Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಸುರಕ್ಷಿತ ರಾಷ್ಟ್ರಗಳ ಪಟ್ಟಿ: ಭಾರತವನ್ನು ಹಿಂದಿಕ್ಕಿದ ಪಾಕಿಸ್ತಾನ, ಅಮೆರಿಕ, ಚೀನಾ ಸ್ಥಿತಿ ಏನು?

ವಿಶ್ವದ ಸುರಕ್ಷಿತ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಅಗ್ರಸ್ಥಾನ ಅಮೆರಿಕ, ಬ್ರಿಟನ್ ಅಥವಾ ಯಾವುದೇ ಪ್ರಬಲ ಯುರೋಪಿಯನ್ ದೇಶವಲ್ಲ. ಬದಲಿಗೆ, ಇದು ನೈಋತ್ಯ ಯುರೋಪಿನ ಒಂದು ಸಣ್ಣ ದೇಶವಾಗಿದ್ದು, ಇದು ಸ್ಪೇನ್ ಮತ್ತು ಫ್ರಾನ್ಸ್ ನಡುವೆ ಇದೆ. ಅದೇ ಅಂಡೋರಾ.ಆ ದೇಶದ ಜೀವನ ಮಟ್ಟ ಮತ್ತು ಅಲ್ಲಿನ ಅಪರಾಧ ದರದ ಆಧಾರದ ಮೇಲೆ ದೇಶವನ್ನು ವಿಶ್ವದ ಸುರಕ್ಷಿತ ದೇಶವೆಂದು ಘೋಷಿಸಲಾಗಿದೆ.

ವಿಶ್ವದ ಸುರಕ್ಷಿತ ರಾಷ್ಟ್ರಗಳ ಪಟ್ಟಿ: ಭಾರತವನ್ನು ಹಿಂದಿಕ್ಕಿದ ಪಾಕಿಸ್ತಾನ, ಅಮೆರಿಕ, ಚೀನಾ ಸ್ಥಿತಿ ಏನು?
ಅಂಡೋರಾ
Follow us
ನಯನಾ ರಾಜೀವ್
|

Updated on: Apr 01, 2025 | 11:47 AM

ಲಂಡನ್, ಏಪ್ರಿಲ್ 1: ವಿಶ್ವದ ಸುರಕ್ಷಿತ ರಾಷ್ಟ್ರಗಳ(Safest Country)  ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಮೆರಿಕ, ಬ್ರಿಟನ್ ಅಥವಾ ಯಾವುದೇ ಪ್ರಬಲ ಯುರೋಪಿಯನ್ ದೇಶಗಳು ಪಡೆದಿಲ್ಲ. ಬದಲಾಗಿ ನೈಋತ್ಯ ಯುರೋಪಿನಲ್ಲಿರುವ ಸ್ಪೇನ್ ಮತ್ತು ಫ್ರಾನ್ಸ್ ನಡುವೆ ನೆಲೆಸಿರುವ ಒಂದು ಸಣ್ಣ ದೇಶವಾದ ಅಂಡೋರಾ ಮೊದಲ ಸ್ಥಾನದಲ್ಲಿದೆ.

ನಂಬಿಯೊ ಸುರಕ್ಷತಾ ಸೂಚ್ಯಂಕದ ಪ್ರಕಾರ, ಅಂಡೋರಾ ವಿಶ್ವದ ಅತ್ಯಂತ ಸುರಕ್ಷಿತ ದೇಶವೆಂದು ಗುರುತಿಸಲ್ಪಟ್ಟಿದೆ. ಸುರಕ್ಷಿತ ದೇಶಗಳ ಶ್ರೇಣೀಕರಣವನ್ನು ಆ ದೇಶದ ಜೀವನ ಮಟ್ಟ ಮತ್ತು ಅಪರಾಧ ದರದ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ. ಕುತೂಹಲಕಾರಿ ವಿಷಯವೆಂದರೆ ಈ ಶ್ರೇಯಾಂಕದಲ್ಲಿ ಭಾರತದ ಶ್ರೇಯಾಂಕ ಅಮೆರಿಕ ಮತ್ತು ಬ್ರಿಟನ್‌ಗಿಂತ ಬಹಳ ಮುಂದಿದೆ.

ಭಾರತದ ಶ್ರೇಯಾಂಕದ ಬಗ್ಗೆ ಮಾತನಾಡುವ ಮೊದಲ ಪಟ್ಟಿಯಲ್ಲಿರುವ ಅಗ್ರ ಐದು ದೇಶಗಳು ಯಾವುದೆಂಬುದನ್ನು ನೋಡೋಣ. ಅಂಡೋರಾ ನಂತರ, ಪಟ್ಟಿಯಲ್ಲಿ ಎರಡನೇ ಸ್ಥಾನ ಯುನೈಟೆಡ್ ಅರಬ್ ಎಮಿರೇಟ್ಸ್ ಆಗಿದೆ.

ಮತ್ತಷ್ಟು ಓದಿ: ಭಾರತದ ಅತ್ಯಂತ ಶ್ರೀಮಂತ ಶಾಸಕರು: ಡಿಕೆ ಶಿವಕುಮಾರ್​ ನಂ.2, ಟಾಪ್​ 10ರಲ್ಲಿ ಕರ್ನಾಟಕದ ನಾಲ್ವರಿಗೆ ಸ್ಥಾನ

ಸುರಕ್ಷಿತ ರಾಷ್ಟ್ರಗಳ ಪಟ್ಟಿಯಲ್ಲಿ ಕತಾರ್ ಮೂರನೇ ಸ್ಥಾನದಲ್ಲಿದ್ದರೆ, ತೈವಾನ್ ಮತ್ತು ಒಮಾನ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ತೈವಾನ್ ಅಂತಾರಾರಾಷ್ಟ್ರೀಯ ಮಟ್ಟದಲ್ಲಿ ಸ್ವತಂತ್ರ ರಾಷ್ಟ್ರವೆಂದು ಗುರುತಿಸಲ್ಪಟ್ಟಿಲ್ಲವಾದರೂ, ಅದು ಚೀನಾದಿಂದ ಸ್ವತಂತ್ರ ಘಟಕವಾಗಿ ತನ್ನನ್ನು ತಾನು ತೋರಿಸಿಕೊಳ್ಳುತ್ತದೆ. ಅಮೆರಿಕ, ಬ್ರಿಟನ್‌ಗಿಂತ ಭಾರತ ಮುಂದಿದೆ.

ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯ ಮತ್ತು ಉನ್ನತ ತಾಂತ್ರಿಕ ಸಾಮರ್ಥ್ಯಗಳನ್ನು ಹೊಂದಿರುವ ಅಮೆರಿಕವನ್ನು ಸುರಕ್ಷಿತ ರಾಷ್ಟ್ರಗಳ ಟಾಪ್ 50 ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ವಿಶ್ವದ ಸುರಕ್ಷಿತ ರಾಷ್ಟ್ರಗಳಲ್ಲಿ ಅಮೆರಿಕ 89 ನೇ ಸ್ಥಾನದಲ್ಲಿದೆ. ಆದರೆ ಬ್ರಿಟನ್ ಶ್ರೇಯಾಂಕದಲ್ಲಿ 87 ನೇ ಸ್ಥಾನದಲ್ಲಿದೆ. ಈ ಎರಡಕ್ಕೆ ಹೋಲಿಸಿದರೆ, ಭಾರತ ಶ್ರೇಯಾಂಕದಲ್ಲಿ ತುಂಬಾ ಮುಂದಿದೆ. ವಿಶ್ವದ ಸುರಕ್ಷಿತ ರಾಷ್ಟ್ರಗಳಲ್ಲಿ ಭಾರತ 66 ನೇ ಸ್ಥಾನದಲ್ಲಿದೆ.

ಪಾಕಿಸ್ತಾನವು ಭಾರತಕ್ಕಿಂತ ಮುಂದಿದೆ ಕುತೂಹಲಕಾರಿ ವಿಷಯವೆಂದರೆ ಈ ಶ್ರೇಯಾಂಕದಲ್ಲಿ ಪಾಕಿಸ್ತಾನದ ಶ್ರೇಯಾಂಕ 65 ಆಗಿದ್ದು, ಇದು ಭಾರತಕ್ಕಿಂತ ಒಂದು ಪಾಯಿಂಟ್ ಮೇಲಿದೆ.ಭಾರತದ ಮತ್ತೊಂದು ನೆರೆಯ ರಾಷ್ಟ್ರವಾದ ಚೀನಾ ಈ ಪಟ್ಟಿಯಲ್ಲಿ 15 ನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಸೇರಿಸಲಾದ ಒಟ್ಟು 147 ದೇಶಗಳಲ್ಲಿ ವೆನೆಜುವೆಲಾ ಕೊನೆಯ ಸ್ಥಾನದಲ್ಲಿದೆ. ಇವುಗಳ ನಂತರ ಪಪುವಾ ನ್ಯೂಗಿನಿಯಾ (146), ಹೈಟಿ (145), ಅಫ್ಘಾನಿಸ್ತಾನ (144) ಮತ್ತು ದಕ್ಷಿಣ ಆಫ್ರಿಕಾ (143) ಇವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ