ಎಲಾನ್ ಮಸ್ಕ್-ಡೊನಾಲ್ಡ್ ಟ್ರಂಪ್ ಸಂದರ್ಶನದ ವೇಳೆ ಎಕ್ಸ್ನಲ್ಲಿ ಉದ್ಭವವಾಗಿತ್ತು ತಾಂತ್ರಿಕ ದೋಷ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ನಡುವಿನ ಸಂದರ್ಶನದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಲೈವ್ ಆಡಿಯೋ ಟೆಲಿಕಾಸ್ಟ್ ಆರಂಭದಲ್ಲಿ ಸಾಕಷ್ಟು ತಅಂತ್ರಿಕ ದೋಷಗಳನ್ನು ಎದುರಿಸಿತು. ಇದು DDOS ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಅಮೆರಿಕದ ಕಾಂಗ್ರೆಸ್ ಮೇಲೆ 2021ರ ಜನವರಿ 6ರಂದು ನಡೆದ ದಾಳಿಯ ನಂತರ ಹಿಂದಿನ ಟ್ವಿಟ್ಟರ್ ಮಾಲೀಕರು ಟ್ರಂಪ್ ಖಾತೆಯನ್ನು ಅಮಾನತಿನಲ್ಲಿರಿಸಿದ್ದರು.
ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಮತ್ತೊಮ್ಮೆ ಸ್ಪರ್ಧಿಸುತ್ತಿರುವ ಡೊನಾಲ್ಡ್ ಟ್ರಂಪ್(Donald Trump) ಇತ್ತೀಚೆಗೆ ಎಲಾನ್ ಮಸ್ಕ್(Elon Musk)ಗೆ ಎಕ್ಸ್ನಲ್ಲಿ ಸಂದರ್ಶನ ನೀಡಿದ್ದಾರೆ. ಲೈವ್ ಆಡಿಯೋ ಟೆಲಿಕಾಸ್ಟ್ ಆರಂಭದಲ್ಲಿ ಸಾಕಷ್ಟು ತಾಂತ್ರಿಕ ದೋಷಗಳನ್ನು ಎದುರಿಸಿತು. ಇದು DDOS ದಾಳಿ ಎಂದು ಹೇಳಿದ್ದಾರೆ. ತಾಂತ್ರಿಕ ತೊಂದರೆಗಳಿಂದಾಗಿ ಸಂದರ್ಶನವು 40 ನಿಮಿಷಗಳಿಗಿಂತ ಹೆಚ್ಚು ವಿಳಂಬವಾಗಿದೆ. ಇದು ಅನೇಕ ಬಳಕೆದಾರರನ್ನು ನಿರಾಸೆಗೊಳಿಸಿತು.
ನವೆಂಬರ್ 5 ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಡೆಮಾಕ್ರೆಟಿಕ್ ಪಕ್ಷದಿಂದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಟ್ರಂಪ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಅಮೆರಿಕದ ಕಾಂಗ್ರೆಸ್ ಮೇಲೆ 2021ರ ಜನವರಿ 6ರಂದು ನಡೆದ ದಾಳಿಯ ನಂತರ ಹಿಂದಿನ ಟ್ವಿಟ್ಟರ್ ಮಾಲೀಕರು ಟ್ರಂಪ್ ಖಾತೆಯನ್ನು ಅಮಾನತಿನಲ್ಲಿರಿಸಿದ್ದರು.
ಇವರ ಖಾತೆಯನ್ನು 2023ರ ಆಗಸ್ಟ್ನಲ್ಲಿ ಸಕ್ರಿಯಗೊಳಿಸಲಾಗಿತ್ತು, ನಂತರವಷ್ಟೇ ಟ್ರಂಪ್ ಎಕ್ಸ್ನಲ್ಲಿ ಸಕ್ರಿಯರಾಗಿದ್ದರು. ಮಸ್ಕ್ ಅವರು 2020ರಿಂದ ಟ್ರಂಪ್ ಅವರ ಬೆಂಬಲಿಗ ಎಂದು ವರದಿಯಾಗಿದೆ. ನಂತರ ಡೊನಾಲ್ಡ್ ಟ್ರಂಪ್ ಟ್ರೂತ್ ಸೋಶಿಯಲ್ ಎಂಬ ತಮ್ಮದೇ ಆದ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಪ್ರಾರಂಭಿಸಿದ್ದರು.
ಮತ್ತಷ್ಟು ಓದಿ: ಟ್ರಂಪ್ ಮೇಲಿನ ಮಾರಣಾಂತಿಕ ದಾಳಿ ಪ್ರಕರಣ, ಪಾಕಿಸ್ತಾನಿ ವ್ಯಕ್ತಿಯ ಬಂಧನ
ಎಲಾನ್ ಮಸ್ಕ್ಅವರೊಂದಿಗಿನ ನೇರ ಸಂದರ್ಶನದ ಮೊದಲು ಟ್ರಂಪ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರಚಾರದ ವಿಡಿಯೋ ಪೋಸ್ಟ್ ಮಾಡಿದ್ದರು. ಮಸ್ಕ್ ಅವರ ಒಡೆತನದ ಟೆಸ್ಲಾ ಕೂಡಾ ಟ್ರಂಪ್ ಚುನಾವಣೆಗೆ ನಿಧಿ ಸಂಗ್ರಹಿಸುವ ಸಂಸ್ಥೆಯನ್ನು ಆರಂಭಿಸಿದೆ. ಹೀಗಾಗಿ ಟ್ರಂಪ್ ಕೂಡಾ ಟೆಸ್ಲಾವನ್ನು ಬೆಂಬಲಿಸಿದ್ದಾರೆ.
ಎಲಾನ್ ಮಸ್ಕ್ ಅವರೊಂದಿಗಿನ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ಅವರು ಕಮಲಾ ಹ್ಯಾರಿಸ್ ಅವರು ಗಡಿ ಭದ್ರತಾ ಮುಖ್ಯಸ್ಥರಾಗಿದ್ದರು ಮತ್ತು ಗಡಿ ಬಿಕ್ಕಟ್ಟನ್ನು ತಡೆಯಲು ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ. ಗಡಿಯನ್ನು ಮುಚ್ಚುವಲ್ಲಿ ಕಮಲಾ ಹ್ಯಾರಿಸ್ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಕಮಲಾ ಹ್ಯಾರಿಸ್ ಜೋ ಬೈಡನ್ ಅವರಿಗಿಂತ ಹೆಚ್ಚು ಅಸಮರ್ಥರು ಎಂದು ಹೇಳಿದ್ದಾರೆ.
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ವ್ಲಾಡಿಮಿರ್ ಪುಟಿನ್ ಮತ್ತು ಷಿ ಜಿನ್‌ಪಿಂಗ್ ಅವರನ್ನು ಹೊಗಳಿದರು ಮತ್ತು ಅವರು ತಮ್ಮ ದೇಶವನ್ನು ಪ್ರೀತಿಸುತ್ತಾರೆ ಎಂದು ಹೇಳಿದರು. ಇದು ವಿಭಿನ್ನ ರೀತಿಯ ಪ್ರೀತಿ. ಅವರನ್ನು ಎದುರಿಸಲು ಅಮೆರಿಕಕ್ಕೆ ಬಲಿಷ್ಠ ಅಧ್ಯಕ್ಷರ ಅಗತ್ಯವಿದೆ ಎಂದು ಹೇಳಿದರು.
DDoS ದಾಳಿಯು ಒಂದು ರೀತಿಯ ಸೈಬರ್ ದಾಳಿಯಾಗಿದೆ, ಇದರಲ್ಲಿ ಸರ್ವರ್ ಅಥವಾ ನೆಟ್‌ವರ್ಕ್ ಟ್ರಾಫಿಕ್‌ನಿಂದ ತುಂಬಿರುತ್ತದೆ ಆದ್ದರಿಂದ ಲೈವ್ ಸ್ಥಗಿತಗೊಳ್ಳುತ್ತದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ