ಫ್ಲೋರಿಡಾದಲ್ಲಿ ಕಟ್ಟಡ ಕುಸಿತ; ಭಾರತೀಯ ಮೂಲದ ದಂಪತಿ, 1 ವರ್ಷದ ಮಗು ಸಹಿತ 150 ಜನ ಕಣ್ಮರೆ

ಘಟನೆಯ ಬಗ್ಗೆ ಹಲವರು ಆತಂಕಕ್ಕೆ ಒಳಗಾಗಿದ್ದಾರೆ. ಏನಾದರೂ ಚಮತ್ಕಾರ ನಡೆಯಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ. ಕೆಲವರಂತೂ ಘಟನೆಯಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ ಎಂದೇ ಹೇಳಲು ತೊಡಗಿದ್ದಾರೆ. ಭಾನುವಾರದ ವರದಿಯಂತೆ ಕನಿಷ್ಠ 9 ಮಂದಿ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.

ಫ್ಲೋರಿಡಾದಲ್ಲಿ ಕಟ್ಟಡ ಕುಸಿತ; ಭಾರತೀಯ ಮೂಲದ ದಂಪತಿ, 1 ವರ್ಷದ ಮಗು ಸಹಿತ 150 ಜನ ಕಣ್ಮರೆ
ಕಟ್ಟಡ ಕುಸಿತದ ದೃಶ್ಯ
Follow us
TV9 Web
| Updated By: ganapathi bhat

Updated on:Jun 28, 2021 | 10:31 PM

ಅಮೆರಿಕಾದ ಫ್ಲೋರಿಡಾದಲ್ಲಿ ಗುರುವಾರ ಸಂಭವಿಸಿದ ಕಟ್ಟಡ ಕುಸಿತದ ಪರಿಣಾಮ 150ಕ್ಕೂ ಹೆಚ್ಚು ಮಂದಿ ಕಾಣೆಯಾಗಿರುವ ಪ್ರಕರಣ ನಡೆದಿದೆ. ಅವರಲ್ಲಿ ಭಾರತೀಯ ಮೂಲದ ದಂಪತಿ ಹಾಗೂ ಒಂದು ವರ್ಷದ ಮಗು ಕೂಡ ಸೇರಿದ್ದಾರೆ. 12 ಅಂತಸ್ತಿನ ಜನರ ವಾಸ್ತವ್ಯವಿದ್ದ ಕಟ್ಟಡ ಕುಸಿತಗೊಂಡು ಈ ಅನಾಹುತ ಸೃಷ್ಟಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಾಣೆಯಾದವರಿಗಾಗಿ ಹುಡುಕಾಟ ಕಾರ್ಯ ಭರದಿಂದ ಸಾಗುತ್ತಿದೆ. ಘಟನೆಯಲ್ಲಿ 9 ಮಂದಿ ಮರಣವನ್ನಪ್ಪಿರುವುದು ಖಚಿತವಾಗಿದೆ. ಭಾರತೀಯ ಮೂಲದ ವಿಶಾಲ್ ಪಟೇಲ್ (42) ಪತ್ನಿ ಭಾವ್ನಾ ಪಟೇಲ್ (38) ಹಾಗೂ ಅವರ ಒಂದು ವರ್ಷದ ಮಗಳು ಐಶಾನಿ ಪಟೇಲ್ ಕೂಡ ಈ ದುರಂತದಲ್ಲಿ ಸಿಲುಕಿಹಾಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜೊತೆಗೆ, ಭಾವ್ನಾ ಪಟೇಲ್ ಈಗ ನಾಲ್ಕು ತಿಂಗಳ ಗರ್ಭಿಣಿ ಎಂದೂ ಅವರ ಸೊಸೆ ಸರೀನಾ ಪಟೇಲ್ ತಿಳಿಸಿದ್ದಾರೆ.

ನಾನು ಅವರನ್ನು ಭೇಟಿಯಾಗಲು ಬರುತ್ತೇನೆ ಎಂದು ತಿಳಿಸಲು ಕೊನೆಯ ಬಾರಿಗೆ ಕರೆಮಾಡಿದ್ದೆ. ವಿಮಾನ ಟಿಕೆಟ್ ಬುಕ್ ಮಾಡಿದ್ದೆ ಎಂದು ಹೇಳಿದ್ದೆ. ಅವರು ಬಹಳ ಸಮಯದಿಂದ ತಮ್ಮ ಮನೆ ಹಾಗೂ ಮಗಳನ್ನು ನೋಡಲು ಬರಬೇಕೆಂದು ಕೇಳಿಕೊಂಡಿದ್ದರು. ಕೊರೊನಾ ಕಾರಣದಿಂದ ಇಷ್ಟು ದಿನ ಹೋಗಲು ಆಗಿರಲಿಲ್ಲ ಎಂದು ಸರೀನಾ ಪಟೇಲ್ ತಿಳಿಸಿದ್ದಾರೆ.

ಕಟ್ಟಡ ಕುಸಿತದ ಸಮಯದಲ್ಲಿ ಅವರು ಮನೆಯಲ್ಲೇ ಇದ್ದರು. ನಾವು ಅವರಿಗೆ ಬಹಳಷ್ಟು ಸಲ ಕರೆ ಮಾಡಲು ಪ್ರಯತ್ನಿಸಿದ್ದೇವೆ. ಮೆಸೇಜ್ ಕೂಡ ಮಾಡಿದ್ದೆವು. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರು ಕೂಡ ಯಾರನ್ನೂ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.

ಘಟನೆಯ ಬಗ್ಗೆ ಹಲವರು ಆತಂಕಕ್ಕೆ ಒಳಗಾಗಿದ್ದಾರೆ. ಏನಾದರೂ ಚಮತ್ಕಾರ ನಡೆಯಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ. ಕೆಲವರಂತೂ ಘಟನೆಯಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ ಎಂದೇ ಹೇಳಲು ತೊಡಗಿದ್ದಾರೆ. ಭಾನುವಾರದ ವರದಿಯಂತೆ ಕನಿಷ್ಠ 9 ಮಂದಿ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರು ಸರ್ಫ್​ಸೈಡ್​​ನ ದುರಂತವನ್ನು ತುರ್ತುಪರಿಸ್ಥಿತಿಯೆಂದು ಘೋಷಣೆ ಮಾಡಿದ್ದು, ಅದರಡಿ ಸಿಗುವ ಪರಿಹಾರ ನೀಡಿದ್ದಾರೆ ಮತ್ತು ವಿಪತ್ತು ಪರಿಹಾರವನ್ನೂ ಪ್ರಕಟಿಸಿದ್ದಾರೆ ಎಂದು ಮೇಯರ್​ ತಿಳಿಸಿದ್ದಾರೆ. ಕಾಣೆಯಾದವರಲ್ಲಿ ಕೊಲಂಬಿಯಾ, ಕ್ಯೂಬಾ, ಚಿಲಿ, ಪರಾಗ್ವೆ, ಪೋರ್ಟೊ ರಿಕೊ ಮತ್ತು ಅರ್ಜೆಂಟೀನಾ ಸೇರಿದಂತೆ ಲ್ಯಾಟಿನ್ ಅಮೆರಿಕದ 27 ಮಂದಿ ಕೂಡ ಇದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಫ್ಲೋರಿಡಾದಲ್ಲಿ 12 ಅಂತಸ್ತಿನ ಕಟ್ಟಡ ಭಾಗಶಃ ಕುಸಿತ; 5 ಮಂದಿ ಸಾವು, 156ಕ್ಕೂ ಹೆಚ್ಚು ಮಂದಿ ನಾಪತ್ತೆ

ಢಾಕಾದಲ್ಲಿ ಸ್ಪೋಟ: 7 ಮಂದಿ ಸಾವು, ಗಾಯಾಳುಗಳು ಆಸ್ಪತ್ರೆಗೆ ದಾಖಲು

Published On - 10:22 pm, Mon, 28 June 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ