Ramon Magsaysay Award: ಬಾಂಗ್ಲಾದೇಶಿ ಲಸಿಕಾ ವಿಜ್ಞಾನಿ, ಪಾಕಿಸ್ತಾನಿ ಅರ್ಥಶಾಸ್ತ್ರಜ್ಞ ಸೇರಿ ಐವರಿಗೆ ರಾಮನ್​ ಮ್ಯಾಗ್ಸೆಸೆ ಪ್ರಶಸ್ತಿ

ಬಾಂಗ್ಲಾದೇಶಿ ವಿಜ್ಞಾನಿ ಡಾ. ಫಿರ್ದೌಸಿ ಖಾದ್ರಿ (70) ಅವರು ಯುಕೆಯ ಲಿವರ್​ಪೂಲ್​ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್​ ಪದವಿ ಪಡೆದಿದ್ದಾರೆ.

Ramon Magsaysay Award: ಬಾಂಗ್ಲಾದೇಶಿ ಲಸಿಕಾ ವಿಜ್ಞಾನಿ, ಪಾಕಿಸ್ತಾನಿ ಅರ್ಥಶಾಸ್ತ್ರಜ್ಞ  ಸೇರಿ ಐವರಿಗೆ  ರಾಮನ್​ ಮ್ಯಾಗ್ಸೆಸೆ ಪ್ರಶಸ್ತಿ
ಮ್ಯಾಗ್ಸೆಸೆ ಪ್ರಶಸ್ತಿ
Edited By:

Updated on: Sep 01, 2021 | 9:38 AM

ಏಷ್ಯಾದ ನೊಬೆಲ್​ ಪ್ರಶಸ್ತಿ ಎಂದೇ ಪರಿಗಣಿಸಲ್ಪಡುವ ರಾಮನ್​ ಮ್ಯಾಗ್ಸೆಸೆ ಪ್ರಶಸ್ತಿಗೆ ಬಾಂಗ್ಲಾದೇಶಿ ಲಸಿಕಾ ಮಹಿಳಾ ವಿಜ್ಞಾನಿ ಡಾ. ಫಿರ್ದೌಸಿ ಖಾದ್ರಿ ಮತ್ತು ಪಾಕಿಸ್ತಾನ ಮೈಕ್ರೋ ಫೈನಾನ್ಸ್ ಪ್ರವರ್ತಕ ಮುಹಮ್ಮದ್ ಅಮ್ಜದ್ ಸಾಕಿಬ್ ಸೇರಿ ಒಟ್ಟು ಐವರ ಹೆಸರನ್ನು ಮಂಗಳವಾರ ಘೋಷಣೆ ಮಾಡಲಾಗಿದೆ. ಇವರಿಬ್ಬರನ್ನು ಹೊರತುಪಡಿಸಿ, ಫಿಲಿಪಿನೋ ಮೀನುಗಾರ ಮತ್ತು ಸಮುದಾಯದ ಪರಿಸರವಾದಿ ರಾಬರ್ಟೋ ಬಲ್ಲೋನ್, ಮಾನವೀಯ ಕೆಲಸ ಮತ್ತು ನಿರಾಶ್ರಿತರಿಗೆ ನೆರವು ನೀಡಿದ ಅಮೇರಿಕದ ಸ್ಟೀವನ್ ಮುನ್ಸಿ ಮತ್ತು ತನಿಖಾ ಪತ್ರಿಕೋದ್ಯಮದ ಮೂಲಕ ಅನೇಕ ಒಳ್ಳೆಯ ಕಾರ್ಯ ಮಾಡಿ, ಸ್ಫೂರ್ತಿಯಾದ ಇಂಡೋನೇಷ್ಯಾದ ವಾಚ್​ಡಾಕ್​ ಈ ಬಾರಿಯ ರಾಮನ್​ ಮ್ಯಾಗ್ಸೆಸೆಗೆ ಭಾಜನರಾಗಿದ್ದಾರೆ.

ಇವರಲ್ಲಿ ಬಾಂಗ್ಲಾದೇಶಿ ವಿಜ್ಞಾನಿ ಡಾ. ಫಿರ್ದೌಸಿ ಖಾದ್ರಿ (70) ಅವರು ಯುಕೆಯ ಲಿವರ್​ಪೂಲ್​ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್​ ಪದವಿ ಪಡೆದಿದ್ದಾರೆ. ನಂತರ ಬಾಂಗ್ಲಾದೇಶದಲ್ಲಿರುವ ಅಂತರಾಷ್ಟ್ರೀಯ ಅತಿಸಾರ ರೋಗ ಸಂಶೋಧನಾ ಕೇಂದ್ರಕ್ಕೆ 1988ರಲ್ಲಿ ಸೇರ್ಪಡೆಯಾದರು. ವೈಜ್ಞಾನಿಕ ವೃತ್ತಿಗಾಗಿ ಜೀವನವನ್ನೇ ಮುಡಿಪಾಗಿಟ್ಟವರಾಗಿದ್ದಾರೆ.  ಹಾಗೇ, ಪ್ರಶಸ್ತಿಗೆ ಆಯ್ಕೆಯಾದ ಪಾಕಿಸ್ತಾನದ ಅರ್ಥಶಾಸ್ತ್ರಜ್ಞ ಸಾಕಿಬ್, ಶೂನ್ಯ ಬಡ್ಡಿ ಸಾಲ  ನೀಡಲು ಬಳಸುವ ಮೊದಲ ಬಡ್ಡಿ ರಹಿತ ಮೈಕ್ರೋಫೈನಾನ್ಸ್ ಪ್ರೋಗ್ರಾಂ  ಅಖುವತ್  ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಧಿಕ್ಕಾರ; ಸಭೆ ಮೊಟಕುಗೊಳಿಸಿ ತೆರಳಿದ ಸ್ವಾಮೀಜಿ

ಬಿದಿರು ಕಣಾಲೆ ಸಾಂಬಾರ್; ವರ್ಷಕ್ಕೆ ಒಮ್ಮೆಯಾದರೂ ಮಾಡಿ ಸವಿಯಿರಿ

Published On - 9:28 am, Wed, 1 September 21