57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಗೃಹಮಂತ್ರಿ ಅಮಿತ್ ಶಾ; ಪ್ರಧಾನಿ ಮೋದಿ ಸೇರಿ ಹಲವು ಗಣ್ಯರಿಂದ ಶುಭಾಶಯ
ಅಮಿತ್ ಶಾ 1964ರಲ್ಲಿ ಗುಜರಾತ್ನಲ್ಲಿ ಜನಿಸಿದ್ದಾರೆ. ಬಹಳ ಮೊದಲಿನಿಂದಲೂ ಅಮಿತ್ ಶಾ ಮತ್ತು ನರೇಂದ್ರ ಮೋದಿ ಆಪ್ತರು. ಈಗಲೂ ಸಹ ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ತಿರದಿಂದ ಬಲ್ಲ ಕೆಲವೇ ವ್ಯಕ್ತಿಗಳಲ್ಲಿ ಅಮಿತ್ ಶಾ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ.
ಬಿಜೆಪಿಯ ಚಾಣಕ್ಯನೆಂದೇ ಗುರುತಿಸಿಕೊಂಡಿರುವ ಗೃಹಮಂತ್ರಿ ಅಮಿತ್ ಶಾ (Amit Shah) ಇಂದು ತಮ್ಮ 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜನ್ಮದಿನ ಆಚರಿಸಿಕೊಳ್ಳುತ್ತಿರುವ ಅಮಿತ್ ಶಾ ರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi), ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವ ಹರ್ದೀಪ್ ಸಿಂಗ್ ಪುರಿ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಿಎಂ ಹಿಮಂತ ಬಿಸ್ವಾ ಶರ್ಮಾ ಸೇರಿ ಹಲವು ರಾಜಕೀಯ ಗಣ್ಯರು ಶುಭಕೋರಿದ್ದಾರೆ. ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಾನು ಅಮಿತ್ ಭಾಯ್ ಅವರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಮ್ಮ ಪಕ್ಷ ಮತ್ತು ನಮ್ಮ ಸರ್ಕಾರವನ್ನು ಬಲಪಡಿಸಲು ಅವರು ಬಹುಮುಖ್ಯ ಕೊಡುಗೆ ನೀಡಿದ್ದಾರೆ. ಇದೇ ಉತ್ಸಾಹದಲ್ಲಿ ಅವರ ದೇಶಸೇವೆ ಮುಂದುವರಿಯಲಿ. ಭಗವಂತ ಅವರಿಗೆ ಆಯುರಾರೋಗ್ಯ ಕರುಣಿಸಲಿ ಎಂದು ಹಾರೈಸಿದ್ದಾರೆ.
Birthday greetings to Shri @AmitShah Ji. I have worked with Amit Bhai for several years and witnessed his outstanding contributions to strengthen the Party and in Government. May he keep serving the nation with the same zeal. Praying for his good health and long life.
— Narendra Modi (@narendramodi) October 22, 2021
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ, ನನ್ನ ಹಿರಿಯ ಸಹೋದ್ಯೋಗಿ ಮತ್ತು ಕೇಂದ್ರ ಸಚಿವರಾದ ಅಮಿತ್ ಶಾರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಾರತ ದೇಶದ ಭದ್ರತೆಗಾಗಿ ಅಪಾರ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ದೀರ್ಘ ಆಯುಷ್ಯ ಮತ್ತು ಉತ್ತಮ ಆರೋಗ್ಯ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿ, ಜನ್ಮದಿನ ಆಚರಣೆ ಖುಷಿಯಲ್ಲಿರುವ ಅಮಿತ್ ಶಾರಿಗೆ ಅಭಿನಂದನೆಗಳು. ಅವರೊಬ್ಬ ನುರಿತ ರಾಜಕೀಯ ತಂತ್ರಜ್ಞ, ಸಮರ್ಪಿತ ರಾಷ್ಟ್ರೀಯವಾದಿ, ದೃಢಮನಸಿನ, ಜನಪ್ರಿಯ ನಾಯಕ ಎಂದು ಹೊಗಳಿದ್ದಾರೆ.
Felicitations to the dedicated nationalist, master political strategist & a popular, iron willed & determined leader Sh @AmitShah Ji on his birthday.
May God grant him good health & long life in the years ahead. Many happy returns of the day. pic.twitter.com/mqxjn2YXA8
— Hardeep Singh Puri (@HardeepSPuri) October 22, 2021
ಅಮಿತ್ ಶಾ 1964ರಲ್ಲಿ ಗುಜರಾತ್ನಲ್ಲಿ ಜನಿಸಿದ್ದಾರೆ. ಬಹಳ ಮೊದಲಿನಿಂದಲೂ ಅಮಿತ್ ಶಾ ಮತ್ತು ನರೇಂದ್ರ ಮೋದಿ ಆಪ್ತರು. ಈಗಲೂ ಸಹ ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ತಿರದಿಂದ ಬಲ್ಲ ಕೆಲವೇ ವ್ಯಕ್ತಿಗಳಲ್ಲಿ ಅಮಿತ್ ಶಾ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚಿಸಿದ ಸಮಯದಲ್ಲೇ ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಹಾಗೇ, ಹಿಂದೆ ಗುಜರಾತ್ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅವರ ಕ್ಯಾಬಿನೆಟ್ನಲ್ಲಿ ಕೂಡ ಸಚಿವರಾಗಿದ್ದರು. 2019ರಲ್ಲಿ ಎರಡನೇ ಬಾರಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದಾಗ ಅಮಿತ್ ಶಾ ಗೃಹ ಮಂತ್ರಿಯಾಗಿ ನೇಮಕವಾಗಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನವರು ಅಧಿಕಾರದಲ್ಲಿ ಇಲ್ಲದಿದ್ರೆ ಎಲ್ಲವನ್ನೂ ಟೀಕೆ ಮಾಡ್ತಾರೆ: ಬಸವರಾಜ ಬೊಮ್ಮಾಯಿ
“ಮಹತ್ವದ ಸಾಧನೆ”: 100 ಕೋಟಿ ಲಸಿಕೆ ಸಾಧನೆಗೆ ಸರ್ಕಾರವನ್ನು ಶ್ಲಾಘಿಸಿದ ಭಾರತ್ ಬಯೋಟೆಕ್