ಯೂನಸ್ ಬಾಂಗ್ಲಾದೇಶವನ್ನು ಅಮೆರಿಕಕ್ಕೆ ಮಾರುತ್ತಿದ್ದಾರೆ: ಶೇಖ್ ಹಸೀನಾ

ಬಾಂಗ್ಲಾ  ಮಾಜಿ ಪ್ರಧಾನಿ ಶೇಖ್ ಹಸೀನಾ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಅಧಿಕಾರದ ಗದ್ದುಗೆ ಏರಲು ಯೂನಸ್ ನಿಷೇಧಿತ ಭಯೋತ್ಪಾದಕ ಸಂಘಟನೆಯ ಸಹಾಯವನ್ನು ಪಡೆದಿದ್ದಾರೆ. ನಾವು ಒಂದೇ ಒಂದು ಭಯೋತ್ಪಾದಕ ದಾಳಿಯ ನಂತರ ಕಠಿಣ ಕ್ರಮ ಕೈಗೊಂಡಿದ್ದೆವು. ಅನೇಕ ಜನರನ್ನು ಬಂಧಿಸಲಾಗಿತ್ತು. ಆದರೆ ಈಗ ಬಾಂಗ್ಲಾದೇಶದ ಜೈಲುಗಳು ಖಾಲಿಯಾಗಿವೆ. ಯೂಬಸ್ ಎಲ್ಲರನ್ನೂ ಬಿಡುಗಡೆ ಮಾಡಿದ್ದಾರೆ, ಈಗ ಆ ಭಯೋತ್ಪಾದಕರು ಬಾಂಗ್ಲಾದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದಾರೆ ಎಂದು ದೂರಿದರು.

ಯೂನಸ್ ಬಾಂಗ್ಲಾದೇಶವನ್ನು ಅಮೆರಿಕಕ್ಕೆ ಮಾರುತ್ತಿದ್ದಾರೆ: ಶೇಖ್ ಹಸೀನಾ
ಯೂನಸ್

Updated on: May 26, 2025 | 8:17 AM

ಬಾಂಗ್ಲಾದೇಶದಲ್ಲಿನ ರಾಜಕೀಯ ಪ್ರಕ್ಷುಬ್ಧತೆಯ ನಡುವೆ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಯೂನಸ್ ಬಾಂಗ್ಲಾದೇಶವನ್ನು ಅಮೆರಿಕಕ್ಕೆ ಮಾರಾಟ ಮಾಡಲು ಹೊರಟಿದ್ದಾರೆ ಎಂದು ದೂರಿದ್ದಾರೆ. ಭಯೋತ್ಪಾದಕರ ಸಹಾಯದಿಂದ ಯೂನಸ್ ಬಾಂಗ್ಲಾದೇಶದ ಅಧಿಕಾರವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಈ ಭಯೋತ್ಪಾದಕ ಸಂಘಟನೆಗಳಲ್ಲಿ ಹಲವು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿಸಲ್ಪಟ್ಟಿವೆ ಎಂದು ಶೇಖ್ ಹಸೀನಾ ಹೇಳಿದ್ದಾರೆ.

ಬಾಂಗ್ಲಾದೇಶದ ಜೈಲುಗಳು ಖಾಲಿ ಖಾಲಿ
ಬಾಂಗ್ಲಾ  ಮಾಜಿ ಪ್ರಧಾನಿ ಶೇಖ್ ಹಸೀನಾ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಅಧಿಕಾರದ ಗದ್ದುಗೆ ಏರಲು ಯೂನಸ್ ನಿಷೇಧಿತ ಭಯೋತ್ಪಾದಕ ಸಂಘಟನೆಯ ಸಹಾಯವನ್ನು ಪಡೆದಿದ್ದಾರೆ. ನಾವು ಒಂದೇ ಒಂದು ಭಯೋತ್ಪಾದಕ ದಾಳಿಯ ನಂತರ ಕಠಿಣ ಕ್ರಮ ಕೈಗೊಂಡಿದ್ದೆವು. ಅನೇಕ ಜನರನ್ನು ಬಂಧಿಸಲಾಗಿತ್ತು. ಆದರೆ ಈಗ ಬಾಂಗ್ಲಾದೇಶದ ಜೈಲುಗಳು ಖಾಲಿಯಾಗಿವೆ. ಯೂಬಸ್ ಎಲ್ಲರನ್ನೂ ಬಿಡುಗಡೆ ಮಾಡಿದ್ದಾರೆ, ಈಗ ಆ ಭಯೋತ್ಪಾದಕರು ಬಾಂಗ್ಲಾದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದಾರೆ ಎಂದು ದೂರಿದರು.

ಅಕ್ರಮವಾಗಿ ಅಧಿಕಾರವನ್ನು ವಶಪಡಿಸಿಕೊಂಡಿರುವ ಈ ಉಗ್ರಗಾಮಿ ನಾಯಕನಿಗೆ ಸಂವಿಧಾನವನ್ನು ಮುಟ್ಟುವ ಹಕ್ಕನ್ನು ಯಾರು ಕೊಟ್ಟರು? ಅವರಿಗೆ ಜನರ ಆದೇಶವಿಲ್ಲ, ಅವರಿಗೆ ಯಾವುದೇ ಸಾಂವಿಧಾನಿಕ ಆಧಾರವಿಲ್ಲ. ಯೂನಸ್ ಮುಖ್ಯ ಸಲಹೆಗಾರ ಹುದ್ದೆಯನ್ನು ಅಲಂಕರಿಸಲು ಯಾವುದೇ ಅರ್ಹತೆಯೇ ಇಲ್ಲ ಎಂದು ಹಸೀನಾ ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ, ಸಂಸತ್ತು ಇಲ್ಲದೆ ಅವರು ಕಾನೂನನ್ನು ಹೇಗೆ ಬದಲಾಯಿಸಬಹುದು, ಇದು ಕಾನೂನುಬಾಹಿರ. ಅವರು ದೇಶದಲ್ಲಿ ಅವಾಮಿ ಲೀಗ್ ಅನ್ನು ನಿಷೇಧಿಸಿದ್ದಾರೆ.

ಇದನ್ನೂ ಓದಿ
ಯಾರೊಂದಿಗೆ ಯುದ್ಧಕ್ಕೆ ಸಜ್ಜಾಯ್ತು ಬಾಂಗ್ಲಾದೇಶ?
ಚೀನಾ ಸೆಳೆಯುವ ಪ್ರಯತ್ನದಲ್ಲಿ ಭಾರತದ ವೈರತ್ವ ಕಟ್ಟಿಕೊಂಡ್ರಾ ಯೂನಸ್?
ನಮ್ಮ ದೇಶದ ಅಲ್ಪಸಂಖ್ಯಾತರ ಬಗ್ಗೆ ಭಾರತ ಚಿಂತಿಸುವ ಅಗತ್ಯವಿಲ್ಲ; ಬಾಂಗ್ಲಾದೇಶ
ಬಾಂಗ್ಲಾದೇಶದಲ್ಲಿನ ಇಂದಿನ ಸ್ಥಿತಿಗೆ ಕಾರಣವಾದ 5 ಪ್ರಮುಖ ಅಂಶಗಳಿವು

ಮತ್ತಷ್ಟು ಓದಿ: 49 ವರ್ಷಗಳ ಹಿಂದೆಯೂ ಶೇಖ್ ಹಸೀನಾಗೆ ಆಶ್ರಯ ನೀಡಿ ಪ್ರಾಣ ಉಳಿಸಿತ್ತು ಭಾರತ; ಆಗ ನಡೆದಿದ್ದೇನು?

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ, ತನ್ನ ತಂದೆಯ ಅಧಿಕಾರಾವಧಿ ನೆನೆಸಿಕೊಳ್ಳುತ್ತಾ, ಅಮೆರಿಕ ಸೇಂಟ್ ಮಾರ್ಟಿನ್ ದ್ವೀಪವನ್ನು ಬಯಸಿದಾಗ, ನನ್ನ ತಂದೆ ಶೇಖ್ ಮುಜಿಬುರ್ ರೆಹಮಾನ್ ಅದಕ್ಕೆ ಒಪ್ಪಲಿಲ್ಲ. ಅವರು ತಮ್ಮ ಪ್ರಾಣವನ್ನೇ ಅತ್ಯಾಗ ಮಾಡಬೇಕಾಯಿತು. ಅದು ನನ್ನ ಹಣೆ ಬರಹವಾಗಿತ್ತು. ಏಕೆಂದರೆ ಅಧಿಕಾರದಲ್ಲಿ ಉಳಿಯಲು ದೇಶವನ್ನೇ ಮಾರಬೇಕು ಎಂಬ ಆಲೋಚನೆ ನನ್ನ ಮನಸ್ಸಿಗೆ ಎಂದೂ ಬಂದಿರಲಿಲ್ಲ.

ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ತೆಗೆದುಹಾಕಲು ಸಿದ್ಧತೆಗಳು ನಡೆಯುತ್ತಿವೆ. ಸೇನೆ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವು ಡಿಸೆಂಬರ್ ವೇಳೆಗೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸುತ್ತಿವೆ. ಈ ಬಗ್ಗೆ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್, ಚುನಾವಣೆ ನಡೆಸಲು ಅಥವಾ ಇನ್ನಾವುದೇ ವಿಷಯದ ಬಗ್ಗೆ ಅನಗತ್ಯ ಒತ್ತಡ ಹೇರಿದರೆ, ಸಾರ್ವಜನಿಕರೊಂದಿಗೆ ಸೇರಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಬಾಂಗ್ಲಾದಲ್ಲಿ ಮುಂದುವರೆದ ಅಸ್ಥಿರತೆ

ಶೇಖ್ ಹಸೀನಾ ಅಧಿಕಾರ ತೊರೆದಾಗಿನಿಂದ ಬಾಂಗ್ಲಾದೇಶದಲ್ಲಿ ಅಸ್ಥಿರತೆ ಇದೆ. ದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ಹಿಂಸಾತ್ಮಕ ದಂಗೆ ನಡೆದಿತ್ತು, ನಂತರ ಶೇಖ್ ಹಸೀನಾ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು. ಆಗಸ್ಟ್ 5, 2024 ರಂದು, ಬಾಂಗ್ಲಾದೇಶದಲ್ಲಿ ಯಾವುದೇ ರಕ್ತಪಾತವಿಲ್ಲದೆ ದಂಗೆ ನಡೆಯಿತು. ಅಂದಿನಿಂದ ಶೇಖ್ ಹಸೀನಾ ಭಾರತದಲ್ಲಿದ್ದಾರೆ.

ಮೊಹಮ್ಮದ್ ಯೂನಸ್ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದು, ಮುಖ್ಯ ಸಲಹೆಗಾರರಾಗಿದ್ದಾರೆ. ಆದರೆ ಒಂಬತ್ತು ತಿಂಗಳೊಳಗೆ, ಈ ಯುದ್ಧವು ಈಗ ಸೈನ್ಯ ಮತ್ತು ಯೂನಸ್ ನಡುವಿನ ಹೋರಾಟವಾಗಿ ಮಾರ್ಪಟ್ಟಿದೆ. ಯಾವುದೇ ಬೆಲೆ ತೆತ್ತಾದರೂ ಡಿಸೆಂಬರ್ ಒಳಗೆ ಚುನಾವಣೆ ನಡೆಸುವುದಾಗಿ ಬಾಂಗ್ಲಾದೇಶ ಸೇನೆ ಅಂತಿಮ ಎಚ್ಚರಿಕೆ ನೀಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ