ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಭಾನುವಾರ ನಡೆದ ಭೀಕರ ಸ್ಪೋಟದಲ್ಲಿ 7 ಜನರು ಸಾವಿಗೀಡಾಗಿದ್ದಾರೆ. 50ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಸ್ಪೋಟದ ಪರಿಣಾಮ ಹತ್ತಿರದಲ್ಲಿದ್ದ ವಾಹನಗಳು, ಕಟ್ಟಡಗಳು ಕುಸಿದಿವೆ. ಆದರೆ ಸ್ಪೋಟ ಹೇಗೆ ಸಂಭವಿಸಿದೆ ಎಂಬ ಕುರಿತಾಗಿ ಮಾಹಿತಿಗಳು ತಿಳಿದು ಬಂದಿಲ್ಲ. ಈ ಕುರಿತಂತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಮಾಹಿತಿ ಹಂಚಿಕೊಂಡಿದ್ದಾರೆ.
ಢಾಕಾದ ಬಳಿಕ ಮೊಗ್ಬಜಾರ್ ಪ್ರದೇಶದಲ್ಲಿ ಸ್ಪೋಟ ಸಂಭವಿಸಿದೆ. ರಕ್ಷಕರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಯೋರ್ವರು ಹೇಳಿದ್ದಾರೆ. ಸ್ಪೋಟದ ತೀವ್ರತೆಯಿಂದಾಗಿ ಸುಮಾರು 7 ಕ್ಕೂ ಹೆಚ್ಚು ಕಟ್ಟಗಳು ಕುಸಿದಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸ್ಪೋಟದಿಂದಾಗಿ 7 ಮಂದಿ ಸಾವಿಗೀಡಾಗಿದ್ದಾರೆ. 50ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಢಾಕಾದ ಪೊಲೀಸ್ ಕಮಿಷನರ್ ಮಾಹಿತಿ ಹಂಚಿಕೊಂಡಿದ್ದಾರೆ.
ಖಂಡಿತವಾಗಿಯೂ ಭೀಕರ ಸ್ಪೋಟವೇ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ಭಯೋತ್ಪಾದನಾ ನಿಗ್ರಹ ದಳ ಬಂದಿದೆ. ಇವರು ಒಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಪೋಟದ ಮೂಲ ಮತ್ತು ಅದರಿಂದ ಆದ ಹಾನಿಯ ಕುರಿತಾಗಿ ತನಿಖೆ ನಡೆಯುತ್ತಿದೆ ಎಂದು ಢಾಕಾದ ಉಪ ಪೊಲೀಸ್ ಆಯುಕ್ತ ಸಜ್ಜಾದ್ ಹೊಸೈನ್ ಹೇಳಿದ್ದಾರೆ.
ರಸ್ತೆಯಲ್ಲಿ ಗಾಜಿನ ಚೂರುಗಳು ಒಡೆದು ಬಿದ್ದಿವೆ. ಕಟ್ಟಡದ ಪಕ್ಕದಲ್ಲಿ ನಿಂತಿದ್ದ ಪ್ರಯಾಣಿಕರ ಬಸ್ ಹಾನಿಗೊಳಗಾಗಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಅನಿಲ ಸೋರಿಕೆಯಿಂದಾಗಿ ಸ್ಪೋಟ ಸಂಭವಿಸಿದೆ ಎಂಬ ಶಂಕೆ ಇದೆ. ಈ ಕುರಿತಂತೆ ಕಾರ್ಯಾಚರಣೆ ನಡೆಯುತ್ತಿದೆ.
ಭೀಕರ ಸ್ಪೋಟದ ಸಂಭವಿಸುತ್ತಿದ್ದಂತೆಯೇ ಒಮ್ಮೆಲೆ ಭಯವಾಯಿತು. ಕಟ್ಟಡಗಳು ಕುಸಿಯಲು ಆರಂಭವಾಯಿತು. ಗಾಜಿನ ಚೂರುಗಳೆಲ್ಲಾ ಪುಡಿ ಪುಡಿಯಾಗಿ ರಸ್ತೆಗೆ ಬಿದ್ದಿದ್ದವು. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದೇವೆ. ಒಂದು ಚಿಕ್ಕ ಮಗು ಸೇರಿದಂತೆ ಇನ್ನು ನಾಲ್ಕು ಮೃತ ದೇಹಗಳು ಸ್ಥಳದಲ್ಲೇ ಪತ್ತೆಯಾಗಿವೆ. ಇಂಥಹ ಭೀಕರ ಘಟನೆಯೊಂದು ಸಂಭವಿಸಿದೆ ಎಂದು ಘಟನಾ ಸ್ಥಳದಲ್ಲಿದ್ದ ಸಾಕ್ಷಿದಾರರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ:
ಗುತ್ತಿಗೆದಾರನ ನಿರ್ಲಕ್ಷ್ಯ; ಡಿಟೋನೇಟರ್ ಸ್ಪೋಟಗೊಂಡು ಮಕ್ಕಳು ಆಸ್ಪತ್ರೆಗೆ ದಾಖಲು
ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಪೋಟ; 6 ಮಂದಿಗೆ ಗಾಯ
Published On - 12:06 pm, Mon, 28 June 21