Baltimore Bridge Collapse: ಬಾಲ್ಟಿಮೋರ್‌ನ ಕೀ ಸೇತುವೆಗೆ ಡಿಕ್ಕಿ ಹೊಡೆದ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಭಾರತೀಯರು
ಬಾಲ್ಟಿಮೋರ್‌ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಡಿಕ್ಕಿ ಹೊಡೆದ ಸಿಂಗಾಪುರದ ಕಂಟೈನರ್ ಹಡಗಿನಲ್ಲಿದ್ದ ಎಲ್ಲಾ 22 ಸಿಬ್ಬಂದಿ ಭಾರತೀಯರು ಎಂದು ಹಡಗು ನಿರ್ವಹಣಾ ಕಂಪನಿ ಸಿನರ್ಜಿ ಮರೈನ್ ಗ್ರೂಪ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಘಟನೆಗೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ ಮತ್ತು ಮಾಲೀಕರು ಫೆಡರಲ್ ಮತ್ತು ರಾಜ್ಯ ಸರ್ಕಾರದೊಂದಿಗೆ ಸಹಕರಿಸುತ್ತಿದ್ದಾರೆ.

ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸೋಮವಾರ ಮಧ್ಯರಾತ್ರಿ 1.30ರ ವೇಳೆಗೆ ಹಡಗು ಕೀ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ 47 ವರ್ಷದ ಹಳೆಯ ಸೇತುವೆ ಸಂಪೂರ್ಣವಾಗಿ ಕುಸಿದು ನದಿಗೆ ಬಿದ್ದಿತ್ತು. ಹಡಗು ಬಾಲ್ಟಿಮೋರ್‌ನಿಂದ ಶ್ರೀಲಂಕಾದ ಕೊಲಂಬೊಗೆ ಹೊರಡುತ್ತಿತ್ತು. ಮಾಧ್ಯಮ ವರದಿಗಳ ಪ್ರಕಾರ, ಘರ್ಷಣೆಯ ಸಮಯದಲ್ಲಿ ಸೇತುವೆಯ ಮೇಲೆ ಕೆಲಸ ಮಾಡುತ್ತಿದ್ದ ನಿರ್ಮಾಣ ಸಿಬ್ಬಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಕಂಟೈನರ್ ಹಡಗಿನಲ್ಲಿ ಸಿಂಗಾಪುರದ ಧ್ವಜವಿತ್ತು.
ವರದಿಗಳ ಪ್ರಕಾರ ಸೇತುವೆಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಹಡಗು ಕಂಟೈನರ್ ಹಡಗು, ‘ಡಾಲಿ’ ಹೆಸರಿನ ಈ ಹಡಗು ಬಾಲ್ಟಿಮೋರ್‌ನಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ಹೋಗುತ್ತಿತ್ತು. ರಾತ್ರಿ 1:30ರ ಸುಮಾರಿಗೆ ಹಡಗು ಸೇತುವೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಇದರ ನಂತರ ಹಡಗು ನೀರಿನಲ್ಲಿ ಮುಳುಗಿತು ಮತ್ತು ಸೇತುವೆಯೂ ಮುರಿದು ನದಿಗೆ ಬಿದ್ದಿತು.
ಮತ್ತಷ್ಟು ಓದಿ: Baltimore Bridge Collapse: ಬಾಲ್ಟಿಮೋರ್‌ನ ಅತಿ ಉದ್ದದ ಸೇತುವೆ ಕುಸಿತ
ಈ ಸೇತುವೆಯನ್ನು ಬಾಲ್ಟಿಮೋರ್ ಬಂದರಿನಲ್ಲಿ ಪಟಾಪ್ಸ್ಕೋ ನದಿಯ ಮೇಲೆ ನಿರ್ಮಿಸಲಾಗಿದೆ. ಸುಮಾರು 3 ಕಿಲೋಮೀಟರ್ ಉದ್ದದ ಈ ಸೇತುವೆಯ ನಿರ್ಮಾಣವು 1972 ರಲ್ಲಿ ಪ್ರಾರಂಭವಾಯಿತು ಮತ್ತು ಸೇತುವೆಯನ್ನು 1977 ರಲ್ಲಿ ಸಂಚಾರಕ್ಕೆ ತೆರೆಯಲಾಯಿತು. ಪ್ರತಿ ವರ್ಷ ಸರಾಸರಿ 1.1 ಕೋಟಿ ವಾಹನಗಳು ಈ ಸೇತುವೆಯ ಮೂಲಕ ಹಾದು ಹೋಗುತ್ತವೆ. ಈ ಸೇತುವೆಯನ್ನು ಕೀ ಸೇತುವೆ ಎಂದೂ ಕರೆಯಲಾಗುತ್ತಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ