ಆಸ್ಟ್ರಾಜೆನೆಕಾ ಲಸಿಕೆಯ ಮೊದಲ ಡೋಸ್​ 12 ವಾರಗಳ ನಂತರ ಹೆಚ್ಚು ಪರಿಣಾಮಕಾರಿ; ಎರಡನೇ ಡೋಸ್​ ಶಕ್ತಿವರ್ಧಕ – ಆ್ಯಂಡ್ರೂ ಪೊಲಾರ್ಡ್

Corona Vaccine: ಎರಡು ಡೋಸ್​ಗಳ ನಡುವಿನ ಅಂತರ ಒಂದು ಪ್ರಮುಖ ವಿಚಾರ. ಮೊದಲ ಡೋಸ್​ ಪ್ರತಿಕಾಯಗಳನ್ನು ವೃದ್ಧಿಸಿದರೆ ಎರಡನೇ ಡೋಸ್ ಶಕ್ತಿವರ್ಧಕದಂತೆ ಕಾರ್ಯ ನಿರ್ವಹಿಸುತ್ತದೆ. ಎರಡನೇ ಡೋಸ್ ಕೊಂಚ ವಿಳಂಬವಾದರೆ ಮೊದಲ ಡೋಸ್​ಗೆ ಕೆಲಸ ಮಾಡಲು ಮತ್ತಷ್ಟು ಸಮಯ ಸಿಕ್ಕಂತಾಗುತ್ತದೆ.

ಆಸ್ಟ್ರಾಜೆನೆಕಾ ಲಸಿಕೆಯ ಮೊದಲ ಡೋಸ್​ 12 ವಾರಗಳ ನಂತರ ಹೆಚ್ಚು ಪರಿಣಾಮಕಾರಿ; ಎರಡನೇ ಡೋಸ್​ ಶಕ್ತಿವರ್ಧಕ - ಆ್ಯಂಡ್ರೂ ಪೊಲಾರ್ಡ್
ಆಸ್ಟ್ರಾಜೆನೆಕಾ ಲಸಿಕೆ
Follow us
TV9 Web
| Updated By: Skanda

Updated on:Jun 19, 2021 | 11:23 AM

ದೆಹಲಿ: ಭಾರತದಲ್ಲಿ ಕೊರೊನಾ ಲಸಿಕೆಯ ಕುರಿತು ದೊಡ್ಡ ಮಟ್ಟದ ಚರ್ಚೆ ಆರಂಭದಿಂದಲೂ ನಡೆಯುತ್ತಿದೆ. ಕೊವ್ಯಾಕ್ಸಿನ್​ಗೆ ಮಾನ್ಯತೆ ನೀಡುವ ಹಂತದಿಂದ ಶುರುವಾದ ಬಿಸಿಬಿಸಿ ಮಾತುಕತೆ ನಂತರದಲ್ಲಿ ಕೊವಿಶೀಲ್ಡ್​, ಕೊವ್ಯಾಕ್ಸಿನ್​ನಲ್ಲಿ ಯಾವುದು ಉತ್ತಮ ಎಂಬಲ್ಲಿಂದ ಹಿಡಿದು ಇದೀಗ ಕೊವಿಶೀಲ್ಡ್​ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರದ ಹೆಚ್ಚಳದ ತನಕ ವಿವಿಧ ಹಂತಗಳನ್ನು ದಾಟಿ ಬಂದು ನಿಂತಿದೆ. ಕೊವಿಶೀಲ್ಡ್​ ಲಸಿಕೆಯನ್ನು ಭಾರತದಲ್ಲಿ ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ್ದರೂ ಅದು ಮೂಲದಲ್ಲಿ ಆಸ್ಟ್ರಾಜೆನೆಕಾ AZD1222 ಹೆಸರಿನ ಕೊರೊನಾ ಲಸಿಕೆಯಾಗಿದೆ. ಪ್ರಸ್ತುತ ಇದೇ ಆಸ್ಟ್ರಾಜೆನೆಕಾ ಲಸಿಕೆಯ ಮುಖ್ಯ ನಿರ್ವಾಹಕ ಅಧಿಕಾರಿ ಸಂದರ್ಶನವೊಂದರಲ್ಲಿ ಸದರಿ ಲಸಿಕೆಯು ಯಾವ ಹಂತದಲ್ಲಿ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ ಎಂಬ ಬಗ್ಗೆ ಮಾತನಾಡಿದ್ದಾರೆ. ಅವು ಹೇಳುವ ಪ್ರಕಾರ ಆಸ್ಟ್ರಾಜೆನೆಕಾ ಲಸಿಕೆ ಪಡೆದ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ದೇಹದೊಳಗಿನ ಪ್ರತಿಕಾಯಗಳ ಮಟ್ಟ ಗಣನೀಯ ಹಂತದಲ್ಲಿ ಏರಿಕೆ ಕಾಣಲಿದೆ. ಭಾರತದಲ್ಲಿ ಸದ್ಯಕ್ಕೆ ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರವನ್ನು 12ರಿಂದ 16 ವಾರಗಳಿಗೆ ಹೆಚ್ಚಿಸಲಾಗಿದ್ದು, ಇನ್ನೊಂದಷ್ಟು ಲೆಕ್ಕಾಚಾರಗಳಿಗೆ ಇದು ನಾಂದಿ ಹಾಡಿದೆ.

ಭಾರತದಲ್ಲಿ ಈ ಮೊದಲು ಕೊವಿಶೀಲ್ಡ್ ಲಸಿಕೆಯ ಎರಡು ಡೋಸ್​ಗಳ ನಡುವಿನ ಅಂತರ 6ರಿಂದ 8ವಾರ ಇತ್ತು. ಆದರೆ, ಅದನ್ನು ನಂತರ 12ರಿಂದ 16ವಾರಕ್ಕೆ ಹೆಚ್ಚಿಸಲಾಗಿದೆ. ಸರ್ಕಾರದ ಈ ನಿರ್ಧಾರ ಸಾಕಷ್ಟು ಗೊಂದಲ, ಅನುಮಾನ, ಚರ್ಚೆಗಳಿಗೂ ಕಾರಣವಾಗಿದೆ. ಬಹುತೇಕರು ಅಂತರ ಹೆಚ್ಚುವುದರಿಂದ ಲಸಿಕೆಯ ಶಕ್ತಿ ಕುಂದುವುದಿಲ್ಲವೇ ಎಂಬ ಆತಂಕವನ್ನೂ ಹೊರಹಾಕಿದ್ದರು. ಇದೀಗ ಆಸ್ಟ್ರಾಜೆನೆಕಾ ಲಸಿಕೆಯ ಮುಖ್ಯ ನಿರ್ವಾಹಕ ಅಧಿಕಾರಿ ಹೇಳಿರುವ ಮಾತು ಕೂಡಾ ಈ ಗೊಂದಲವನ್ನು ಮುಂದುವರೆಸುವ ಅಥವಾ ಹೆಚ್ಚಿಸುವ ಸಾಧ್ಯತೆ ಇದೆ.

ಆದರೆ, ಮುಖ್ಯ ನಿರ್ವಾಹಕ ಅಧಿಕಾರಿ ಪ್ರೊ. ಆ್ಯಂಡ್ರೂ ಪೊಲಾರ್ಡ್​ ಗಮನಾರ್ಹ ಅಂಶವೊಂದನ್ನು ಉಲ್ಲೇಖಿಸಿದ್ದಾರೆ. ಅವರು ಹೇಳಿರುವ ಪ್ರಕಾರ ಆಸ್ಟ್ರಾಜೆನೆಕಾ ಲಸಿಕೆ ಪಡೆದ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ದೇಹದೊಳಗಿನ ಪ್ರತಿಕಾಯಗಳ ಮಟ್ಟ ಗಣನೀಯ ಹಂತದಲ್ಲಿ ಏರಿಕೆ ಕಾಣಲಿದೆ ಎಂಬ ಮಾತು ಬ್ರಿಟನ್​ಗೆ ಅನ್ವಯಿಸುತ್ತದೆ ಎಂದ ಮಾತ್ರಕ್ಕೆ ಭಾರತದಲ್ಲೂ ಹಾಗೆಯೇ ಆಗುತ್ತದೆ ಎಂದು ನಿರ್ಧರಿಸುವುದು ಸಾಧ್ಯವಿಲ್ಲ. ಈ ಎರಡೂ ದೇಶಗಳ ನಡುವೆ ಪ್ರಾಕೃತಿಕ ಸ್ಥಿತಿಗತಿಗಳಿಂದ ಹಿಡಿದು, ಜೀವನಶೈಲಿ ತನಕ ಸಾಕಷ್ಟು ವ್ಯತ್ಯಾಸ ಇರುವುದರಿಂದ ಎರಡನ್ನೂ ಪ್ರತ್ಯೇಕವಾಗಿಯೇ ನೋಡಬೇಕಾಗುತ್ತದೆ ಎಂದಿದ್ದಾರೆ.

ಅಲ್ಲದೇ, ಭಾರತದಲ್ಲಿ ಲಸಿಕೆ ವಿತರಣೆಯ ಆದ್ಯತೆ ಎಲ್ಲಾ ಜನರಿಗೂ ಒಂದು ಡೋಸ್​ ಲಸಿಕೆಯನ್ನಾದರೂ ಆಸದಷ್ಟು ಬೇಗ ತಲುಪಿಸಬೇಕು ಎನ್ನುವುದಾಗಿದ್ದು, ಸದ್ಯ ದೇಶದಲ್ಲಿ ಕೊರೊನಾ ಎರಡನೇ ಅಲೆ ಉಂಟುಮಾಡಿರುವ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿರುವ ಜನ ಸಂಖ್ಯೆಯನ್ನು ಏಕಾಏಕಿ ನಿಭಾಯಿಸುವುದು ಸಲೀಸಲ್ಲ ಎನ್ನುವುದನ್ನೂ ಅರ್ಥೈಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇವೇಳೆ ಇನ್ನೊಂದು ವಿಚಾರವನ್ನು ಸ್ಪಷ್ಟಪಡಿಸಿರುವ ಪೊಲಾರ್ಡ್, ಆಕ್ಸ್​ಫರ್ಡ್​ ಆಸ್ಟ್ರಾಜೆನೆಕಾ ಲಸಿಕೆ ಒಂದು ಡೋಸ್​ನಲ್ಲೇ ಪೂರೈಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಕೊರೊನಾ ವಿರುದ್ಧ ಪ್ರಬಲವಾಗಿ ಹೋರಾಡಲು ಎರಡು ಡೋಸ್​ಗಳ ಅವಶ್ಯಕತೆ ಇದೆ. ಆದರೆ, ಲಸಿಕೆಯ ಕೊರತೆ ಉಂಟಾದಾಗ ಅದಕ್ಕೆ ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕಾಗುತ್ತದೆ ಎನ್ನುವುದು ಅರ್ಥವಾಗುವ ವಿಚಾರ ಎಂದಿದ್ದಾರೆ.

ಎರಡು ಡೋಸ್​ಗಳ ನಡುವಿನ ಅಂತರ ಒಂದು ಪ್ರಮುಖ ವಿಚಾರ. ಮೊದಲ ಡೋಸ್​ ಪ್ರತಿಕಾಯಗಳನ್ನು ವೃದ್ಧಿಸಿದರೆ ಎರಡನೇ ಡೋಸ್ ಶಕ್ತಿವರ್ಧಕದಂತೆ ಕಾರ್ಯ ನಿರ್ವಹಿಸುತ್ತದೆ. ಎರಡನೇ ಡೋಸ್ ಕೊಂಚ ವಿಳಂಬವಾದರೆ ಮೊದಲ ಡೋಸ್​ಗೆ ಕೆಲಸ ಮಾಡಲು ಮತ್ತಷ್ಟು ಸಮಯ ಸಿಕ್ಕಂತಾಗುತ್ತದೆ. ಇಂಗ್ಲೆಂಡ್​ನಲ್ಲಿ ನಡೆದ ಅಧ್ಯಯನಗಳು ಲಸಿಕೆಗಳ ನಡುವಿನ 12 ವಾರ ಇದ್ದರೆ ಹೆಚ್ಚು ಪರಿಣಾಮಕಾರಿ ಎನ್ನುವುದನ್ನು ತಿಳಿಸಿವೆ. ಇತ್ತ ಬ್ರಿಟನ್​ ಕೂಡಾ ಆಲ್ಫಾ ಮಾದರಿಯ ಅಬ್ಬರದ ನಡುವೆಯೇ ಎರಡು ಡೋಸ್​ಗಳ ನಡುವಿನ ಅಂತರವನ್ನು 12 ವಾರ ಇಟ್ಟುಕೊಂಡೇ ಪರಿಸ್ಥಿತಿ ನಿಭಾಯಿಸಿದೆ ಎನ್ನುವುದು ಗಮನಾರ್ಹ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜಾನ್ಸನ್​ ಅಂಡ್​ ಜಾನ್ಸನ್​ ಸಂಸ್ಥೆಯ ಸಿಂಗಲ್​ ಡೋಸ್​ ಕೊರೊನಾ ಲಸಿಕೆಯನ್ನು ಭಾರತಕ್ಕೆ ತರಲು ಪ್ರಯತ್ನ

Published On - 11:23 am, Sat, 19 June 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್