AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಸೆಳೆಯುವ ಪ್ರಯತ್ನದಲ್ಲಿ ಭಾರತದ ವೈರತ್ವ ಕಟ್ಟಿಕೊಂಡ್ರಾ ಯೂನಸ್?

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಚೀನಾವನ್ನು ಸೆಳೆಯುವ ಪ್ರಯತ್ನದಲ್ಲಿ ಭಾರತದ ವೈರತ್ವ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಂತಿದೆ. ಅವರು ಇತ್ತೀಚೆಗೆ ಚೀನಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತದ ಏಳು ಈಶಾನ್ಯ ರಾಜ್ಯಗಳ ಕುರಿತು ಬೀಜಿಂಗ್​ನಲ್ಲಿ ಮಾತನಾಡಿದ್ದರು. ಭಾರತದ ಏಳು ರಾಜ್ಯಗಳನ್ನು ಪ್ರಸ್ತಾಪಿಸಿದ ಯೂನಸ್ ಈ ರಾಜ್ಯಗಳಿಗೆ ಸಮುದ್ರ ಮಾರ್ಗ ಇಲ್ಲದಿರುವುದು, ಇಡೀ ಪ್ರದೇಶಕ್ಕೆ ಬಾಂಗ್ಲಾದೇಶ ಮಾತ್ರ ಸಾಗರದ ರಕ್ಷಕನಾಗಿದೆ ಎಂದು ಹೇಳಿದ್ದಾರೆ.

ಚೀನಾ ಸೆಳೆಯುವ ಪ್ರಯತ್ನದಲ್ಲಿ ಭಾರತದ ವೈರತ್ವ ಕಟ್ಟಿಕೊಂಡ್ರಾ ಯೂನಸ್?
ಯೂನಸ್
Follow us
ನಯನಾ ರಾಜೀವ್
|

Updated on:Apr 01, 2025 | 11:26 AM

ಬೀಜಿಂಗ್, ಏಪ್ರಿಲ್ 1: ಭಾರತ ಹಾಗೂ ಬಾಂಗ್ಲಾದೇಶದ ಸಂಬಂಧ ಶೇಖ್ ಹಸೀನಾ ರಾಜೀನಾಮೆ ಬಳಿಕ ಹಳಸಿದೆ. ಹಸೀನಾರಿಗೆ ಭಾರತದಲ್ಲಿ ನೆಲೆ ಕಲ್ಪಿಸಿಕೊಟ್ಟಿದ್ದಕ್ಕೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ (Muhammad Yunus)ಈ ಹಿಂದೆ ಕಿಡಿಕಾರಿದ್ದರು. ಇದೀಗ ಚೀನಾವನ್ನು ಸೆಳೆಯುವ ಪ್ರಯತ್ನದಲ್ಲಿ  ಭಾರತದ ವೈರತ್ವ ಕಟ್ಟಿಕೊಳ್ಳುವಂತೆ ಕಾಣುತ್ತಿದೆ.

ಅವರು ಇತ್ತೀಚೆಗೆ ಚೀನಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತದ ಏಳು ಈಶಾನ್ಯ ರಾಜ್ಯಗಳ ಕುರಿತು ಬೀಜಿಂಗ್​ನಲ್ಲಿ ಮಾತನಾಡಿದ್ದರು. ಭಾರತದ ಏಳು ರಾಜ್ಯಗಳನ್ನು ಪ್ರಸ್ತಾಪಿಸಿದ ಯೂನಸ್ ಈ ರಾಜ್ಯಗಳಿಗೆ ಸಮುದ್ರ ಮಾರ್ಗ ಇಲ್ಲದಿರುವುದು, ಇಡೀ ಪ್ರದೇಶಕ್ಕೆ ಬಾಂಗ್ಲಾದೇಶ ಮಾತ್ರ ಸಾಗರದ ರಕ್ಷಕನಾಗಿದೆ ಎಂದು ಹೇಳಿದ್ದಾರೆ.

ಚೀನಾ ವಿಸ್ತರಣೆ ಮಾಡಲು ಬಾಂಗ್ಲಾದೇಶವನ್ನು ಬಳಸಬಹುದು ಎಂದು ಹೇಳಿದ್ದರು. ತನ್ನ ನೆರೆಯ ರಾಷ್ಟ್ರಗಳಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿರುವುದು ಭಾರತಕ್ಕೆ ಕಳವಳಕಾರಿಯಾಗಿದೆ. ಭಾರತದ ಈಶಾನ್ಯ ರಾಜ್ಯಗಳ ಬಗ್ಗೆ ಮಾತ್ರವಲ್ಲ, ಯೂನಸ್ ನೇಪಾಳ ಮತ್ತು ಭೂತಾನ್ ಬಗ್ಗೆಯೂ ಉಲ್ಲೇಖಿಸಿದರು, ಬಾಂಗ್ಲಾದೇಶದಲ್ಲಿ ಹೂಡಿಕೆ ಮಾಡುವಂತೆ ಚೀನಾವನ್ನು ಆಕರ್ಷಿಸಲು ಪ್ರಯತ್ನಿಸಿದರು.

ಇದನ್ನೂ ಓದಿ
Image
ಶೇಖ್ ಹಸೀನಾ ಭಾಷಣಕ್ಕೂ ಭಾರತಕ್ಕೂ ಸಂಬಂಧವಿಲ್ಲ; ಬಾಂಗ್ಲಾದೇಶಕ್ಕೆ ಸ್ಪಷ್ಟನೆ
Image
ಶೇಖ್ ಹಸೀನಾ ಹಸ್ತಾಂತರ ಕೋರಿ ಭಾರತಕ್ಕೆ ಬಾಂಗ್ಲಾದೇಶದಿಂದ ಪತ್ರ ರವಾನೆ
Image
49 ವರ್ಷಗಳ ಹಿಂದೆಯೂ ಶೇಖ್ ಹಸೀನಾಗೆ ಆಶ್ರಯ ನೀಡಿ ಪ್ರಾಣ ಉಳಿಸಿತ್ತು ಭಾರತ

ನೇಪಾಳ ಮತ್ತು ಭೂತಾನ್ ಅನಿಯಮಿತ ಜಲವಿದ್ಯುತ್ ಶಕ್ತಿಯನ್ನು ಹೊಂದಿವೆ, ಅದು ಒಂದು ಆಶೀರ್ವಾದ. ಬಾಂಗ್ಲಾದೇಶದಿಂದ, ನೀವು ಎಲ್ಲಿ ಬೇಕಾದರೂ ಹೋಗಬಹುದು ಎಂದು ಯೂನಸ್ ಹೇಳಿದ್ದಾರೆ. ಭಾರತದ ಈಶಾನ್ಯ ಭಾಗದ ಏಳು ರಾಜ್ಯಗಳಿಗೆ ಸಮುದ್ರ ಮಾರ್ಗದ ನೇರ ಸಂಪರ್ಕ ಇಲ್ಲದಿರುವುದು ಚೀನಾ ಮತ್ತು ಬಾಂಗ್ಲಾದೇಶಕ್ಕೆ ಅವಕಾಶ ಸೃಷ್ಟಿಸಿದೆ. ಚೀನಾ ದೇಶವು, ಬಾಂಗ್ಲಾದೇಶದ ವಿಶಿಷ್ಟ ಸ್ಥಾನದ ಪ್ರಯೋಜನವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಯೂನಸ್ ಹೇಳಿದ್ದಾರೆ.

ಮತ್ತಷ್ಟು ಓದಿ: ಬಾಂಗ್ಲಾದೇಶದಲ್ಲಿ ಗುರುವಾರ ಮುಹಮ್ಮದ್ ಯೂನಸ್ ನೇತೃತ್ವದ ಹಂಗಾಮಿ ಸರ್ಕಾರ ಪ್ರಮಾಣ ವಚನ ಸ್ವೀಕಾರ

ಭಾರತವನ್ನು ಸುತ್ತವರಿಯಲು ಬಾಂಗ್ಲಾದೇಶವು ಚೀನಾಕ್ಕೆ ಆಹ್ವಾನ ನೀಡಿರುವುದು ದೇಶದ ಈಶಾನ್ಯ ಭಾಗದ ಭದ್ರತೆಗೆ ಅಪಾಯಕಾರಿ ಎಂದು ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ ತೀಸ್ತಾ ನದಿಗೆ ಸಂಬಂಧಿಸಿದ ಯೋಜನೆಗೆ ನೆರವು ನೀಡಲು ಭಾರತವು ಕೆಲವು ತಿಂಗಳುಗಳ ಹಿಂದೆಯಷ್ಟೇ ಒಪ್ಪಿತ್ತು. ಈ ಯೋಜನೆಯಲ್ಲಿ ಚೀನಾ ಪಾಲುದಾರಿಕೆ ಹೊಂದಿದರೆ, ಚಿಕನ್ಸ್‌ ನೆಕ್ ಪ್ರದೇಶದಲ್ಲಿ ಚೀನಾದ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದು ಭಾರತವು ತನ್ನ ಕಳವಳವನ್ನು ಬಾಂಗ್ಲಾದೇಶಕ್ಕೆ ತಿಳಿಸಿತ್ತು.

ಬ್ಯಾಂಕಾಕ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯೂನಸ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತುಕತೆ ನಡೆಸುವುದು ಇನ್ನೂ ಖಚಿತವಾಗಿಲ್ಲ. 2017ರಲ್ಲಿ ಬಾಂಗ್ಲಾದೇಶವು, ಚಿತ್ತಗಾಂಗ್ ಮತ್ತು ಮೊಂಗ್ಲಾ ಬಂದರಿನಿಂದ ಸರಕುಗಳನ್ನು ಸಾಗಿಸಲು ಭಾರತಕ್ಕೆ ಅವಕಾಶ ಕೊಡುವುದಾಗಿ ಒಪ್ಪಿಕೊಂಡಿತ್ತು.

ಮೊಹಮ್ಮದ್ ಯೂನಸ್ ಹಿನ್ನೆಲೆ 1940ರಲ್ಲಿ ಚಿತ್ತಗಾಂಗ್‌ನಲ್ಲಿ ಜನಿಸಿದ ಅವರು ಸಾಮಾಜಿಕ ಕಾರ್ಯಕರ್ತ, ಬ್ಯಾಂಕರ್ ಮತ್ತು ಅರ್ಥಶಾಸ್ತ್ರಜ್ಞ. ಕಿರುಬಂಡವಾಳ ಬ್ಯಾಂಕ್ ಮೂಲಕ ಲಕ್ಷಾಂತರ ಜನರನ್ನು ಬಡತನದಿಂದ ಮೇಲೆತ್ತಿದ ಕೀರ್ತಿ ಇವರಿಗಿದೆ. ಅದಕ್ಕಾಗಿ ಅವರು 2006ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಕೂಡಾ ಪಡೆದುಕೊಂಡಿದ್ದಾರೆ. ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಯೂನಸ್ ಅವರನ್ನು ಅರಸಿ ಬಂದಿವೆ. ಸಂಸತ್ತನ್ನು ರದ್ದುಪಡಿಸುವುದು ಬಾಂಗ್ಲಾದೇಶದ ಕಾರ್ಯಕರ್ತರ ಪ್ರಮುಖ ಬೇಡಿಕೆಯಾಗಿದೆ. ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಮಿಲಿಟರಿ ಸರ್ಕಾರ ಅಥವಾ ಸೇನೆಯ ಬೆಂಬಲವಿರುವ ಯಾವುದೇ ಸರ್ಕಾರವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪ್ರತಿಭಟನಾಕಾರರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗು ಇಲ್ಲಿ ಕ್ಲಿಕ್ ಮಾಡಿ 

Published On - 11:24 am, Tue, 1 April 25

ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
ನಗರದ ಲ್ಯಾಂಡ್ ಮಾರ್ಕ್​ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ
ನಗರದ ಲ್ಯಾಂಡ್ ಮಾರ್ಕ್​ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ
ಬದುಕಿರುವವರು ಸತ್ತಂತೆ ಕನಸಿನಲ್ಲಿ ಬಂದರೆ ಏನರ್ಥ? ವಿಡಿಯೋ ನೋಡಿ
ಬದುಕಿರುವವರು ಸತ್ತಂತೆ ಕನಸಿನಲ್ಲಿ ಬಂದರೆ ಏನರ್ಥ? ವಿಡಿಯೋ ನೋಡಿ