ಲಂಡನ್​ನಲ್ಲಿ ಹರ್ಷಿತಾ ಕೊಲೆ ಪ್ರಕರಣ, ಕತ್ತು ಹಿಸುಕಿ, ಶವವನ್ನು ಕಾರಿನ ಡಿಕ್ಕಿಯಲ್ಲಿಟ್ಟು ಪತಿ ಪರಾರಿ

ಲಂಡನ್​ನ ಇಲ್ಫೋರ್ಡ್​ನಲ್ಲಿ ಪಾರ್ಕ್​ ಮಾಡಲಾಗಿದ್ದ ಕಾರಿನ ಡಿಕ್ಕಿಯಲ್ಲಿ ಭಾರತೀಯ ಮಹಿಳೆಯ ಶವ ಪತ್ತೆಯಾಗಿದೆ. ಆಕೆಯನ್ನು ಹರ್ಷಿತಾ ಎಂದು ಗುರುತಿಸಲಾಗಿದೆ. ಆಕೆ ಕಳೆದ ಆಗಸ್ಟ್​ನಲ್ಲಿ ಪಂಕಜ್ ಲಂಬಾ ಎಂಬುವವರನ್ನು ಮದುವೆಯಾಗಿದ್ದರು, ಆಕೆ ಹುಟ್ಟಿ ಬೆಳೆದಿದ್ದೆಲ್ಲಾ ದೆಹಲಿಯಲ್ಲೇ. ಮದುವೆಯಾದ ಬಳಿಕ ಏಪ್ರಿಲ್​ನಲ್ಲಿ ಯುಕೆಗೆ ಹೋಗಿದ್ದರು. ಕೆಲವು ದಿನಗಳ ಹಿಂದೆ ನಾರ್ಥಾಂಪ್ಟನ್‌ಶೈರ್‌ನಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು.

ಹರ್ಷಿತಾ
Follow us
ನಯನಾ ರಾಜೀವ್
|

Updated on: Nov 20, 2024 | 11:03 AM

ಲಂಡನ್​ನ ಇಲ್ಫೋರ್ಡ್​ನಲ್ಲಿ ಪಾರ್ಕ್​ ಮಾಡಲಾಗಿದ್ದ ಕಾರಿನ ಡಿಕ್ಕಿಯಲ್ಲಿ ಭಾರತೀಯ ಮಹಿಳೆಯ ಶವ ಪತ್ತೆಯಾಗಿದೆ. ಆಕೆಯನ್ನು ಹರ್ಷಿತಾ ಎಂದು ಗುರುತಿಸಲಾಗಿದೆ. ಆಕೆ ಕಳೆದ ಆಗಸ್ಟ್​ನಲ್ಲಿ ಪಂಕಜ್ ಲಂಬಾ ಎಂಬುವವರನ್ನು ಮದುವೆಯಾಗಿದ್ದರು, ಆಕೆ ಹುಟ್ಟಿ ಬೆಳೆದಿದ್ದೆಲ್ಲಾ ದೆಹಲಿಯಲ್ಲೇ. ಮದುವೆಯಾದ ಬಳಿಕ ಏಪ್ರಿಲ್​ನಲ್ಲಿ ಯುಕೆಗೆ ಹೋಗಿದ್ದರು. ಕೆಲವು ದಿನಗಳ ಹಿಂದೆ ನಾರ್ಥಾಂಪ್ಟನ್‌ಶೈರ್‌ನಲ್ಲಿರುವ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು.

ನವೆಂಬರ್ 11 ರಂದು ಮೃತ ದೇಹ ಪತ್ತೆಯಾದ ನಂತರ ಸಂಚಲನ ಉಂಟಾಗಿತ್ತು. ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹರ್ಷಿತಾಳನ್ನು ಆಕೆಯ 23 ವರ್ಷದ ಪತಿ ಪಂಕಜ್ ಹತ್ಯೆ ಮಾಡಿರಬಹುದು, ಅವರು ಅಪರಾಧ ಮಾಡಿದ ಕೂಡಲೇ ದೇಶದಿಂದ ಪರಾರಿಯಾಗಿದ್ದರು. ಮನೆಯಿಂದ 145 ಕಿ.ಮೀ ದೂರ ಇಲ್ಬೋರ್ಡ್​ಗೆ ಆಕೆಯ ಶವವನ್ನು ತೆಗೆದುಕೊಂಡು ಹೋಗಲಾಗಿತ್ತು.

ಈ ತಿಂಗಳ ಆರಂಭದಲ್ಲಿ ನಾರ್ಥಾಂಪ್ಟನ್‌ಶೈರ್‌ನಲ್ಲಿ ಹರ್ಷಿತಾಳನ್ನು ಆಕೆಯ ಪತಿ ಪಂಕಜ್ ಲಂಬಾ ಹತ್ಯೆ ಮಾಡಿದ್ದಾರೆ, ಈಗ ದೇಶಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 10ರಂದು ರಾತ್ರಿ ಮನೆಗೆ ಕರೆ ಮಾಡಿದ್ದ ಆಕೆ ತಾನು ಪತಿಗಾಗಿ ಊಟ ಸಿದ್ಧಪಡಿಸುತ್ತಿರುವುದಾಗಿ ಹೇಳಿದ್ದಳು.

ಮತ್ತಷ್ಟು ಓದಿ: ಕುಡಿದ ಮತ್ತಿನಲ್ಲಿ ಕತ್ತಿಯಿಂದ ಪತ್ನಿಯ ಕತ್ತು ಸೀಳಿದ ವ್ಯಕ್ತಿ

ಅದಾದ ಬಳಿಕ ಎರಡು ದಿನಗಳ ಕಾಲ ಫೋನ್ ಸ್ವಿಚ್ಡ್​ ಆಫ್ ಆಗಿತ್ತು. ನವೆಂಬರ್ 13ರಂದು ಆಕೆಯ ಕುಟುಂಬದವರು ನಾರ್ಥಾಂಪ್ಟನ್‌ಶೈರ್ ಪೊಲೀಸರನ್ನು ಸಂಪರ್ಕಿಸಿದರು. ಮನೆಗೆ ಭೇಟಿ ನೀಡಿದ ಅಧಿಕಾರಿಗಳಿಗೆ ಯಾವುದೇ ಕುರುಹು ಪತ್ತೆಯಾಗಿಲ್ಲ, ಬಳಿಕ ತನಿಖೆ ಮುಂದುವರೆಸಿದರು.

ಮರುದಿನ ನವೆಂಬರ್ 14 ರಂದು ಇಲ್ಫೋರ್ಡ್ನಲ್ಲಿ ಆಕೆಯ ಶವ ಪತ್ತೆಯಾಗಿದೆ. ಅಷ್ಟೊತ್ತಿಗಾಗಲೇ ಪಂಕಜ್ ಅಧಿಕಾರಿಗಳ ಕಣ್ತಪ್ಪಿಸಿ ನಾಪತ್ತೆಯಾಗಿದ್ದ. ತನಿಖೆಯಿಂದ ಆಕೆ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು ಎಂಬುದು ತಿಳಿದುಬಂದಿದೆ. ಈ ಸಂಬಂಧ ಸೆಪ್ಟೆಂಬರ್‌ನಲ್ಲಿ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಪಂಕಜ್ ಅವರನ್ನು ಮದುವೆಯಾದ ನಂತರ ಅವರು ಏಪ್ರಿಲ್ 2023 ರಲ್ಲಿ ಯುಕೆಗೆ ಹೋಗಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ