ಪ್ರವಾದಿ ಬಗ್ಗೆ ಬಿಜೆಪಿ ನಾಯಕರ ಆಕ್ಷೇಪಾರ್ಹ ಹೇಳಿಕೆಗೆ ಕತಾರ್ ಕಿಡಿ; ಭಾರತೀಯ ರಾಯಭಾರಿಗೆ ಸಮನ್ಸ್

| Updated By: ರಶ್ಮಿ ಕಲ್ಲಕಟ್ಟ

Updated on: Jun 06, 2022 | 3:24 PM

Qatar ಬಿಜೆಪಿ ಕ್ರಮವನ್ನು ಶ್ಲಾಘಿಸಿದ ಕತಾರ್​​ನ ವಿದೇಶಾಂಗ ಕಚೇರಿಯು, ಭಾರತ ಸರ್ಕಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಈ ಹೇಳಿಕೆಗಳನ್ನು ಖಂಡಿಸಬೇಕು ಎಂದು ಮಿತ್ತಲ್ ಅವರಿಗೆ ಹೇಳಿದೆ.

ಪ್ರವಾದಿ ಬಗ್ಗೆ ಬಿಜೆಪಿ ನಾಯಕರ ಆಕ್ಷೇಪಾರ್ಹ ಹೇಳಿಕೆಗೆ ಕತಾರ್ ಕಿಡಿ; ಭಾರತೀಯ ರಾಯಭಾರಿಗೆ ಸಮನ್ಸ್
ದೀಪಕ್ ಮಿತ್ತಲ್
Follow us on

ದೆಹಲಿ: ಪ್ರವಾದಿ ಮುಹಮ್ಮದ್ (Prophet Muhammad) ಬಗ್ಗೆ ಬಿಜೆಪಿ ನಾಯಕರು ಮಾಡಿದ ಕಾಮೆಂಟ್‌ಗಳ ಕುರಿತು ದೇಶ ಮತ್ತು ವಿದೇಶಗಳಲ್ಲಿ ಹೆಚ್ಚುತ್ತಿರುವ ಆಕ್ರೋಶದ ನಡುವೆಯೇ ಕತಾರ್‌ (Qatar), ಭಾರತೀಯ ರಾಯಭಾರಿಯನ್ನು ಭಾನುವಾರ ಕರೆಸಿಕೊಂಡಿದೆ. ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಮಾಡಿರುವ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ (Nupur Sharma) ಮತ್ತು ನವೀನ್ ಕುಮಾರ್ ಜಿಂದಾಲ್ (Naveen Kumar Jindal) ವಿರುದ್ಧ ಪಕ್ಷವು ಕ್ರಮ ಕೈಗೊಂಡಿದೆ ಆದರೆ ಅರಬ್ ರಾಷ್ಟ್ರಗಳಲ್ಲಿ ಇನ್ನೂ ಆಕ್ರೋಶ ಮುಂದುವರಿದಿದೆ. ಭಾರತೀಯ ಸರಕುಗಳು ಮತ್ತು ಚಲನಚಿತ್ರಗಳನ್ನು ಬಹಿಷ್ಕರಿಸುವಂತೆ ಅಲ್ಲಿನ ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಕರೆ ನೀಡಿದ್ದಾರೆ. ಭಾನುವಾರ ಬೆಳಗ್ಗೆ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಅವರು ವಿದೇಶಾಂಗ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಈಸಭೆಯಲ್ಲಿ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರ ಹೇಳಿಕೆಗಳ ಬಗ್ಗೆ ಕತಾರ್ ಕಳವಳ ವ್ಯಕ್ತಪಡಿಸಿತು. ಬಿಜೆಪಿ ಕ್ರಮವನ್ನು ಶ್ಲಾಘಿಸಿದ ಕತಾರ್​​ನ ವಿದೇಶಾಂಗ ಕಚೇರಿಯು, ಭಾರತ ಸರ್ಕಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಈ ಹೇಳಿಕೆಗಳನ್ನು ಖಂಡಿಸಬೇಕು ಎಂದು ಮಿತ್ತಲ್ ಅವರಿಗೆ ಹೇಳಿದೆ. “ಇಂತಹ ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ಶಿಕ್ಷೆಯಿಲ್ಲದೆ ಮುಂದುವರಿಸಲು ಅವಕಾಶ ನೀಡುವುದು ಮಾನವ ಹಕ್ಕುಗಳ ರಕ್ಷಣೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಮತ್ತು ಮತ್ತಷ್ಟು ಪೂರ್ವಗ್ರಹ ಮತ್ತು ಅಮುಖ್ಯವಾಗುವುದಕ್ಕೆ ಕಾರಣವಾಗಬಹುದು. ಇದು ಹಿಂಸೆ ಮತ್ತು ದ್ವೇಷವನ್ನು ಸೃಷ್ಟಿಸುತ್ತದೆ ಎಂದು ಹೇಳಿಕೆಯೊಂದರಲ್ಲಿ ಅಲ್ಲಿನ ಸರ್ಕಾರ ಕತಾರ್ ರಾಯಭಾರಿ ಅವರಿಗೆ ತಿಳಿಸಿದೆ.

ಟ್ವೀಟ್‌ಗಳು ಯಾವುದೇ ರೀತಿಯಲ್ಲಿ ಭಾರತ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಇವುಗಳು ಕ್ಷುಲ್ಲಕ ವ್ಯಕ್ತಿಗಳ ದೃಷ್ಟಿಕೋನಗಳಾಗಿವೆ ಎಂದು ಕತಾರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಪ್ರತಿಕ್ರಿಯಿಸಿದೆ.
“ನಮ್ಮ ನಾಗರಿಕ ಪರಂಪರೆ ಮತ್ತು ವೈವಿಧ್ಯತೆಯಲ್ಲಿ ಏಕತೆಯ ಬಲವಾದ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಅನುಗುಣವಾಗಿ, ಭಾರತ ಸರ್ಕಾರವು ಎಲ್ಲಾ ಧರ್ಮಗಳಿಗೆ ಅತ್ಯುನ್ನತ ಗೌರವವನ್ನು ನೀಡುತ್ತದೆ. ಅವಹೇಳನಕಾರಿ ಹೇಳಿಕೆಗಳನ್ನು ನೀಡಿದವರ ವಿರುದ್ಧ ಈಗಾಗಲೇ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಭಾರತದ ರಾಯಭಾರಿ ಕಚೇರಿ ಹೇಳಿದೆ.

ಇದನ್ನೂ ಓದಿ
ಸೂ…ಮಕ್ಕಳಾ ಅಂತ ಹೇಳಿ ಕಾಂಗ್ರೆಸ್ ಪಕ್ಷವನ್ನು ನಿಂದಿಸಿದ ಬಿಜೆಪಿ ಸಂಸದ! ವಿಡಿಯೋ ವೈರಲ್
ಮಾಡೋಕೆ ಕೆಲಸ ಇಲ್ಲ ಅವರಿಗೆ, ನಮ್ಮ ಹಳೇ ಚಡ್ಡಿಗಳನ್ನು ಕೊಡುತ್ತೇವೆ ಸುಟ್ಕುಂಡು ಇರಲಿ: ಸಿಟಿ ರವಿ
ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ವ್ಯಾಪಕ ಆಕ್ರೋಶ: ಬಿಜೆಪಿಯಿಂದ ನೂಪುರ್ ಶರ್ಮಾ ಅಮಾನತು , ನವೀನ್ ಜಿಂದಾಲ್ ಉಚ್ಚಾಟನೆ
‘ನಮ್ಮ ಪಕ್ಷ ಎಲ್ಲ ಧರ್ಮವನ್ನು ಗೌರವಿಸುತ್ತದೆ, ಯಾವುದೇ ಧರ್ಮವನ್ನು ಅವಮಾನಿಸುವುದನ್ನು ಬಲವಾಗಿ ಖಂಡಿಸುತ್ತದೆ’: ಬಿಜೆಪಿ ಹೇಳಿಕೆ

ಮೇ 30 ರಿಂದ ಜೂನ್ 7 ರವರೆಗಿನ ಮೂರು ರಾಷ್ಟ್ರಗಳ ಪ್ರವಾಸದ ಕೊನೆಯ ಹಂತದಲ್ಲಿ ಇಲ್ಲಿಗೆ ಆಗಮಿಸಿದ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ಭೇಟಿಯ ಮಧ್ಯೆ ಕತಾರ್‌ನ “ಸಂಪೂರ್ಣ ನಿರಾಕರಣೆ ಮತ್ತು ಖಂಡನೆ” ಬಂದಿದೆ.


ಕಳೆದ ವಾರ ದೇಶಾದ್ಯಂತ ಕೋಮು ಘಟನೆಗಳ ಸರಣಿಯ ಹಿನ್ನೆಲೆಯಲ್ಲಿ ಶರ್ಮಾ ಅವರು ಟಿವಿ ಚರ್ಚೆಯ ವೇಳೆ ಪ್ರವಾದಿಯನ್ನು ಅವಮಾನಿಸುವ ಹೇಳಿಕೆ ನೀಡಿದ್ದು ಇದು ಮುಸ್ಲಿಂ ಗುಂಪುಗಳಿಂದ ಆಕ್ರೋಶಕ್ಕೆ ಕಾರಣವಾಯಿತು. ಜಿಂದಾಲ್ ಅವರು ಪ್ರವಾದಿಯವರ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದಾಗ ಅವರು ಆ ಟ್ವೀಟ್ ಡಿಲೀಟ್ ಮಾಡಿದರು ಎಂದು ಕತಾರ್ ನ ಸಚಿವರೊಬ್ಬರು ಟ್ವೀಟ್ ಮಾಡಿದ್ದಾರೆ.

ಜಿಂದಾಲ್ ಅವರನ್ನು ಬಿಜೆಪಿ ಉಚ್ಚಾಟಿಸಿದೆ ಮತ್ತು ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿದೆ. ಇದಕ್ಕಿಂತ ಮುನ್ನ ಬಿಜೆಪಿ ಹೇಳಿಕೆಯೊಂದನ್ನು ಪ್ರಕಟಿಸಿದ್ದು “ಯಾವುದೇ ಪಂಥ ಅಥವಾ ಧರ್ಮವನ್ನು ಅವಮಾನಿಸುವ ಅಥವಾ ಕೀಳಾಗಿಸುವಂತಹ ಯಾವುದೇ ಸಿದ್ಧಾಂತವನ್ನು ಪಕ್ಷಬಲವಾಗಿ ವಿರೋಧಿಸುತ್ತದೆ. ಬಿಜೆಪಿ ಅಂತಹ ಜನರು ಅಥವಾ ತತ್ವಶಾಸ್ತ್ರವನ್ನು ಪ್ರಚಾರ ಮಾಡುವುದಿಲ್ಲ” ಎಂದು ಹೇಳಿದೆ.

 

Published On - 8:48 pm, Sun, 5 June 22