Sheikh Hasina: ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು; ಬಾಂಗ್ಲಾದೇಶದಿಂದ ಪಲಾಯನವಾದ ಬಳಿಕ ಮೊದಲ ಬಾರಿ ಮೌನ ಮುರಿದ ಶೇಖ್ ಹಸೀನಾ

|

Updated on: Aug 13, 2024 | 9:28 PM

ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿಯಾಗಿ ಪದಚ್ಯುತಗೊಂಡ ನಂತರ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ. ಬಾಂಗ್ಲಾದಲ್ಲಿ ಹತ್ಯೆಗಳು ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆಗೆ ಒತ್ತಾಯಿಸಿದ್ದಾರೆ. ತಮ್ಮ ಮಗನ ಮೂಲಕ ಅವರು ಹೇಳಿಕೆ ನೀಡಿದ್ದಾರೆ.

Sheikh Hasina: ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು; ಬಾಂಗ್ಲಾದೇಶದಿಂದ ಪಲಾಯನವಾದ ಬಳಿಕ ಮೊದಲ ಬಾರಿ ಮೌನ ಮುರಿದ ಶೇಖ್ ಹಸೀನಾ
ಶೇಖ್ ಹಸೀನಾ
Follow us on

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಗೊಂಡ ನಂತರ ತಮ್ಮ ಮೊದಲ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಜುಲೈನಲ್ಲಿ ಹತ್ಯೆಗಳು ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಗೆ ಒತ್ತಾಯಿಸಿದ್ದಾರೆ. ಆಗಸ್ಟ್ 15ರಂದು ರಾಷ್ಟ್ರೀಯ ಶೋಕಾಚರಣೆ ದಿನವನ್ನು ಗೌರವಯುತವಾಗಿ ಮತ್ತು ಗಂಭೀರತೆಯಿಂದ ಆಚರಿಸಲು ನಾನು ನಿಮಗೆ ಮನವಿ ಮಾಡುತ್ತೇನೆ. ಹೂವಿನ ಹಾರಗಳನ್ನು ಅರ್ಪಿಸಿ ಮತ್ತು ಬಂಗಬಂಧು ಭಾಬನ್‌ನಲ್ಲಿ ಪ್ರಾರ್ಥಿಸುವ ಮೂಲಕ ಎಲ್ಲಾ ಆತ್ಮಗಳ ಮೋಕ್ಷಕ್ಕಾಗಿ ಪ್ರಾರ್ಥಿಸಿ ಎಂದು ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಝೇದ್ ಅವರು ಹಂಚಿಕೊಂಡಿದ್ದಾರೆ.

ಕಳೆದ ಜುಲೈನಿಂದ ಆಂದೋಲನದ ಹೆಸರಿನಲ್ಲಿ ವಿಧ್ವಂಸಕತೆ, ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರದಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು, ಪೊಲೀಸರು, ಪತ್ರಕರ್ತರು, ಸಾಂಸ್ಕೃತಿಕ ಕಾರ್ಯಕರ್ತರು, ಕಾರ್ಮಿಕರು, ಅವಾಮಿ ಲೀಗ್ ಮತ್ತು ಅಂಗಸಂಸ್ಥೆ ಮುಖಂಡರು, ಕಾರ್ಮಿಕರು, ಪಾದಚಾರಿಗಳು ಮತ್ತು ವಿವಿಧ ಸಂಸ್ಥೆಗಳಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದ ಕಾರ್ಮಿಕರಿಗೆ ನಾನು ಸಂತಾಪ ಸೂಚಿಸುತ್ತೇನೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದ ಸೇಂಟ್ ಮಾರ್ಟಿನ್ ದ್ವೀಪದ ಮೇಲೆ ಅಮೆರಿಕ ಕಣ್ಣಿಟ್ಟಿದ್ದೇಕೆ?; ಇದೇ ಶೇಖ್ ಹಸೀನಾ ಪತನಕ್ಕೆ ಕಾರಣವಾಯಿತೇ?

ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಮ್ಯೂಸಿಯಂ ನಾಶವನ್ನು ಖಂಡಿಸಿದ ಶೇಖ್ ಹಸೀನಾ, ಬಾಂಗ್ಲಾದ ರಾಷ್ಟ್ರಪಿತ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ನೇತೃತ್ವದಲ್ಲಿ ನಾವು ಸ್ವತಂತ್ರ ರಾಷ್ಟ್ರವಾಗಿ ಸ್ವಾಭಿಮಾನವನ್ನು ಗಳಿಸಿದ್ದೇವೆ, ಸ್ವಾಭಿಮಾನವನ್ನು ಪಡೆದುಕೊಂಡಿದ್ದೇವೆ ಮತ್ತು ಸ್ವತಂತ್ರ ದೇಶವನ್ನು ಪಡೆದುಕೊಂಡಿದ್ದೇವೆ. ಅವರಿಗೆ ಅವಮಾನ ಮಾಡುವ ಮೂಲಕ ಲಕ್ಷಾಂತರ ಹುತಾತ್ಮರ ರಕ್ತವನ್ನು ಅವಮಾನಿಸಿದ್ದಾರೆ, ನಾನು ದೇಶವಾಸಿಗಳಿಂದ ನ್ಯಾಯವನ್ನು ಬಯಸುತ್ತೇನೆ ಎಂದಿದ್ದಾರೆ.


ಬಾಂಗ್ಲಾದೇಶದ ಪ್ರಧಾನಿಯಾಗಿ ಶೇಖ್ ಹಸೀನಾ ಅವರ 15 ವರ್ಷಗಳ ಸುದೀರ್ಘ ಆಡಳಿತವು ಆಗಸ್ಟ್ 5ರಂದು ಕೊನೆಗೊಂಡಿತು. ಅವರು ತಮ್ಮ ಆಡಳಿತದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಅವರು ರಾಜೀನಾಮೆ ನೀಡಿದರು ಮತ್ತು ದೇಶವನ್ನು ತೊರೆದರು. ಶೇಖ್ ಮುಜಿಬುರ್ ರೆಹಮಾನ್ ಅವರ ಮಗಳು ಶೇಖ್ ಹಸೀನಾ ಪ್ರಸ್ತುತ ಭಾರತದಲ್ಲಿ ಸುರಕ್ಷಿತ ಸ್ಥಳದಲ್ಲಿದ್ದಾರೆ.

ಇದನ್ನೂ ಓದಿ: Bangladesh Violence: ಬಾಂಗ್ಲಾದೇಶದಲ್ಲಿ ಪ್ರತಿಭಟನೆಯ ವೇಳೆ ಕಾರ್ಮಿಕನ ಸಾವು; ಶೇಖ್ ಹಸೀನಾ ವಿರುದ್ಧ ಕೊಲೆ ಕೇಸ್ ದಾಖಲು

ಬಾಂಗ್ಲಾದೇಶದ ನ್ಯಾಯಾಲಯವು ಕಳೆದ ತಿಂಗಳು ನಾಗರಿಕ ಅಶಾಂತಿಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಚ್ಚಾಟಿತ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಆಡಳಿತದ 6 ಪ್ರಮುಖ ವ್ಯಕ್ತಿಗಳ ಮೇಲೆ ಕೊಲೆ ಕೇಸ್ ದಾಖಲಿಸಿ, ತನಿಖೆಯನ್ನು ಪ್ರಾರಂಭಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ