Bangladesh Crisis: ಬಾಂಗ್ಲಾದೇಶದ ಪ್ರಧಾನಿ ಬಂಗಲೆಗೆ ನುಗ್ಗಿ ಶೇಖ್ ಹಸೀನಾ ಸೀರೆ, ಚಿಕನ್, ಸೋಫಾ, ಸೂಟ್ಕೇಸ್ ಲೂಟಿ ಮಾಡಿದ ಜನರು
ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಶೇಖ್ ಹಸೀನಾ ಅವರು ಭಾರತಕ್ಕೆ ಬಂದಿದ್ದಾರೆ. ಬಾಂಗ್ಲಾದೇಶದ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಆಕೆ ತನ್ನ ಸಹೋದರಿಯೊಂದಿಗೆ ಪರಾರಿಯಾಗುತ್ತಿರುವುದು ಕಂಡುಬಂದಿದೆ. ಈ ವೇಳೆ ಶೇಖ್ ಹಸೀನಾ ಅವರ ಬಂಗಲೆಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿದ್ದ ವಸ್ತುಗಳನ್ನೆಲ್ಲ ಲೂಟಿ ಮಾಡಿದ್ದಾರೆ. ಬೆಡ್ ರೂಂನಲ್ಲಿ ಮಲಗಿ ವಿಡಿಯೋ ಮಾಡಿಕೊಂಡಿದ್ದಾರೆ.
ಢಾಕಾ: ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶ ಬಿಟ್ಟು ಪರಾರಿಯಾಗುತ್ತಿದ್ದಂತೆ ಢಾಕಾದಲ್ಲಿರುವ ಪಿಎಂ ಪ್ಯಾಲೇಸ್‌ಗೆ ನುಗ್ಗಿದ ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಸೀರೆ, ಒಳಉಡುಪನ್ನೂ ಕದ್ದು, ಅದರ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಸೋಫಾ, ಅಡುಗೆಮನೆಯಿಂದ ಹಸಿ ಮೀನು, ಕೋಳಿ, ಬಾತುಕೋಳಿ ಕದ್ದು, ಅಲ್ಲಿದ್ದ ಊಟ ಮಾಡಿ, ಶೇಖ್ ಹಸೀನಾ ಅವರ ಬೆಡ್ರೂಂನಲ್ಲಿ ಮಲಗಿ ಮಜಾ ಮಾಡಿದ್ದಾರೆ.
ಶೇಖ್ ಹಸೀನಾ ರಾಜೀನಾಮೆ ನೀಡುವ ಮುನ್ನ ಬಾಂಗ್ಲಾದೇಶದ ಬಂಗಬಂಧು ಸ್ಮಾರಕ ವಸ್ತುಸಂಗ್ರಹಾಲಯ ಎಂದೂ ಕರೆಯಲ್ಪಡುವ ಬಂಗಬಂಧು ಭವನ್ ಸೇರಿದಂತೆ ಢಾಕಾದ ಹಲವಾರು ಪ್ರಮುಖ ಸ್ಥಳಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
#Bangladesh: Full video of protestors storming PM’s palace in Dhaka. Protestors can be seen inside the office of Sheikh Hasina.pic.twitter.com/I0F0vPJYpY
— Ahmer Khan (@ahmermkhan) August 5, 2024
ಜನರು ಶೇಖ್ ಹಸೀನಾ ಅವರ ಕುಟುಂಬದ ಪೂರ್ವಜರ ಮನೆಯಾಗಿ ಪರಿವರ್ತನೆಗೊಂಡ ವಸ್ತುಸಂಗ್ರಹಾಲಯವನ್ನು ಧ್ವಂಸಗೊಳಿಸಿದೆ. ಅಲ್ಲಿ ಆಕೆಯ ತಂದೆಯ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಹಾಗೆಯೇ ದೇಶದ ಮುಖ್ಯ ನ್ಯಾಯಾಧೀಶರ ಮನೆ ಮತ್ತು ರಾಜಧಾನಿಯಾದ ಢಾಕಾದಲ್ಲಿರುವ ಶೇಖ್ ಹಸೀನಾ ಅವರ ಬಂಗಲೆಯ ಮೇಲೂ ದಾಳಿ ನಡೆಸಿ, ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ.
🔺 BANGLADESH:
People of Bangladesh have taken multiple items out of the official residency of PM Hasina Wajid in Ganabhaban. The Saree of PM Sheikh Hasina can be seen carried by a protestor. pic.twitter.com/Gd3qLnhGqQ
— Tactical Tribune (@TacticalTribun) August 5, 2024
ಇದನ್ನೂ ಓದಿ: Sheikh Hasina: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಪ್ರತಿಭಟನೆ; ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ, ಭಾರತಕ್ಕೆ ಪಲಾಯನ
ಶೇಖ್ ಹಸೀನಾ ರಾಜೀನಾಮೆಯನ್ನು ಸೋಮವಾರ ಢಾಕಾದಲ್ಲಿ ಸಾವಿರಾರು ಜನರು ಬೀದಿಗಿಳಿದು ಸಂಭ್ರಮಿಸಿದರು. ಬಾಂಗ್ಲಾ ರಾಜಧಾನಿ ಢಾಕಾದಲ್ಲಿರುವ ಶೇಖ್ ಹಸೀನಾ ಅವರ ನಿವಾಸ ‘ಗಾನಭಬನ್’ಗೆ ಬೀದಿಗಳಲ್ಲಿ ಹರ್ಷೋದ್ಗಾರದ ದೃಶ್ಯಗಳ ನಡುವೆ ಸಾವಿರಾರು ಜನರು ಮುತ್ತಿಗೆ ಹಾಕಿದರು. ಶೇಖ್ ಹಸೀನಾ ಅವರ ನಿವಾಸವಾದ ಗಣಭವನ್‌ನಿಂದ ಕೋಳಿ, ಮೀನು, ತರಕಾರಿಗಳು ಮತ್ತು ಪೀಠೋಪಕರಣಗಳನ್ನು ಜನರು ತೆಗೆದುಕೊಂಡು ಹೋಗುತ್ತಿದ್ದಾರೆ.
#Bangladesh Prime Minister #SheikhHasina has resigned and has fled to India to depart to London From there
Protesters have stormed the prime minister palace and enjoying their stay#BangladeshProtests #BangladeshRiots #Riots pic.twitter.com/84OSfLwrUu
— dCivilzdWorld (@dcivilizdworld) August 5, 2024
ಶೇಖ್ ಹಸೀನಾ ಅವರ ಸೀರೆಯನ್ನು ಕದ್ದ ವ್ಯಕ್ತಿಯೊಬ್ಬ ಅದರ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾನೆ. ಅವರ ಬಂಗಲೆಯ ಫ್ರಿಜ್ನಲ್ಲಿದ್ದ ಹಣ್ಣು, ಸ್ವೀಟ್ಗಳನ್ನೆಲ್ಲ ತೆಗೆದು ತಿಂದ ಜನರು, ಅಡುಗೆಮನೆಯಲ್ಲಿದ್ದ ಚಿಕನ್, ಮೀನು ಮುಂತಾದ ಎಲ್ಲ ಪದಾರ್ಥಗಳನ್ನೂ ದೋಚಿದ್ದಾರೆ. ಶೇಖ್ ಹಸೀನಾ ಅವರ ಬಂಗಲೆಯೊಳಗಿದ್ದ ಐಷಾರಾಮಿ ಸೋಫಾ ಸೆಟ್ಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:21 pm, Mon, 5 August 24