ಬಾಂಗ್ಲಾದೇಶ: ಕೋರ್ಟ್​ಗೆ ಹಾಜರಾಗದ ಚಿನ್ಮಯ್ ದಾಸ್ ಪರ ವಕೀಲರು, ಜಾಮೀನು ಅರ್ಜಿ ವಿಚಾರಣೆ ಮುಂದಿನ ತಿಂಗಳಿಗೆ ಮುಂದೂಡಿಕೆ

ಬಾಂಗ್ಲಾದೇಶದಲ್ಲಿ ಬಂಧನಕ್ಕೊಳಗಾಗಿರುವ ಚಿನ್ಮಯ್​ ದಾಸ್ ಅವರ ಪರ ವಕೀಲರು ಕೋರ್ಟ್​ಗೆ ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾಕ ಹಿಂದೂ ಸಮುದಾಯವನ್ನು ಗುರಿಯಾಗಿಸಿ ನಡೆಸು ತ್ತಿರುವ ದಾಳಿಗಳು ಮುಂದುವರೆದಿದ್ದು, ಇಸ್ಕಾನ್‌ ಅರ್ಚಕ ಚಿನ್ಮಯ್‌ ಕೃಷ್ಣ ದಾಸ್‌ ಬಂಧನದ ಬೆನ್ನಲ್ಲೇ ಶನಿವಾರ ಮತ್ತೋರ್ವ ಅರ್ಚಕರಾದ ಶ್ಯಾಮ್‌ ದಾಸ್‌ ಪ್ರಭು ಎಂಬವರನ್ನು ಬಂಧಿಸಲಾಗಿತ್ತು.

ಬಾಂಗ್ಲಾದೇಶ: ಕೋರ್ಟ್​ಗೆ ಹಾಜರಾಗದ ಚಿನ್ಮಯ್ ದಾಸ್ ಪರ ವಕೀಲರು, ಜಾಮೀನು ಅರ್ಜಿ ವಿಚಾರಣೆ ಮುಂದಿನ ತಿಂಗಳಿಗೆ ಮುಂದೂಡಿಕೆ
ಚಿನ್ಮಯ್ ದಾಸ್
Image Credit source: Indian Express

Updated on: Dec 03, 2024 | 12:03 PM

ಬಾಂಗ್ಲಾದೇಶದಲ್ಲಿ ಬಂಧನಕ್ಕೊಳಗಾಗಿರುವ ಚಿನ್ಮಯ್​ ದಾಸ್ ಅವರ ಪರ ವಕೀಲರು ಕೋರ್ಟ್​ಗೆ ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾಕ ಹಿಂದೂ ಸಮುದಾಯವನ್ನು ಗುರಿಯಾಗಿಸಿ ನಡೆಸು ತ್ತಿರುವ ದಾಳಿಗಳು ಮುಂದುವರೆದಿದ್ದು, ಇಸ್ಕಾನ್‌ ಅರ್ಚಕ ಚಿನ್ಮಯ್‌ ಕೃಷ್ಣ ದಾಸ್‌ ಬಂಧನದ ಬೆನ್ನಲ್ಲೇ ಶನಿವಾರ ಮತ್ತೋರ್ವ ಅರ್ಚಕರಾದ ಶ್ಯಾಮ್‌ ದಾಸ್‌ ಪ್ರಭು ಎಂಬವರನ್ನು ಬಂಧಿಸಲಾಗಿತ್ತು.

ರವೀಂದ್ರ ಘೋಷ್ ಎಂದು ಗುರುತಿಸಲಾದ ವಕೀಲರೊಬ್ಬರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಢಾಕಾದಿಂದ ಸುಮಾರು 250 ಕಿಮೀ ಪ್ರಯಾಣಿಸಿದ್ದರು. ಆದರೆ, ಸ್ಥಳೀಯರು ನ್ಯಾಯಾಲಯದ ಆವರಣಕ್ಕೆ ಪ್ರವೇಶ ನಿರಾಕರಿಸಿದರು ಎಂದು ಅವರು ಹೇಳಿದರು.

ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣದಾಸ್‌ ಬಂಧನದ ವಿಚಾರ ವಿವಾದಕ್ಕೀಡಾಗಿರುವಂತೆಯೇ ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾಕ ಹಿಂದೂಗಳನ್ನು ಗುರಿಯಾಗಿಸಿ ಯಾವುದೇ ವ್ಯವಸ್ಥಿತ ದಾಳಿ ನಡೆಸಲಾಗಿಲ್ಲ. ನಿರ್ದಿಷ್ಟ ಆರೋಪದ ಆಧಾರದಲ್ಲಿಯೇ ಹಿಂದೂ ನಾಯಕರನ್ನು ಬಂಧಿಸಲಾಗಿದೆ.

ಮತ್ತಷ್ಟು ಓದಿ: ಬಾಂಗ್ಲಾದೇಶದಲ್ಲಿ ಚಿನ್ಮಯ್ ದಾಸ್ ಬಂಧನ: ಅಧಿಕಾರಿಗಳು, ನಿವೃತ್ತ ನ್ಯಾಯಮೂರ್ತಿಗಳಿಂದ ಪ್ರಧಾನಿ ಮೋದಿಗೆ ಪತ್ರ

ನಮ್ಮ ದೇಶದ ಕಾನೂನಿನ ಅನ್ವಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಬಾಂಗ್ಲಾದೇಶ ಸರ್ಕಾರವು ವಿಶ್ವಸಂಸ್ಥೆಗೆ ತಿಳಿಸಿದೆ. ಜಿನಿವಾದಲ್ಲಿ ನಡೆದ ಅಲ್ಪಸಂಖ್ಯಾಕರ ಸಮಸ್ಯೆಗಳ ಶೃಂಗಸಭೆಯ 17ನೇ ಅಧಿವೇಶನದಲ್ಲಿ ವಿಶ್ವಸಂಸ್ಥೆಗೆ ಬಾಂಗ್ಲಾದ ಖಾಯಂ ಪ್ರತಿನಿಧಿ ಆಗಿರುವ ತಾರೀಖ್‌ ಮೊಹಮ್ಮದ್‌ ಆರಿಫುಲ್‌ ಇಸ್ಲಾಮ್‌ ಈ ಹೇಳಿಕೆ ನೀಡಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ತಾರತಮ್ಯವನ್ನು ಪರಿಹರಿಸುವಂತೆ 68 ನಿವೃತ್ತ ನ್ಯಾಯಮೂರ್ತಿಗಳು, ಅಧಿಕಾರಿಗಳು ಮತ್ತು ಹಾಲಿ ಸಂಸದರ ಗುಂಪು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ. ಇಸ್ಕಾನ್​ನ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಬಂಧನಕ್ಕೆ ಸಂಬಂಧಿಸಿದಂತೆ ಅವರು ಮಧ್ಯಸ್ಥಿಕೆವಹಿಸಬೇಕೆಂದು ಮನವಿ ಮಾಡಿದರು.

ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಶೇಶ್ ಪಾಲ್ ವೈದ್, 68 ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು, IAS, IPS, IRS, IIS, IFS ಮತ್ತು ರಾಜ್ಯ ಅಧಿಕಾರಿಗಳ ಗುಂಪು. ಇಸ್ಕಾನ್​ನ ಚಿನ್ಮಯ್ ಕೃಷ್ಣ ಅವರ ಅನ್ಯಾಯದ ಬಂಧನ ಸೇರಿದಂತೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us