AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರಧಾನಿ ಮೋದಿ ವಿಷ್ಣುವಿನ ಅವತಾರ’; 25 ವರ್ಷಗಳ ಆಡಳಿತಕ್ಕೆ ಭೂತಾನ್ ಪಿಎಂ ಅಭಿನಂದನೆ

ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಹಾರೈಸಿರುವ ಭೂತಾನ್ ಪ್ರಧಾನಮಂತ್ರಿ ತ್ಶೇರಿಂಗ್ ಟೋಬ್ಗೆ, ಪ್ರಧಾನಿ ಮೋದಿಯವರನ್ನು "ವಿಷ್ಣುವಿನ ಅವತಾರ" ಮತ್ತು "ನನ್ನ ಅಣ್ಣ" ಎಂದು ಬಣ್ಣಿಸಿದ್ದಾರೆ. 2019ರ ಜುಲೈ 27ರಂದು ನವದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಟೋಬ್ಗೆ, ಮೋದಿಯವರಲ್ಲಿ ವಿಷ್ಣುವಿನ ಅಂಶವನ್ನು ಕಂಡಿದ್ದಾಗಿ ಸ್ಮರಿಸಿದ್ದಾರೆ.

'ಪ್ರಧಾನಿ ಮೋದಿ ವಿಷ್ಣುವಿನ ಅವತಾರ'; 25 ವರ್ಷಗಳ ಆಡಳಿತಕ್ಕೆ ಭೂತಾನ್ ಪಿಎಂ ಅಭಿನಂದನೆ
ಭೂತಾನ್ ಪ್ರಧಾನಿ - ಪ್ರಧಾನಿ ಮೋದಿ Image Credit source: PTI
ಸುಷ್ಮಾ ಚಕ್ರೆ
|

Updated on: Oct 07, 2026 | 9:27 PM

Share

ತಿಂಪು, ಅಕ್ಟೋಬರ್ 7: ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಸುದೀರ್ಘ ಆಡಳಿತಾವಧಿಯನ್ನು ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಮರ್ಪಿಸಿರುವ ಭೂತಾನ್ ಪ್ರಧಾನಮಂತ್ರಿ ತ್ಶೇರಿಂಗ್ ಟೋಬ್ಗೆ, ಮೋದಿಯವರನ್ನು “ವಿಷ್ಣುವಿನ ಅವತಾರ” ಎಂದು ಬಣ್ಣಿಸಿದ್ದಾರೆ. ‘ಆ್ಯನ್‌ ಅವತಾರ್ ಫಾರ್ ಅವರ್ ಟೈಮ್ಸ್’ ಎಂಬ ವಿಶೇಷ ಲೇಖನದಲ್ಲಿ ಟೋಬ್ಗೆ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.

2018ರಲ್ಲಿ ನಮ್ಮ ಪಕ್ಷ ಚುನಾವಣೆಯಲ್ಲಿ ಸೋತಿದ್ದಾಗ, 2019ರ ಭೇಟಿಯ ವೇಳೆ ಮೋದಿ ನಮ್ಮನ್ನು ಅಣ್ಣನಂತೆ ಪ್ರೀತಿಯಿಂದ ನಡೆಸಿಕೊಂಡಿದ್ದರು. ಈ ನಾಯಕತ್ವದ ಶೈಲಿ ಮತ್ತು ದೂರದೃಷ್ಟಿಯು ಮೋದಿಯವರನ್ನು ಒಬ್ಬ ಅಪರೂಪದ ನಾಯಕನನ್ನಾಗಿ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ

ಗುಜರಾತ್ ಮಾದರಿಯಿಂದ ರಾಷ್ಟ್ರೀಯ ಸಶಕ್ತೀಕರಣ:

ಗುಜರಾತ್ ಮುಖ್ಯಮಂತ್ರಿಯಾಗಿ 12ಕ್ಕೂ ಹೆಚ್ಚು ವರ್ಷಗಳ ಮೋದಿಯವರ ಆಡಳಿತವು ಮೂಲಸೌಕರ್ಯ, ಹೂಡಿಕೆ ಮತ್ತು ಅಭಿವೃದ್ಧಿಗೆ ಮಾದರಿಯಾಗಿತ್ತು. ಪ್ರಧಾನಿಯಾದ ನಂತರ ಉತ್ಪಾದನೆ, ತಂತ್ರಜ್ಞಾನ, ನೈರ್ಮಲ್ಯ ಮತ್ತು ಆರ್ಥಿಕ ಸೇರ್ಪಡೆ ಮೂಲಕ ಭಾರತೀಯರಲ್ಲಿ “ನಮ್ಮ ದೇಶ ಮತ್ತು ನಮ್ಮಿಂದ ಸಾಧ್ಯ” ಎಂಬ ಬಲವಾದ ಆತ್ಮವಿಶ್ವಾಸವನ್ನು ಪ್ರಧಾನಿ ಮೋದಿ ಜಾಗೃತಗೊಳಿಸಿದ್ದಾರೆ ಎಂದು ಟೋಬ್ಗೆ ಶ್ಲಾಘಿಸಿದ್ದಾರೆ.

ಬೌದ್ಧ ಧರ್ಮದ ‘ರಿಗ್ಸಮ್ ಗೊಂಪೊ’ ತತ್ವದೊಂದಿಗೆ ಹೋಲಿಕೆ:

ಹಿಮಾಲಯನ್ ಮತ್ತು ಬೌದ್ಧ ಪರಂಪರೆಯ ‘ರಿಗ್ಸಮ್ ಗೊಂಪೊ’ ಅಂದರೆ ಜ್ಞಾನ (ಮಂಜುಶ್ರೀ), ಕರುಣೆ (ಅವಲೋಕಿತೇಶ್ವರ) ಮತ್ತು ಧೈರ್ಯ (ವಜ್ರಪಾಣಿ) ಎಂಬ ಮೂರು ಬೋಧಿಸತ್ತ್ವಗಳ ಅಪರೂಪದ ಸಮ್ಮಿಲನ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿದೆ ಎಂದು ಟೋಬ್ಗೆ ಬಣ್ಣಿಸಿದ್ದಾರೆ.

ಇದನ್ನೂ ಓದಿ: ಭಾರತದ ಘನತೆ ಹೆಚ್ಚಿಸಿದ ಮುತ್ಸದ್ದಿ: ಮೋದಿಯವರ 25 ವರ್ಷಗಳ ಆಡಳಿತ ಮೈಲಿಗಲ್ಲು ಕೊಂಡಾಡಿದ ಜಾಗತಿಕ ಗಣ್ಯರು

2014ರಲ್ಲಿ ಪ್ರಧಾನಿಯಾದ ತಕ್ಷಣ ಮೋದಿ ಅವರು ಭೂತಾನ್‌ಗೆ ನೀಡಿದ್ದ ಮೊದಲ ವಿದೇಶಿ ಭೇಟಿಯನ್ನು ಸ್ಮರಿಸಿದ ಟೋಬ್ಗೆ, ಮೋದಿ ನೀಡಿದ್ದ “B4B: ಭಾರತ ಭೂತಾನ್‌ಗಾಗಿ, ಭೂತಾನ್ ಭಾರತಕ್ಕಾಗಿ” ಎಂಬ ಘೋಷಣೆಯನ್ನು ಶ್ಲಾಘಿಸಿದರು. ಭಾರತದ ನೆರವಿನಿಂದ ಭೂತಾನ್‌ನ 11 ಮತ್ತು 12ನೇ ಪಂಚವಾರ್ಷಿಕ ಯೋಜನೆಗಳಿಗೆ ದೊರೆತ ಆರ್ಥಿಕ ಹಾಗೂ ಮೂಲಸೌಕರ್ಯ ಬೆಂಬಲವನ್ನು ಅವರು ಕೊಂಡಾಡಿದರು.

ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ’ ಪ್ರಶಸ್ತಿಯನ್ನು ಸ್ವೀಕರಿಸಿದ ವಿಶ್ವದ ಮೊದಲ ವಿದೇಶಿ ನಾಯಕ ಪ್ರಧಾನಿ ಮೋದಿ ಎಂಬುದನ್ನು ಟೋಬ್ಗೆ ಸ್ಮರಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ