Vote Of Confidence: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ರಿಂದ ಇಂದು ವಿಶ್ವಾಸಮತ ಯಾಚನೆ
Vote Of Confidence: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಪಕ್ಷದ ಸದಸ್ಯರ ಬಳಿ ವಿಶ್ವಾಸಮತ ಯಾಚಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಪಕ್ಷದ ಸದಸ್ಯರ ಬಳಿ ವಿಶ್ವಾಸಮತ ಯಾಚಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಎಲ್ಲ ದೇಶಗಳಂತೆ ಇಡೀ ಬ್ರಿಟನ್ನೇ ಸ್ಥಬ್ದವಾಗಿದ್ದರೂ ಕೂಡ ತಾನು ಮಾತ್ರ ಕಚೇರಿಯಲ್ಲಿ ಪಾರ್ಟಿ ಮಾಡಿದ್ದು ಈಗ ಬ್ರಿಟನ್ ಪ್ರಧಾನಿಯ ತಲೆದಂಡ ಆಗುವ ಮಟ್ಟಕ್ಕೆ ಹೋಗಿದೆ. ಡೌನಿಂಗ್ ಸ್ಟ್ರೀಟ್ ಆಫೀಸ್‌ನಲ್ಲಿ ನಡೆದ ಅಕ್ರಮ ಪಾರ್ಟಿಗಳ ಬಗ್ಗೆ ಇತ್ತೀಚೆಗೆ ಅಧಿಕೃತ ವರದಿ ಹೊರಗೆ ಬಂದಿದ್ದು ಸ್ವತಃ ಬೋರಿಸ್ ಸನ್ ಕ್ಷಮೆ ಕೇಳಿದ್ರೂ ವಿವಾದ ತಣ್ಣಗಾಗುತ್ತಿಲ್ಲ.
ಬೋರಿಸ್‌ನ ಪಕ್ಷ ಕನ್ಸರ್ವೇಟಿವ್ಸ್‌ನ ಸಂಸದರೇ ಬಹಿರಂಗವಾಗಿ ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಕ್ಷಮೆ ಕೇಳಿರುವ ಪ್ರಧಾನಿ ರಾಜಿನಾಮೆ ನೀಡಲ್ಲ ಅಂತ ಹೇಳಿದ್ದಾರೆ. 25 ಕ್ಕೂ ಹೆಚ್ಚು ಕನ್ಸರ್ವೇಟಿವ್ ಸಂಸದರು ಬೋರಿಸ್ ಕೆಳಗಿಳಿಯಬೇಕು ಅಂತ ಹೇಳಿದ್ದು ಹಲವಾರು ಜನ ನೋ ಕಾನ್ಫಿಡೆನ್ಸ್ ಲೆಟರ್‌ಗಳನ್ನು ಕನ್ಸರ್ವೇಟಿವ್ ಪಕ್ಷದ ಸಂಸದೀಯ ಸಮಿತಿ ʻ1922 ಕಮಿಟಿʼಗೆ ಬರೆದಿದ್ದಾರೆ.
ಒಂದು ವೇಳೆ ಒಟ್ಟು ಕನ್ಸರ್ವೇಟಿವ್ ಸಂಸದರ 15% ಜನ ವಿಶ್ವಾಸಮತ ಯಾಚನೆಗೆ ಆಗ್ರಹ ಮಾಡಿದರೆ ʻ1922 ಕಮಿಟಿʼಯ ಚೇರ್ಮನ್ ಗಂಭೀರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅದರ ಪ್ರಕಾರ ಈಗ ಸದ್ಯಕ್ಕೆ ಬೋರಿಸ್ ಜಾನ್ಸನ್‌ರ ಪಕ್ಷದಲ್ಲಿ 359 ಸಂಸದರಿದ್ದು ವಿಶ್ವಾಸಮತಯಾಚನೆಗೆ 54 ಸಂಸದರು ಆಗ್ರಹಿಸಬೇಕಾಗುತ್ತದೆ.
ಮೂಲಗಳ ಪ್ರಕಾರ ಈಗಾಗಲೇ ವಿಶ್ವಾಸಮತ ಯಾಚನೆಯಾಗೋವಷ್ಟು ಪತ್ರಗಳು ಬಂದಿವೆ ಇಂದು ವಿಶ್ವಾಸಮತ ಯಾಚನೆ ನಡೆಯಲಿದ್ದು, ಒಂದು ವೇಳೆ ಬೋರಿಸ್ ಜಾನ್ಸ್‌ನ್ ಏನಾದರೂ ಸೋತರೆ ಬ್ರಿಟನ್ ಮತ್ತೊಬ್ಬ ಪ್ರಧಾನಿಯನ್ನು ಕಾಣಲಿದೆ.
ರಾಜಕುಮಾರನ ಅಂತ್ಯಕ್ರಿಯೆಗೂ ಮುನ್ನ ಮತ್ತೆ ಪಾರ್ಟಿ:ಮೊದಲೇ ರಾಜೀನಾಮೆ ನೀಡುವಂತೆ ಒತ್ತಡ ಎದುರಿಸುತ್ತಿರುವ ಬೋರಿಸ್ ಜಾನ್ಸನ್‌ಗೆ ಮತ್ತೊಂದು ವಿವಾದ ತಗಲಿಕೊಂಡಿದ್ದು, 2021ರಲ್ಲಿ ಬ್ರಿಟನ್ ರಾಜಕುಮಾರ ಫಿಲಿಪ್ (ರಾಣಿ ಎಲಿಜಬೆತ್‌ರ ಪತಿ) ಅವರ ಅಂತ್ಯಕ್ರಿಯೆಗೆ ಕೆಲವೇ ಗಂಟೆಗಳ ಮುನ್ನ ‘ಬ್ರಿಂಗ್ ಯುವರ್ ಓನ್ ಬೂಜ್’ ಹೆಸರಿನ ಮದ್ಯದ ಪಾರ್ಟಿಯಲ್ಲಿ ಖುಷಿಯಿಂದ ಕುಡಿದು, ಕುಣಿದ ಆರೋಪ ಕೇಳಿಬಂದಿದೆ.
ರಿಷಿ ಪರ ಭರ್ಜರಿ ಬೆಟ್ಟಿಂಗ್: ಮದ್ಯದ ಪಾರ್ಟಿ ವಿವಾದದಲ್ಲಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಬ್ರಿಟನ್ನಿನ ಬುಕಿಗಳ ವಲಯದಲ್ಲಿ ತೀವ್ರ ಬೆಟ್ಟಿಂಗ್ ನಡೆಯುತ್ತಿದೆ. ಬೋರಿಸ್ ರಾಜೀನಾಮೆ ನೀಡಿದರೆ ಮುಂದೆ ಪ್ರಧಾನಿಯಾಗುವವರ ಪಟ್ಟಿಯಲ್ಲಿ ಬುಕಿಗಳ ನಂ.1 ಫೇವರಿಟ್ ರಿಷಿ ಸುನಾಕ್ ಆಗಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.
ಇತರೆ ವಿದೇಶಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:28 pm, Mon, 6 June 22