್ಯಾಶನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ (Farooq Abdullah) ಆರೋಪಿಸಿದ್ದಾರೆ.
ಮಾಧ್ಯಮಗಳೆದುರು ಮಾತನಾಡಿದ ಅವರು, ಬಾಲಾಕೋಟ್ !, ಬಾಲಾಕೋಟ್ ! ಕೇವಲ ಇದನ್ನೊಂದು ಹೇಳುತ್ತಿದ್ದಾರೆ. ಏನಾದರೂ ಬದಲಾಗಿದೆಯಾ? ಗಡಿನಿಯಂತ್ರಣ ರೇಖೆ (ಎಲ್ಒಸಿ) ಬದಲಾಯಿತಾ? ಪಾಕಿಸ್ತಾನದಿಂದ ಒಂದು ಸಣ್ಣ ತುಂಡು ಭೂಮಿಯನ್ನು ವಾಪಸ್ ಪಡೆಯಲು ಸಾಧ್ಯವಾಯಿತಾ? ಆ ರೇಖೆ ಅಲ್ಲಿಯೇ ಇದೆ. ಬಾಲಾಕೋಟ್ನಲ್ಲಿ ವಾಯುದಾಳಿಯಾಯಿತು..ಆದರೆ ನಾವೇನು ಪಡೆಯಲು ಸಾಧ್ಯವಾಯಿತು? ಬಿಜೆಪಿ ಅಧಿಕಾರಕ್ಕೆ ಬಂತು. ಬಿಜೆಪಿ ಸರ್ಕಾರ ಇಂದಿಗೂ ಬಾಲಾಕೋಟ್ ದಾಳಿಯ ಬಗ್ಗೆ ಮಾತನಾಡುತ್ತಿದೆ. ಮುಂಬರುವ ಉತ್ತರಪ್ರದೇಶ ಚುನಾವಣೆಗಾಗಿ ಮತ್ತಷ್ಟು ದ್ವೇಷವನ್ನೇ ಹರಡುತ್ತಿದ್ದಾರೆ ಎಂದು ಹೇಳಿದರು.
ಭಾರತೀಯರು ಬಾಲಾಕೋಟ್ ದಾಳಿ ನಡೆದದ್ದನ್ನು ಮರೆಯುವಂತಿಲ್ಲ. 2019ರ ಫೆಬ್ರವರಿ 14ರಂದು ಪುಲ್ವಾಮಾದ ಜಮ್ಮು-ಶ್ರೀನಗರ ಹೆದ್ದಾರಿ ಬಳಿ ಜೈಶ್ ಎ ಮೊಹಮ್ಮದ್ ಉಗ್ರರು ಸಿಆರ್ಪಿಎಫ್ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದರು. ಅದರಲ್ಲಿ ಸುಮಾರು 40 ಯೋಧರು ಹುತಾತ್ಮರಾಗಿದ್ದರು. ಭಾರತದ ಪಾಲಿಗೆ ಅದು ಕರಾಳ ದಿನ. ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಭಾರತ ಫೆಬ್ರವರಿ 26ರಂದು ಮುಂಜಾನೆ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿರುವ ಬಾಲಾಕೋಟ್ ಉಗ್ರರ ತಾಣದ ಮೇಲೆ ಏರ್ಸ್ಟ್ರೈಕ್ ನಡೆಸಿತ್ತು.
ಇದನ್ನೂ ಓದಿ: Hungama: ಹಂಗಾಮದಿಂದ ‘ಹಂಗಾಮ ಮ್ಯೂಸಿಕ್ ಕ್ವಿಜ್ ಅಲೆಕ್ಸಾ ಸ್ಕಿಲ್’ ಲಾಂಚ್: ಸಂಗೀತ ಜ್ಞಾನ ಪರೀಕ್ಷಿಸಲು ವಿವಿಧ ಆಟ
Meghana Raj: ಪುತ್ರ ರಾಯನ್ ಜನ್ಮದಿನಕ್ಕೆ ಮೇಘನಾ ನೀಡಿರುವ ಸಂದೇಶವೇನು?
Published On - 2:16 pm, Fri, 22 October 21