BIG NEWS: ಒಮಿಕ್ರಾನ್ ವಿರುದ್ಧ ಪರಿಣಾಮಕಾರಿಯಾಗಿರುವ ಮಾಡೆರ್ನಾ ಲಸಿಕೆಗೆ ಯುಕೆ ಅನುಮೋದನೆ

| Updated By: ರಶ್ಮಿ ಕಲ್ಲಕಟ್ಟ

Updated on: Aug 15, 2022 | 5:25 PM

ಒಮಿಕ್ರಾನ್ ವೈರಸ್ (Omicron) ವಿರುದ್ಧ ಪರಿಣಾಮಕಾರಿ ಲಸಿಕೆ ಮಾಡರ್ನಾ ಲಸಿಕೆಯನ್ನು ನೀಡಲು UK ಸರ್ಕಾರ ಅನುಮೋದನೆ ನೀಡಿದೆ.

BIG NEWS: ಒಮಿಕ್ರಾನ್ ವಿರುದ್ಧ ಪರಿಣಾಮಕಾರಿಯಾಗಿರುವ ಮಾಡೆರ್ನಾ ಲಸಿಕೆಗೆ ಯುಕೆ ಅನುಮೋದನೆ
Moderna vaccine
Follow us on

ಕೊವಿಡ್ -19ನ (Covid-19) ಒಮಿಕ್ರಾನ್ ರೂಪಾಂತರಿ (Omicron variant) ಮತ್ತು ಅದರ ಮೂಲರೂಪದ ವಿರುದ್ಧ ಹೋರಾಡಬಲ್ಲ ನವೀಕರಿಸಿ ಮಾಡೆರ್ನಾ ಲಸಿಕೆಗೆ ಯುಕೆ ಅನುಮೋದನೆ ನೀಡಿದೆ. ಈ ರೀತಿ ಮಾಡೆರ್ನಾ ಲಸಿಕೆಗೆ ಅನುಮೋದನೆ ನೀಡಿದ ಮೊದಲ ದೇಶವಾಗಿದೆ ಯುಕೆ.  ಮೆಡಿಸಿನ್ ಆಂಡ್ ಹೆಲ್ತ್‌ಕೇರ್ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿ (MHRA) ವಯಸ್ಕರಿಗೆ ಬೂಸ್ಟರ್ ಡೋಸ್ ಆಗಿ ಅಮೆರಿಕದ ಔಷಧ ಕಂಪನಿ ಮಾಡೆರ್ನಾ ತಯಾರಿಸಿದ ಲಸಿಕೆಯನ್ನು ಅನುಮೋದಿಸಿದೆ. ಈ ಬಗ್ಗೆ ಹೇಳಿಕೆ ನೀಡಿದ ಮೆಡಿಸಿನ್ ಆಂಡ್ ಹೆಲ್ತ್‌ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ (MHRA) ವಯಸ್ಕರಿಗೆ ನೀಡುವ  ಬೂಸ್ಟರ್ ಡೋಸ್‌ಗಳಿಗೆ ಲಸಿಕೆಯನ್ನು ಅನುಮೋದಿಸಿದೆ ಎಂದು ಹೇಳಿದೆ. ಯುಕೆ ನಿಯಂತ್ರಕದ ಸುರಕ್ಷತೆ, ಗುಣಮಟ್ಟ ಮತ್ತು ಪರಿಣಾಮಕಾರಿ ಮಾನದಂಡವನ್ನು ಪೂರೈಸುವುದರ ಜತೆಗೆ  ಎರಡೂ ರೂಪಾಂತರಿಗಳ ವಿರುದ್ಧ ಪ್ರಬಲ ಪರಿಣಾಮಕಾರಿಯಾಗಿ ಕಂಡು ಬಂದ ನಂತರ ಇದಕ್ಕೆ ಅನುಮೋದನೆ ನೀಡಲಾಗಿದೆ. ಒಮಿಕ್ರಾನ್  (BA.1) ಮತ್ತು ಮೂಲ 2020 ವೈರಸ್ ಎರಡರ ವಿರುದ್ಧವೂ ಬೂಸ್ಟರ್ “ಬಲವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು” ಪ್ರಚೋದಿಸಿದೆ ಎಂದು ತೋರಿಸಿರುವ ಕ್ಲಿನಿಕಲ್ ಪ್ರಯೋಗದ ಡೇಟಾವನ್ನು ಆಧರಿಸಿ ಎಂಎಚ್ಆರ್ ಎ ತನ್ನ ಅನುಮೋದನೆಯನ್ನು ನೀಡಿದೆ ಎಂದು ಸಂಸ್ಥೆ ಹೇಳಿದೆ.

ಎಂಎಚ್ಆರ್ ಎ ಸಹ ಪರಿಶೋಧನಾ ವಿಶ್ಲೇಷಣೆಯನ್ನು ಉಲ್ಲೇಖಿಸಿದೆ, ಇದರಲ್ಲಿ ಈ ಲಸಿಕೆ ಪ್ರಸ್ತುತ ಪ್ರಬಲವಾದ ಒಮಿಕ್ರಾನ್ ವೈರಸ್​​ಗಳಾದ  BA.4 ಮತ್ತು BA.5 ವಿರುದ್ಧ ಉತ್ತಮ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ ಎಂದು ಕಂಡುಬಂದಿದೆ.

ಯುಕೆಯಲ್ಲಿ ಬಳಸಲಾಗುತ್ತಿರುವ ಮೊದಲ ಜನರೇಷನ್​​ನ ಕೋವಿಡ್-19 ಲಸಿಕೆಗಳು ರೋಗದ ವಿರುದ್ಧ ಪ್ರಮುಖ ರಕ್ಷಣೆಯನ್ನು ನೀಡುವುದನ್ನು ಮತ್ತು ಜೀವಗಳನ್ನು ಉಳಿಸುವುದನ್ನು ಮುಂದುವರಿಸುತ್ತವೆ  ಎಂದು ಎಂಎಚ್ಆರ್​​ಎ  ಮುಖ್ಯ ಕಾರ್ಯನಿರ್ವಾಹಕ ಜೂನ್ ರೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವೈರಸ್ ವಿಕಸನಗೊಳ್ಳುತ್ತಲೇ ಇರುವುದರಿಂದ ಈ ಕಾಯಿಲೆಯಿಂದ ನಮ್ಮನ್ನು ರಕ್ಷಿಸಲು ಈ  ಲಸಿಕೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
ವೆಂಟಿಲೇಟರ್ ತೆರವು, ಸಲ್ಮಾನ್ ರಶ್ದಿ ಚೇತರಿಸಿಕೊಳ್ಳುತ್ತಿದ್ದಾರೆ: ಮಗ ಜಾಫರ್ ಟ್ವೀಟ್
ಸಚಿವ ಜೈಶಂಕರ್ ಮಾತಿನ ವಿಡಿಯೊ ಪ್ಲೇ ಮಾಡಿ ಭಾರತದ ವಿದೇಶಾಂಗ ನೀತಿಗಳನ್ನು ಹೊಗಳಿದ ಇಮ್ರಾನ್ ಖಾನ್
Canberra Airport Firing: ಆಸ್ಟ್ರೇಲಿಯಾದ ಕ್ಯಾನ್​ಬೆರಾ ಏರ್​ಪೋರ್ಟ್​ನಲ್ಲಿ ಗುಂಡಿನ ದಾಳಿ
Heat Wave: ಬಿಸಿಗಾಳಿಯಿಂದ ತತ್ತರಿಸಿದ ಯುರೋಪ್, ತಾಪಮಾನ ಬದಲಾವಣೆ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ?

.

Published On - 4:57 pm, Mon, 15 August 22