ಇಂದು ಬಾಂಗ್ಲಾದೇಶದಲ್ಲಿ ಆಗುತ್ತಿರುವುದು 10 ವರ್ಷಗಳ ಹಿಂದೆ ಉಕ್ರೇನ್‌ನಲ್ಲಿ ಸಂಭವಿಸಿತ್ತು!

ಜುಲೈ-ಆಗಸ್ಟ್ 2024 ರಲ್ಲಿ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ವಿರುದ್ಧ ಇತ್ತೀಚೆಗೆ ನಡೆದ ದಂಗೆಯು ಈ ಮಾದರಿಯನ್ನು ಪ್ರತಿಧ್ವನಿಸುವಂತಿದೆ. ಮೀಸಲಾತಿ ವಿರುದ್ಧದ ಆರಂಭಿಕ ಪ್ರತಿಭಟನೆಗಳು ಶೀಘ್ರವಾಗಿ ತಮ್ಮ ಗಮನವನ್ನು ಶೇಖ್ ಹಸೀನಾ ಕಡೆಗೆ ತಿರುಗಿಸಿದವು. ತನ್ನ ಪ್ರಾಣ ಉಳಿಸಿಕೊಳ್ಳಲು ಆಕೆಯೂ ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು. ಬಾಂಗ್ಲಾದೇಶದಲ್ಲಿ ಈಗಾಗಲೇ ಮಧ್ಯಂತರ ಸರ್ಕಾರ ರಚನೆಯಾಗಿದೆ

ಇಂದು ಬಾಂಗ್ಲಾದೇಶದಲ್ಲಿ ಆಗುತ್ತಿರುವುದು 10 ವರ್ಷಗಳ ಹಿಂದೆ ಉಕ್ರೇನ್‌ನಲ್ಲಿ ಸಂಭವಿಸಿತ್ತು!
ಬಾಂಗ್ಲಾದೇಶ
Follow us
ರಶ್ಮಿ ಕಲ್ಲಕಟ್ಟ
|

Updated on:Aug 12, 2024 | 7:00 PM

ಢಾಕಾ ಆಗಸ್ಟ್ 12: 2014 ರಲ್ಲಿ, ಉಕ್ರೇನ್ (Ukraine) ರಾಜಧಾನಿ ಕೈವ್​​​ನಲ್ಲಿ ಆಗಿನ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ (Viktor Yanukovych) ವಿರುದ್ಧ ಬೃಹತ್ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಯಾನುಕೋವಿಚ್ ಅವರು ರಷ್ಯಾದ ಪರ ನಾಯಕರಾಗಿದ್ದು ಅವರು ಯುರೋಪಿಯನ್ ಒಕ್ಕೂಟದಲ್ಲಿ ಉಕ್ರೇನ್ ಸೇರ್ಪಡೆಯನ್ನು ವಿರೋಧಿಸಿದರು. ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿತು. ಕೆಲವು ಪ್ರತಿಭಟನಾಕಾರರು ತಮ್ಮ ಪ್ರಾಣವನ್ನು ಕಳೆದುಕೊಂಡರು, ಜನಾಕ್ರೋಶ ಸರ್ಕಾರ ಉರುಳುವುದಕ್ಕೆ ಕಾರಣವಾಗಿ ಯಾನುಕೋವಿಚ್ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ರಷ್ಯಾಕ್ಕೆ ಪಲಾಯನ ಮಾಡಬೇಕಾಯಿತು.  ವಿಕ್ಟೋರಿಯಾ ನುಲ್ಯಾಂಡ್, ಮಾಜಿ ಯುಎಸ್ ಡೆಪ್ಯೂಟಿ ಸೆಕ್ರೆಟರಿ ಆಫ್ ಸ್ಟೇಟ್, ಇತರರೊಂದಿಗೆ, ಉಕ್ರೇನ್‌ನಲ್ಲಿನ ಆ ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಯುನೈಟೆಡ್ ಸ್ಟೇಟ್ಸ್ ಸಾಧ್ಯವಿರುವ ಎಲ್ಲ ಬೆಂಬಲವನ್ನು ಒದಗಿಸಿದೆ ಎಂದು ಅಧಿಕೃತವಾಗಿ ಒಪ್ಪಿಕೊಂಡರು. ಆದಾಗ್ಯೂ, ಚುನಾಯಿತ ಸರ್ಕಾರವನ್ನು ಉರುಳಿಸುವುದು ಉಕ್ರೇನ್‌ನಲ್ಲಿನ ಅಶಾಂತಿಯನ್ನು ಕೊನೆಗೊಳಿಸಲಿಲ್ಲ.

2014 ರಲ್ಲಿ ಉಕ್ರೇನ್‌ನಲ್ಲಿ ಪ್ರಾರಂಭವಾದ ರಷ್ಯಾ-ವಿರೋಧಿ ಅಲೆಯು 2022 ರಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಪರಾಕಾಷ್ಠೆಯಾಗಿದೆ. ಒಂದು ದಶಕದ ನಂತರ, ಉಕ್ರೇನ್ ಯುರೋಪಿಯನ್ ಯೂನಿಯನ್ ಅಥವಾ ನ್ಯಾಟೋ ಸದಸ್ಯರಾಗಿಲ್ಲ, ಆದರೆ ಅದು ರಷ್ಯಾದೊಂದಿಗಿನ ಯುದ್ಧದಲ್ಲಿ ವಿನಾಶದ ಜೀವಂತ ಉದಾಹರಣೆಯಾಗಿದೆ. ರಷ್ಯಾದ ಪ್ರಭಾವದಿಂದ ಮುಕ್ತರಾಗುವ ಆಲೋಚನೆಯೊಂದಿಗೆ ಪ್ರಾರಂಭವಾದ ಚಳವಳಿಯು ಉಕ್ರೇನ್ ಅನ್ನು ಅಮೆರಿಕದ ಬಿಗಿ ಮುಷ್ಠಿಯಲ್ಲಿ ಹಿಡಿದಿಟ್ಟಿದೆ.

ಜುಲೈ-ಆಗಸ್ಟ್ 2024 ರಲ್ಲಿ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ವಿರುದ್ಧ ಇತ್ತೀಚೆಗೆ ನಡೆದ ದಂಗೆಯು ಈ ಮಾದರಿಯನ್ನು ಪ್ರತಿಧ್ವನಿಸುವಂತಿದೆ. ಮೀಸಲಾತಿ ವಿರುದ್ಧದ ಆರಂಭಿಕ ಪ್ರತಿಭಟನೆಗಳು ಶೀಘ್ರವಾಗಿ ತಮ್ಮ ಗಮನವನ್ನು ಶೇಖ್ ಹಸೀನಾ ಕಡೆಗೆ ತಿರುಗಿಸಿದವು. ತನ್ನ ಪ್ರಾಣ ಉಳಿಸಿಕೊಳ್ಳಲು ಆಕೆಯೂ ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು. ಬಾಂಗ್ಲಾದೇಶದಲ್ಲಿ ಈಗಾಗಲೇ ಮಧ್ಯಂತರ ಸರ್ಕಾರ ರಚನೆಯಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಮತ್ತು ಭಾರತ ವಿರೋಧಿ ಭಾವನೆಯು ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ.

ಶೇಖ್ ಹಸೀನಾ ಅವರ ಹೇಳಿಕೆಗಳಲ್ಲಿ ಒಂದನ್ನು ಆಧರಿಸಿ, ಚೀನಾ, ಭಾರತ, ಮ್ಯಾನ್ಮಾರ್ ಮತ್ತು ಇಡೀ ಹಿಂದೂ ಮಹಾಸಾಗರವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಸೇನಾ ನೆಲೆಯನ್ನು ಸ್ಥಾಪಿಸಲು ಸೇಂಟ್ ಮಾರ್ಟಿನ್ ದ್ವೀಪಕ್ಕಾಗಿ ಬಾಂಗ್ಲಾದೇಶವನ್ನು ಯುಎಸ್ ಕೇಳಿದೆ ಎಂದು ಹೇಳಲಾಗಿದೆ. ಶೇಖ್ ಹಸೀನಾ ನಿರಾಕರಿಸಿದಾಗ, ಅವರು ತಮ್ಮ ಅಧಿಕಾರದ ಸ್ಥಾನವನ್ನು ಕಳೆದುಕೊಂಡರು. ಮೊದಲ ನೋಟದಲ್ಲಿ, ಈ ಸನ್ನಿವೇಶವು ಉಕ್ರೇನ್‌ನಲ್ಲಿನ ಯುರೋಮೈಡಾನ್ ಪ್ರತಿಭಟನೆಯ ಮಾದರಿಯನ್ನು ಹೋಲುತ್ತದೆ.

ಸೂಕ್ಷ್ಮ ಅಂಚಿನಲ್ಲಿರುವ ಭಾರತ-ಬಾಂಗ್ಲಾದೇಶ ಸಂಬಂಧಗಳು

ಶೇಖ್ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆಯುತ್ತಿರುವುದು ಬಾಂಗ್ಲಾದೇಶದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮತ್ತು ಇತರರಲ್ಲಿ ಸ್ಪಷ್ಟವಾದ ಭಾರತ ವಿರೋಧಿ ಭಾವನೆಯನ್ನು ಹುಟ್ಟುಹಾಕಿದೆ. ಚಳುವಳಿಯ ನಾಯಕರು ಮತ್ತು ಬೆಂಬಲಿಗರು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವಿಶೇಷ ಸಂಬಂಧದ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ. ಪರಿಸ್ಥಿತಿಯ ಲಾಭ ಪಡೆದು, ಬಾಂಗ್ಲಾದೇಶದಲ್ಲಿ ಭಾರತೀಯ ವಸ್ತುಗಳನ್ನು ಬಹಿಷ್ಕರಿಸುವ ಮತ್ತು ಭಾರತೀಯ ಪ್ರಜೆಗಳನ್ನು ನಿಂದಿಸುವ ಘಟನೆಗಳು ಹೆಚ್ಚುತ್ತಿವೆ.

ಬಾಂಗ್ಲಾದೇಶದಲ್ಲಿ ಹಿಂದಿ ಭಾಷೆಯನ್ನು ಬಳಸುವಲ್ಲಿ ಯಾವಾಗಲೂ ಕೆಲವು ಹಿಂಜರಿಕೆಗಳಿದ್ದರೂ, ಪ್ರಸ್ತುತ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹಿಂದಿಯನ್ನು ಬಳಸುವುದು ಅವಮಾನಕರ ಮತ್ತು ಅಮಾನವೀಯ ಎಂದು ಬಹಿರಂಗವಾಗಿ ಘೋಷಿಸುತ್ತಾರೆ. ಹತ್ಯಾಕಾಂಡಗಳನ್ನು ನಡೆಸಲು ಶೇಖ್ ಹಸೀನಾ ಅವರು ಭಾರತದ ಗುಪ್ತಚರ ಸಂಸ್ಥೆ RAW ಅನ್ನು ಬಳಸುತ್ತಿದ್ದಾರೆ ಮತ್ತು ಹಲವಾರು ಭಾರತೀಯ RAW ಏಜೆಂಟ್‌ಗಳನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಬಂಧಿಸಿದೆ ಎಂದು ಹೇಳುವಂತಹ ಆಧಾರರಹಿತ ಆರೋಪಗಳನ್ನು ವಿದ್ಯಾರ್ಥಿಗಳಿಂದ ಮಾಡಲಾಗುತ್ತಿದೆ.

ಬಾಂಗ್ಲಾದೇಶದ ಹೊಸ ಪೀಳಿಗೆಯನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಉದ್ದೇಶಪೂರ್ವಕವಾಗಿ ಈ ವದಂತಿಗಳನ್ನು ಹರಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಾಂಗ್ಲಾದೇಶ ತೆಗೆದುಕೊಳ್ಳುವ ಹಾದಿಯು ಭಾರತ ಮತ್ತು ಬಾಂಗ್ಲಾದೇಶದ ಸಂಬಂಧಗಳ ಭವಿಷ್ಯವನ್ನು ನಿರ್ಧರಿಸುತ್ತದೆ.

ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ವಾಪಸಾತಿಗೆ ಆಗ್ರಹ

ಬಾಂಗ್ಲಾದೇಶದ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಭಾರತವು ಶೇಖ್ ಹಸೀನಾಳನ್ನು ಬಾಂಗ್ಲಾದೇಶ ಸರ್ಕಾರಕ್ಕೆ ಹಸ್ತಾಂತರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ, ಆದ್ದರಿಂದ ಪ್ರತಿಭಟನಾಕಾರರ ಕೊಲೆ ಆರೋಪದ ಮೇಲೆ ಅವರನ್ನು ವಿಚಾರಣೆಗೆ ಒಳಪಡಿಸಬಹುದು. ಅವರು ತಮ್ಮ ಚಳುವಳಿಯಲ್ಲಿ ಯಾವುದೇ ವಿದೇಶಿ ಸಹಾಯವನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾರೆ.

ಇದನ್ನೂ ಓದಿ: ಪ್ರತಿಭಟನಾಕಾರರು 1 ವಾರದೊಳಗೆ ಅಕ್ರಮ ಬಂದೂಕುಗಳನ್ನು ಒಪ್ಪಿಸಬೇಕು; ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಸೂಚನೆ

ಪ್ರತಿಭಟನಾಕಾರರು ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಹಿಂದೂ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದಾಳಿಗಳು, ಲೂಟಿಗಳು ಮತ್ತು ಬೆಂಕಿ ಹಚ್ಚುವ ಘಚನೆಗಳನ್ನು ನಿರಾಕರಿಸುತ್ತಾರೆ. ಇದು ಅವರ ಚಳುವಳಿಯನ್ನು ಅಪಖ್ಯಾತಿಗೊಳಿಸಲು ಭಾರತೀಯ ಪಿತೂರಿಗಳು ಎಂದು ಅವರುತಳ್ಳಿಹಾಕುತ್ತಾರೆ. ಬಾಂಗ್ಲಾದೇಶದಲ್ಲಿ ಈ ಹೊಸ ಪೀಳಿಗೆಯೊಂದಿಗೆ ಸಂವಾದವನ್ನು ಸ್ಥಾಪಿಸುವುದು ಭಾರತಕ್ಕೆ ಸವಾಲಿನ ಕೆಲಸವಾಗಿದೆ. ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿರುವ ಭಾರತ ಮತ್ತು ಬಾಂಗ್ಲಾದೇಶದ ಬಾಂಧವ್ಯ ಈಗ ರಷ್ಯಾ ಮತ್ತು ಉಕ್ರೇನ್ ಹಾದಿಯನ್ನೇ ಅನುಸರಿಸುವ ಅಪಾಯವನ್ನು ಎದುರಿಸುತ್ತಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:58 pm, Mon, 12 August 24

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ