ಬಾಂಗ್ಲಾದೇಶ: ಢಾಕೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಮುಹಮ್ಮದ್ ಯೂನಸ್
ನಮ್ಮ ಪ್ರಜಾಸತ್ತಾತ್ಮಕ ಆಶಯಗಳಲ್ಲಿ, ನಮ್ಮನ್ನು ಮುಸ್ಲಿಮರು, ಹಿಂದೂಗಳು ಅಥವಾ ಬೌದ್ಧರು ಎಂದು ನೋಡಬಾರದು, ಆದರೆ ಮನುಷ್ಯರಂತೆ ನೋಡಬೇಕು. ನಮ್ಮ ಹಕ್ಕುಗಳನ್ನು ಖಾತರಿಪಡಿಸಬೇಕು. ಎಲ್ಲಾ ಸಮಸ್ಯೆಗಳ ಮೂಲವು ಸಾಂಸ್ಥಿಕ ವ್ಯವಸ್ಥೆಗಳ ಕೆಟ್ಟುಹೋಗುವಿಕೆಯಲ್ಲಿದೆ. ಅದಕ್ಕಾಗಿಯೇ ಇಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಸಾಂಸ್ಥಿಕ ವ್ಯವಸ್ಥೆಗಳನ್ನು ಸರಿಪಡಿಸಬೇಕಾಗಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಹೇಳಿದ್ದಾರೆ.
ಢಾಕಾ ಆಗಸ್ಟ್ 13: ಬಾಂಗ್ಲಾದೇಶದ (Bangladesh) ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ (Muhammad Yunus) ಮಂಗಳವಾರ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಡೈಲಿ ಸ್ಟಾರ್ ವರದಿಯ ಪ್ರಕಾರ, ನೊಬೆಲ್ ಪ್ರಶಸ್ತಿ ವಿಜೇತರು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಢಾಕೇಶ್ವರಿ ರಾಷ್ಟ್ರೀಯ ದೇವಾಲಯಕ್ಕೆ (Dhakeshwari National Temple) ಭೇಟಿ ನೀಡಿದ್ದಾರೆ. ಹಕ್ಕುಗಳು ಎಲ್ಲರಿಗೂ ಸಮಾನ. ನಾವೆಲ್ಲರೂ ಒಂದೇ ಹಕ್ಕನ್ನು ಹೊಂದಿರುವ ಜನರು. ನಮ್ಮ ನಡುವೆ ಯಾವುದೇ ಭೇದಗಳನ್ನು ಮಾಡಬೇಡಿ. ದಯವಿಟ್ಟು, ನಮಗೆ ಸಹಾಯ ಮಾಡಿ. ತಾಳ್ಮೆಯಿಂದಿರಿ. ನಾವು ಏನು ಮಾಡಲು ಸಾಧ್ಯವಾಯಿತು ಮತ್ತು ಮಾಡಲಿಲ್ಲ ಎಂಬುದನ್ನು ನಿರ್ಣಯಿಸಿ. ನಾವು ವಿಫಲವಾದರೆ, ನಂತರ ನಮ್ಮನ್ನು ಟೀಕಿಸಿ ಎಂದು ಯೂನಸ್ ಹೇಳಿರುವುದಾಗಿ ಡೈಲಿ ಸ್ಟಾರ್ ವರದಿ ಉಲ್ಲೇಖಿಸಿದೆ.
“ನಮ್ಮ ಪ್ರಜಾಸತ್ತಾತ್ಮಕ ಆಶಯಗಳಲ್ಲಿ, ನಮ್ಮನ್ನು ಮುಸ್ಲಿಮರು, ಹಿಂದೂಗಳು ಅಥವಾ ಬೌದ್ಧರು ಎಂದು ನೋಡಬಾರದು, ಆದರೆ ಮನುಷ್ಯರಂತೆ ನೋಡಬೇಕು. ನಮ್ಮ ಹಕ್ಕುಗಳನ್ನು ಖಾತರಿಪಡಿಸಬೇಕು. ಎಲ್ಲಾ ಸಮಸ್ಯೆಗಳ ಮೂಲವು ಸಾಂಸ್ಥಿಕ ವ್ಯವಸ್ಥೆಗಳ ಕೆಟ್ಟುಹೋಗುವಿಕೆಯಲ್ಲಿದೆ. ಅದಕ್ಕಾಗಿಯೇ ಇಂತಹ ಸಮಸ್ಯೆಗಳು ಉದ್ಭವಿಸುತ್ತವೆ. ಸಾಂಸ್ಥಿಕ ವ್ಯವಸ್ಥೆಗಳನ್ನು ಸರಿಪಡಿಸಬೇಕಾಗಿದೆ ಎಂದು ಯೂನಸ್ ಹೇಳಿದ್ದಾರೆ.
ದೇವಾಲಯಕ್ಕೆ ಭೇಟಿ
Bangladesh Chief Adviser to the interim government Prof Muhammad Yunus on Tuesday visited the famous Dhakeswari temple in the heart of Dhaka and reached out to the Hindu community in the country. He exchanged greetings with the leaders of Bangladesh Puja Udjapan Parishad and… pic.twitter.com/dECOaAHXTS
— Milan Sharma (@Milan_reports) August 13, 2024
ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ಆಗಸ್ಟ್ 5 ರಂದು ರಾಜೀನಾಮೆ ನೀಡಿ ದೇಶವನ್ನು ತೊರೆದ ನಂತರ ಬಾಂಗ್ಲಾದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಹಿಂದೂಗಳ ಮೇಲಿನ ದಾಳಿಯ ನಡುವೆ ಯೂನಸ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ಮತ್ತು ಬಾಂಗ್ಲಾದೇಶ ಪೂಜಾ ಉದ್ಜಪನ್ ಪರಿಷದ್ ಹಸೀನಾ ಸರ್ಕಾರದ ಪತನದ ನಂತರ 52 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರ ಮೇಲೆ 205 ದಾಳಿಯ ಘಟನೆಗಳು ನಡೆದಿವೆ ಎಂದು ಹೇಳಿದ್ದಾರೆ. ತಮ್ಮ ದೇವಾಲಯಗಳು, ಮನೆಗಳು ಮತ್ತು ವ್ಯಾಪಾರಗಳ ಮೇಲಿನ ದಾಳಿಯಿಂದ ರಕ್ಷಣೆ ನೀಡುವಂತೆ ಆಗ್ರಹಿಸಿ ಕಳೆದ ವಾರ ಸಾವಿರಾರು ಹಿಂದೂಗಳು ಢಾಕಾ ಮತ್ತು ಛತ್ತಗ್ರಾಮ್‌ನಲ್ಲಿ ಪ್ರತಿಭಟನೆ ನಡೆಸಿದರು. ಶನಿವಾರ ಢಾಕಾದ ಶಹಬಾಗ್‌ನಲ್ಲಿ ಹಿಂದೂ ಪ್ರತಿಭಟನಾಕಾರರು ಮೂರು ಗಂಟೆಗಳ ಕಾಲ ಸಂಚಾರವನ್ನು ನಿರ್ಬಂಧಿಸಿದ್ದರು.
ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಿದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ವಿಶೇಷ ನ್ಯಾಯಾಲಯಗಳು, ಅಲ್ಪಸಂಖ್ಯಾತರಿಗೆ ಶೇಕಡಾ 10 ರಷ್ಟು ಸಂಸದೀಯ ಸ್ಥಾನಗಳು ಮತ್ತು ಅಲ್ಪಸಂಖ್ಯಾತರ ರಕ್ಷಣೆಯ ಕಾನೂನನ್ನು ಜಾರಿಗೊಳಿಸಲು ಅವರು ಒತ್ತಾಯಿಸುತ್ತಿದ್ದಾರೆ.
ಹಿಂಸಾಚಾರ ಪೀಡಿತ ರಾಷ್ಟ್ರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಗಳನ್ನು ಯೂನಸ್ ಶನಿವಾರ ಖಂಡಿಸಿದ್ದಾರೆ. ಇಂಥಾ ದಾಳಿಗಳನ್ನು “ಹೇಯ” ಎಂದು ಬಣ್ಣಿಸಿದ ಅವರು, ಎಲ್ಲಾ ಹಿಂದೂ, ಕ್ರಿಶ್ಚಿಯನ್ ಮತ್ತು ಬೌದ್ಧರನ್ನು ರಕ್ಷಿಸಲು ಯುವಕರನ್ನು ಒತ್ತಾಯಿಸಿದ್ದಾರೆ. ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಆಗಸ್ಟ್ 5 ರಂದು ಶೇಖ್ ಹಸೀನಾ ನೇತೃತ್ವದ ಸರ್ಕಾರದ ಪತನದ ನಂತರ ವಾರಾಂತ್ಯದವರೆಗೆ 52 ಜಿಲ್ಲೆಗಳಲ್ಲಿ ಕನಿಷ್ಠ 205 ದಾಳಿಯ ಘಟನೆಗಳನ್ನು ಎದುರಿಸಿದ್ದಾರೆ ಎಂದು ಎರಡು ಹಿಂದೂ ಸಂಘಟನೆಗಳು ತಿಳಿಸಿವೆ.
ಮಂಗಳವಾರ, ಢಾಕೇಶ್ವರಿ ದೇವಸ್ಥಾನವನ್ನು ತಲುಪಿದ ನಂತರ, ಯೂನಸ್ ಬಾಂಗ್ಲಾದೇಶದ ಪೂಜಾ ಉದ್ಜಪನ್ ಪರಿಷತ್ ಮತ್ತು ಮಹಾನಗರ ಸರ್ಬಜನಿನ್ ಪೂಜಾ ಸಮಿತಿಯ ಮುಖಂಡರು ಮತ್ತು ದೇವಾಲಯದ ಆಡಳಿತ ಮಂಡಳಿಯ ಅಧಿಕಾರಿಗಳು ಮತ್ತು ಭಕ್ತರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು ಎಂದು ಡೈಲಿ ಸ್ಟಾರ್ ತಿಳಿಸಿದೆ.
ಇದನ್ನೂ ಓದಿ: Bangladesh Violence: ಬಾಂಗ್ಲಾದೇಶದಲ್ಲಿ ಪ್ರತಿಭಟನೆಯ ವೇಳೆ ಕಾರ್ಮಿಕನ ಸಾವು; ಶೇಖ್ ಹಸೀನಾ ವಿರುದ್ಧ ಕೊಲೆ ಕೇಸ್ ದಾಖಲು
ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಯೂನಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಭಿನಂದನಾ ಸಂದೇಶದಲ್ಲಿ, “ಹಿಂದೂಗಳು ಮತ್ತು ಇತರ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ ಮತ್ತು ರಕ್ಷಣೆಯನ್ನು ಖಾತ್ರಿಪಡಿಸುವ ಮೂಲಕ ಸಹಜ ಸ್ಥಿತಿಗೆ ಬೇಗನೆ ಮರಳಲು ನಾವು ಆಶಿಸುತ್ತೇವೆ” ಎಂದು ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ