ತನ್ನ 84ನೇ ವಯಸ್ಸಿನಲ್ಲಿ ಮ್ಯಾರಥಾನ್ ಓಡುವ ಮಹಿಳೆ ಇದರಿಂದ ನನ್ನ ಆರೋಗ್ಯ ಉತ್ತಮಗೊಂಡಿದೆ ಅನ್ನುತ್ತಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 07, 2022 | 8:06 AM

ಹಾಂಗ್ ಕಾಂಗ್ ನಲ್ಲಿ ನೆಲೆಸಿರುವ ಬಾರ್ಬರಾ ಅವರ ಮಗ ಜೇಮ್ಸ್ ಕೇವಲ ತನ್ನಮ್ಮ ಓಡುವುದನ್ನು ನೋಡಲು ಮತ್ತು ಅವರನ್ನು ಸ್ಟಾರ್ಟಿಂಗ್ ಲೈನ್ ನಿಂದಲೇ ಹುರಿದುಂಬಿಸಲು ಲಂಡನ್ ಗೆ ಪ್ರಯಾಣಿಸಿದರಂತೆ.

ತನ್ನ 84ನೇ ವಯಸ್ಸಿನಲ್ಲಿ ಮ್ಯಾರಥಾನ್ ಓಡುವ ಮಹಿಳೆ ಇದರಿಂದ ನನ್ನ ಆರೋಗ್ಯ ಉತ್ತಮಗೊಂಡಿದೆ ಅನ್ನುತ್ತಾರೆ!
ಮ್ಯಾರಥಾನ್ ಓಡುತ್ತಿರುವ ಬಾರ್ಬರಾ
Follow us on

ಈ ಬ್ರಿಟಿಷ್ ಮಹಿಳೆಯನ್ನು ಸಾಮಾನ್ಯರಲ್ಲಿ ಒಬ್ಬರು ಅಂದುಕೊಂಡರೆ ಪ್ರಮಾದವೆಸಗಿದಂತೆ ಮಾರಾಯ್ರೇ. ಅಟ್ರಿಂಚ್ಯಾಮ್ ಟುಡೆ ನ್ಯೂಸ್ ವರದಿಯ ಪ್ರಕಾರ ರವಿವಾರ ಯುನೈಟೆಡ್ ಕಿಂಗ್ಡಮ್ ನಲ್ಲಿ (United Kingdom) ನಡೆದ ಮ್ಯಾರಾಥಾನ್ (Marathon) ಸ್ಪರ್ಧೆಯೊಂದರಲ್ಲಿ ತಮ್ಮ ಮಗನ ನೆರವಿನೊಂದರಲ್ಲಿ ಭಾಗವಹಿಸಿದ ಬಾರ್ಬರಾ ಥ್ಯಾಕ್ರೆ ಮೊದಲ ಸ್ಥಾನ ಗಳಿಸದಿದ್ದರೂ ಟಾಪ್ ಫಿನಿಶರ್ ಗಳಲ್ಲಿ (top finisher) ಒಬ್ಬರೆನಿಸಿಕೊಂಡರು.

84-ವರ್ಷ-ವಯಸ್ಸಿನ ಬಾರ್ಬರಾ ಓಡಲು ಆರಂಭಿಸಿದ್ದೇ ತನ್ನ 77ನೇ ವಯಸ್ಸಿನಲ್ಲಿ. ಮೊದಲಿಗೆ ಅವರು ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿವಾರ 20 ಕಿಮೀ ಮ್ಯಾರಾಥಾನ್ (12 ಮೈಲಿ) ಓಡಲಾರಂಭಿಸಿದರು. ಈ ಓಟ ತನ್ನ ದೇಹ ಉತ್ತಮವಾಗಿ ಕಾರ್ಯ ನಿರ್ವಹಿಸಲು ಮತ್ತು ಆರೋಗ್ಯದಿಂದಿಡಲು ನೆರವಾಯಿತು ಎಂದು ಅವರು ಹೇಳಿದ್ದಾರೆ.

‘ನಿಸ್ಸಂದೇಹವಾಗಿ ಓಟ ನಮ್ಮ ದೇಹವನ್ನು ಆರೋಗ್ಯವಾಗಿಡುತ್ತದೆ,’ ಎಂದು ಬಾರ್ಬರಾ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ತಮ್ಮ ದಿವಂಗತ ಸಹೋದರಿ ಆಡ್ರಿ ಒಬ್ಬ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಹೆಲ್ಡ್ ಗ್ರೀನ್ ನಲ್ಲಿರುವ ಸೆಂಟ್ ಌನ್ಸ್ ಧರ್ಮಶಾಲೆಗೆ ನಿಧಿ ಸಂಗ್ರಹಿಸಲು ಮ್ಯಾರಾಥಾನ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಬಿಬಿಸಿ ಹೇಳಿದೆ.

ಅಟ್ರಿಂಚ್ಯಾಮ್ ಟುಡೆ ನ್ಯೂಸ್ ವರದಿಯ ಪ್ರಕಾರ ಬಾರ್ಬರಾ ಈಗಾಗಲೇ 1,200 ಪೌಂಡ್ ಗಳನ್ನು (1.11 ಲಕ್ಷ ರೂ.) ಸಂಗ್ರಹಿಸಿದ್ದಾರೆ. ಓಟದಲ್ಲಿ ಭಾಗವಹಿಸಲು ತಾನು ಸಾಕಷ್ಟು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಅವರು ಹೇಳುತ್ತಾರೆ. 10 ಕಿಮೀಗಳ ಓಟವನ್ನು ಅವರು ವಾರಕ್ಕೆರಡು ಬಾರಿ ಮಾಡುತ್ತಾರಂತೆ ಮತ್ತು ಈ ಅಭ್ಯಾಸವನ್ನು ನಿಲ್ಲಿಸುವ ಯಾವ ಯೋಚನೆಯೂ ಅವರಿಗಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.

ಹಾಂಗ್ ಕಾಂಗ್ ನಲ್ಲಿ ನೆಲೆಸಿರುವ ಬಾರ್ಬರಾ ಅವರ ಮಗ ಜೇಮ್ಸ್ ಕೇವಲ ತನ್ನಮ್ಮ ಓಡುವುದನ್ನು ನೋಡಲು ಮತ್ತು ಅವರನ್ನು ಸ್ಟಾರ್ಟಿಂಗ್ ಲೈನ್ ನಿಂದಲೇ ಹುರಿದುಂಬಿಸಲು ಲಂಡನ್ ಗೆ ಪ್ರಯಾಣಿಸಿದರಂತೆ. ‘ಮಾಮ್ ಬಗ್ಗೆ ನನಗೆ ವಿಪರೀತ ಹೆಮ್ಮೆಯೆನಿಸುತ್ತಿದೆ. ಅವರು ಸಾವಿರಾರು ಜನರಿಗೆ ಪ್ರೇರಣೆಯಾಗಿದ್ದಾರೆ, ನನ್ನನ್ನು ಮತ್ತು ನನ್ನಂಥ ಅನೇಕರನ್ನು ರೇಸ್ ನಡೆಯುವ ಸ್ಥಳಕ್ಕೆ ಆಯಸ್ಕಾಂತದಂತೆ ಎಳೆದು ತರುತ್ತಿದ್ದಾರೆ,’ ಅಂತ ಜೇಮ್ಸ್ ಹೇಳಿದ್ದಾರೆ.

‘84 ನೇ ವಯಸ್ಸಿನಲ್ಲಿ, ನೀವು ಓಡುವ ಅಭ್ಯಾಸ ಆರಂಭಿಸುವುದು ಸಾಧ್ಯವಿಲ್ಲ. ನಿಮ್ಮ 70ರ ವಯಸ್ಸಿನಲ್ಲಿದ್ದಾಗ ಹೊಸ ಪ್ರಯೋಗಗಳನ್ನು ಪ್ರಾರಂಭಿಸಬಹುದು, ಆದರೆ 80 ರ ವಯಸ್ಸಿನಲ್ಲಿ ನೀವು ಅದನ್ನು ಮಾಡಬಹುದು ಎಂದು ನನಗೆ ಮನವರಿಕೆಯಾಗಿಲ್ಲ,’ ಬಾರ್ಬರಾ ಹೇಳಿದ್ದಾರೆ.

‘ನನ್ನ ಮಗ ಜೇಮ್ಸ್‌ ನನ್ನೊಂದಿಗೆ ಮತ್ತು ನನ್ನ ಪಕ್ಕದಲ್ಲೇ ಮ್ಯಾರಥಾನ್ ಓಡಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ ಮತ್ತು ಓಟದ ಮೇಲೆ ನನಗಿರುವ ವ್ಯಾಮೋಹ ಅವನೊಂದಿಗೆ ಹಂಚಿಕೊಳ್ಳುವುದು ನನಗೆ ಖುಷಿ ನೀಡುವ ಸಂಗತಿಯಾಗಿದೆ,’ ಅಂತ ಅವರು ಹೇಳಿದ್ದಾರೆ.

ಸೇಂಟ್ ಆನ್ಸ್ ಹಾಸ್ಪೈಸ್ ಗಾಗಿ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವುದು ಒಂದು ಅಸಾಮಾನ್ಯ ಸಂಗತಿಯಾಗಿದೆ ಎಂದು ಬಾರ್ಬರಾ ಹೇಳಿದ್ದಾರೆ. ಹೆಲ್ಡ್ ಗ್ರೀನ್‌ನಲ್ಲಿ ತನ್ನ ಪ್ರಧಾನ ಕಚೇರಿ ಹೊಂದಿರುವ ಸಂಸ್ಥೆಯು ತನ್ನ ಅಸ್ತಿತ್ವದಲ್ಲಿರುವ ಧರ್ಮಶಾಲೆಗೆ ಸಮೀಪದಲ್ಲಿ ಹೊಸದೊಂದನ್ನು ನಿರ್ಮಿಸಲು ಹಣ ಸಂಗ್ರಹಿಸುತ್ತಿದೆ.