ಮಾರ್ಗ ಮಧ್ಯೆ ಪ್ರಯಾಣಿಕರೊಬ್ಬರಿಗೆ ತೀವ್ರ ಅತಿಸಾರ, ಡೆಲ್ಟಾ ವಿಮಾನ ಯುಟರ್ನ್
ಡೆಲ್ಟಾ ವಿಮಾನವು ಆಟ್ಲಾಂಟಾದಿಂದ ಬಾರ್ಸಿಲೋನಾಗೆ ಹೊರಟಿತ್ತು, ಮಾರ್ಗ ಮಧ್ಯದಲ್ಲಿ ಪ್ರಯಾಣಿಕರೊಬ್ಬರಿಗೆ ಅತಿಸಾರ ಹೆಚ್ಚಾದ ಕಾರಣ ವಿಮಾನವು ಮತ್ತೆ ಅಟ್ಲಾಂಟಕ್ಕೆ ವಾಪಸ್ ಕರೆತರಲಾಯಿತು. ಜಾರ್ಜಿಯಾದ ಆಟ್ಲಾಂಟಾದಿಂದ ಸ್ಪೇನ್ ಬಾರ್ಸಿಲೋನಾಗೆ ಒಟ್ಟು 8 ಗಂಟೆಗಳು ತಗುಲುತ್ತವೆ, ವಿಮಾನ ಹೊರಟು 2 ಗಂಟೆಗಳ ಬಳಿಕ ಹಿಂದಿರುಗಿದೆ. ಎಕ್ಸ್ಪೋಸ್ಟ್ನಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲರ್ ಬಳಿ ಪ್ರಯಾಣಿಕರೊಬ್ಬರ ಆರೋಗ್ಯ ತೀವ್ರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಅಟ್ಲಾಂಟಾಗೆ ಹಿಂದಿರುಗಬೇಕೆಂದು ಮನವಿ ಮಾಡಿಕೊಂಡಿದ್ದರು.

ಘಟನೆಗೆ ಕಾರಣವಾದ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ, ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಮತ್ತೊಂದು ವಿಮಾನಕ್ಕೆ ವರ್ಗಾಯಿಸಲಾಯಿತು. ಅತಿಸಾರವಿದ್ದ ಕಾರಣ ವಿಮಾನದಲ್ಲೆಲ್ಲಾ ಮಲವಿಸರ್ಜನೆ ಮಾಡಿದ್ದರು. ಹೀಗಾಗಿ ವಿಮಾನವನ್ನು ಸಂಪೂರ್ಣವಾಗಿ ಶುಚಿಗೊಳಿಸಲಾಯಿತು.
ಮತ್ತಷ್ಟು ಓದಿ: Air India: ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್ನಲ್ಲಿ ತುರ್ತು ಭೂಸ್ಪರ್ಶ
ವಿಮಾನವು ನಿಗದಿತ ಸಮಯಕ್ಕಿಂತ ಎಂಟು ತಾಸು ತಡವಾಗಿ ಹಾರಾಟ ನಡೆಸಿತ್ತು. ವಿಮಾನವು ಸ್ಪೇನ್ ತಲುಪಿದಾಗ ಅತಿಸಾರ ಸಮಸ್ಯೆ ಇರುವ ಪ್ರಯಾಣಿಕ ಅದೇ ವಿಮಾನದಲ್ಲಿ ತೆರಳಿದ್ದರೇ ಎನ್ನುವ ಮಾಹಿತಿ ಅಸ್ಪಷ್ಟವಾಗಿದೆ.
A Delta Airlines Airbus A350 turned around back to Atlanta Friday night because of diarrhea throughout the airplane from a passenger and it’s a biohazard. 👀🥴
The FAA flight strip for DL194 was posted to Reddit (📷xStang05x) Also a passenger posted here asking why her son’s… pic.twitter.com/VWbkB47wF1
— Thenewarea51 (@thenewarea51) September 3, 2023
ಡೆಲ್ಟಾ ಅಧಿಕಾರಿಗಳು ವಿಮಾನದಲ್ಲಿ ವೈದ್ಯಕೀಯ ಸಮಸ್ಯೆ ಸಂಭವಿಸಿರುವುದನ್ನು ದೃಢಪಡಿಸಿದರು. ಇದರ ಪರಿಣಾಮವಾಗಿ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು. ಡೆಲ್ಟಾ ಅಧಿಕಾರಿಗಳು ವಿಮಾನ ವಿಳಂಬದಿಂದಾಗಿ ಉಂಟಾದ ಅನನುಕೂಲತೆ ಬಗ್ಗೆ ಕ್ಷಮೆಯಾಚಿಸಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ