44-45 ವಾರದ ನಂತರ ಆಸ್ಟ್ರಾಜೆನೆಕಾ ಲಸಿಕೆಯ ಎರಡನೇ ಡೋಸ್​ ಪಡೆದವರಲ್ಲಿ ನಾಲ್ಕು ಪಟ್ಟು ಅಧಿಕ ಪ್ರತಿಕಾಯಗಳ ಸೃಷ್ಟಿ: ಆಕ್ಸ್​ಫರ್ಡ್​

ಈಗಾಗಲೇ ಎರಡು ಡೋಸ್​ ಪಡೆದ ಕೆಲವರಿಗೆ ಮೂರನೇ ಸಲಕ್ಕೆ ಬೂಸ್ಟರ್ ಡೋಸ್ ನೀಡಿದಾಗ ಎರಡನೇ ಡೋಸ್​ ನಂತರ ಸೃಷ್ಟಿಯಾದ ಪ್ರತಿಕಾಯಗಳಿಗಿಂತಲೂ ಎರಡು ಪಟ್ಟು ಹೆಚ್ಚು ಪ್ರತಿಕಾಯಗಳು ಸೃಷ್ಟಿಯಾಗಿರುವುದೂ ಅಧ್ಯಯನದ ಪ್ರಾಥಮಿಕ ವರದಿಯಲ್ಲಿ ಕಾಣಸಿಕ್ಕಿದೆ.

44-45 ವಾರದ ನಂತರ ಆಸ್ಟ್ರಾಜೆನೆಕಾ ಲಸಿಕೆಯ ಎರಡನೇ ಡೋಸ್​ ಪಡೆದವರಲ್ಲಿ ನಾಲ್ಕು ಪಟ್ಟು ಅಧಿಕ ಪ್ರತಿಕಾಯಗಳ ಸೃಷ್ಟಿ: ಆಕ್ಸ್​ಫರ್ಡ್​
ಆಸ್ಟ್ರಾಜೆನೆಕಾ ಲಸಿಕೆ
Follow us
TV9 Web
| Updated By: Skanda

Updated on: Jun 29, 2021 | 11:02 AM

ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಆಕ್ಸ್​ಫರ್ಡ್​ ನಡೆಸಿದ ಹೊಸ ಅಧ್ಯಯನವೊಂದರಲ್ಲಿ ಆಸ್ಟ್ರಾಜೆನೆಕಾ ಲಸಿಕೆಯ ಎರಡನೇ ಡೋಸ್​ ನೀಡುವ ಅವಧಿಯನ್ನು 8ರಿಂದ12ವಾರಗಳಿಗೆ ಬದಲಾಗಿ 44ರಿಂದ45 ವಾರಕ್ಕೆ ವಿಸ್ತರಿಸಿದಾಗ ದೇಹದಲ್ಲಿ ನಾಲ್ಕು ಪಟ್ಟು ಹೆಚ್ಚು ಪ್ರತಿಕಾಯಗಳು ಸೃಷ್ಟಿಯಾಗಿರುವುದು ಕಂಡುಬಂದಿದೆ. ಈ ಕುರಿತು ಸೋಮವಾರ ಮಾಹಿತಿ ನೀಡಿರುವ ಆಕ್ಸ್​ಫರ್ಡ್​ ಸಂಸ್ಥೆ, ಎರಡನೇ ಡೋಸ್​ ನೀಡುವುದನ್ನು ವಿಳಂಬ ಮಾಡಿದಾಗ ದೇಹದಲ್ಲಿ ಹೆಚ್ಚು ಪ್ರತಿಕಾಯಗಳ ಬೆಳವಣಿಗೆಗೆ ಅವಕಾಶ ಸಿಕ್ಕಿರುವುದು ಅಧ್ಯಯನದಲ್ಲಿ ಕಂಡುಬಂದಿದೆ. ಅಲ್ಲದೇ, ಪ್ರತಿಕಾಯಗಳು ದೇಹದಲ್ಲಿ ಸುಮಾರು ಒಂದು ವರ್ಷದ ತನಕ ಕ್ರಿಯಾಶೀಲವಾಗಿರುವುದೂ ಗೊತ್ತಾಗಿದೆ. ಈಗಾಗಲೇ ಎರಡು ಡೋಸ್​ ಪಡೆದ ಕೆಲವರಿಗೆ ಮೂರನೇ ಸಲಕ್ಕೆ ಬೂಸ್ಟರ್ ಡೋಸ್ ನೀಡಿದಾಗ ಎರಡನೇ ಡೋಸ್​ ನಂತರ ಸೃಷ್ಟಿಯಾದ ಪ್ರತಿಕಾಯಗಳಿಗಿಂತಲೂ ಎರಡು ಪಟ್ಟು ಹೆಚ್ಚು ಪ್ರತಿಕಾಯಗಳು ಸೃಷ್ಟಿಯಾಗಿರುವುದೂ ಅಧ್ಯಯನದ ಪ್ರಾಥಮಿಕ ವರದಿಯಲ್ಲಿ ಕಾಣಸಿಕ್ಕಿದೆ ಎಂದು ತಿಳಿಸಿದೆ.

ಮೊದಲ ಡೋಸ್​ ಆಸ್ಟ್ರಾಜೆನೆಕಾ ಕೊರೊನಾ ಲಸಿಕೆ ದೇಹದಲ್ಲಿ ಒಂದಷ್ಟು ಪ್ರಮಾಣದ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಆ ಪ್ರಕ್ರಿಯೆಗೆ ತುಸು ಹೆಚ್ಚೇ ಸಮಯ ಕೊಟ್ಟು 44ರಿಂದ45ನೇ ವಾರಕ್ಕೆ ಎರಡನೇ ಡೋಸ್ ಲಸಿಕೆ ಕೊಟ್ಟಾಗ ಅದರ ಪ್ರಭಾವ ಹೆಚ್ಚಾಗಿರುವುದು ಕಾಣಿಸಿದೆ. ಬೂಸ್ಟರ್​ ಡೋಸ್​ ವಿಚಾರದಲ್ಲೂ ಅತ್ಯುತ್ತಮ ಫಲಿತಾಂಶ ಸಿಕ್ಕಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಇದು ಕೊರೊನಾ ವೈರಾಣುವಿನ ಬೇರೆ ಬೇರೆ ಮಾದರಿಗಳ ವಿರುದ್ಧ ಹೋರಾಡಲು ಹೆಚ್ಚು ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲು ಸಹಕರಿಸುತ್ತದೆ.

ಅಧ್ಯಯನಕ್ಕೆ ಒಳಪಡಿಸಿದವರಲ್ಲಿ ಮೊದಲ ಡೋಸ್ ಆಸ್ಟ್ರಾಜೆನಕಾ ಲಸಿಕೆ ಪಡೆದ 8ರಿಂದ 12ನೇ ವಾರಕ್ಕೆ ಎರಡನೇ ಡೋಸ್​ ಪಡೆದವರ ದೇಹದಲ್ಲಿರುವುದಕ್ಕಿಂತ ಎರಡು ಪಟ್ಟು ಹೆಚ್ಚಿನ ಪ್ರತಿಕಾಯಗಳು 15ರಿಂದ 25ನೇ ವಾರದಲ್ಲಿ ಎರಡನೇ ಡೋಸ್​ ಪಡೆದವರ ದೇಹದಲ್ಲಿ ಸೃಷ್ಟಿಯಾಗಿದೆ. ಅದನ್ನು 44ರಿಂದ 45ನೇ ವಾರಕ್ಕೆ ಏರಿಸಿದಾಗ ಪ್ರತಿಕಾಯಗಳ ಪ್ರಮಾಣದಲ್ಲಿ ಇನ್ನೂ ಏರಿಕೆ ಕಂಡಿದೆ. ಇದು ಎರಡು ಡೋಸ್​ಗಳ ನಡುವಿನ ಅಂತರ ಹೆಚ್ಚಿದಷ್ಟೂ ಪ್ರತಿಕಾಯಗಳ ಅಭಿವೃದ್ಧಿ ಹೆಚ್ಚುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ತಜ್ಞರು ತಿಳಿಸಿದ್ದಾರೆ. ಲಸಿಕೆ ಅಭಿವೃದ್ಧಿಪಡಿಸಿದ ಆರಂಭದಲ್ಲಿ ವೈದ್ಯಕೀಯ ಪರೀಕ್ಷೆಯ ಭಾಗವಾಗಿದ್ದವರನ್ನೇ ಈಗ ಮತ್ತೆ ಪರಿಶೀಲನೆಗೆ ಒಳಪಡಿಸಿದ್ದು, ಈ ಅಂಶಗಳು ಕಂಡುಬಂದಿವೆ.

ಆಸ್ಟ್ರಾಜೆನೆಕಾ ಲಸಿಕೆಯನ್ನು ಭಾರತದಲ್ಲಿ ಕೊವಿಶೀಲ್ಡ್​ ಹೆಸರಿನಲ್ಲಿ ತಯಾರಿಸಿದ್ದು, ಸದ್ಯ ಭಾರತದ ಲಸಿಕೆ ವಿತರಣೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದೆ. ಈವರೆಗೆ ಸುಮಾರು 32ಕೋಟಿ ಡೋಸ್​ ಕೊವಿಶೀಲ್ಡ್​ ಲಸಿಕೆಯನ್ನು ಭಾರತದಲ್ಲಿ ವಿತರಿಸಲಾಗಿದ್ದು, ದೇಶದ ಲಸಿಕೆ ವಿತರಣೆಯ ಶೇ.88ರಷ್ಟು ಪ್ರಮಾಣ ಕೊವಿಶೀಲ್ಡ್​ನದ್ದಾಗಿದೆ. ಆರಂಭಿಕ ಹಂತದಲ್ಲಿ ಎರಡು ಡೋಸ್​ಗಳ ನಡುವಿನ ಅಂತರವನ್ನು 4ರಿಂದ 6 ವಾರ ಎಂದು ಭಾರತದಲ್ಲಿ ನಿಗದಿಪಡಿಸಲಾಗಿತ್ತಾದರೂ ಅದನ್ನೀಗ 12ರಿಂದ 16ವಾರಗಳಿಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಆಸ್ಟ್ರಾಜೆನೆಕಾ ಲಸಿಕೆಯ ಮೊದಲ ಡೋಸ್​ 12 ವಾರಗಳ ನಂತರ ಹೆಚ್ಚು ಪರಿಣಾಮಕಾರಿ; ಎರಡನೇ ಡೋಸ್​ ಶಕ್ತಿವರ್ಧಕ; ಆ್ಯಂಡ್ರೂ ಪೊಲಾರ್ಡ್

Corona Vaccine: ಎರಡು ಡೋಸ್​ ಕೊರೊನಾ ಲಸಿಕೆ ಪಡೆದವರಿಗೆ ಶುಭಸುದ್ದಿ: ಐಸಿಎಂಆರ್​ ಅಧ್ಯಯನದ ಪ್ರಾಥಮಿಕ ವರದಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ