ಮುನಿಸಿಕೊಂಡ ಪತ್ನಿಯೊಂದಿಗೆ ರಾಜಿ ಮಾಡಿಕೊಳ್ಳಲು ಪತಿ ಮಾಡಿದ್ದೇನು?

ಚೀನಾದ ವ್ಯಕ್ತಿಯು ಮುನಿಸಿಕೊಂಡ ಪತ್ನಿಯೊಂದಿಗೆ ರಾಜಿ ಮಾಡಿಕೊಳ್ಳುವ ಸಲುವಾಗಿ ಅಪಾಯಕಾರಿ ಸವಾಲೊಂದನ್ನು ಸ್ವೀಕರಿಸಿದ್ದರು. 40 ವರ್ಷದ ಈ ವ್ಯಕ್ತಿ ಝೌ 100 ದಿನಗಳಲ್ಲಿ ಸರಿಸುಮಾರು 4,400 ಕಿ.ಮೀ ದೂರ ಸೈಕಲ್​ನಲ್ಲೇ ಕ್ರಮಿಸಿದ್ದರು. ಹಾಗಾದರೆ ಈ ಘಟನೆ ಹಿನ್ನೆಲೆ ಏನು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಮುನಿಸಿಕೊಂಡ ಪತ್ನಿಯೊಂದಿಗೆ ರಾಜಿ ಮಾಡಿಕೊಳ್ಳಲು ಪತಿ ಮಾಡಿದ್ದೇನು?
ಸೈಕಲ್ Image Credit source: Dialogue Pakistan
Follow us
ನಯನಾ ರಾಜೀವ್
|

Updated on: Nov 20, 2024 | 11:55 AM

ಚೀನಾದ ವ್ಯಕ್ತಿಯು ಮುನಿಸಿಕೊಂಡ ಪತ್ನಿಯೊಂದಿಗೆ ರಾಜಿ ಮಾಡಿಕೊಳ್ಳುವ ಸಲುವಾಗಿ ಅಪಾಯಕಾರಿ ಸವಾಲೊಂದನ್ನು ಸ್ವೀಕರಿಸಿದ್ದರು. 40 ವರ್ಷದ ಈ ವ್ಯಕ್ತಿ ಝೌ 100 ದಿನಗಳಲ್ಲಿ ಸರಿಸುಮಾರು 4,400 ಕಿ.ಮೀ ದೂರ ಸೈಕಲ್​ನಲ್ಲೇ ಕ್ರಮಿಸಿದ್ದರು. ಹಾಗಾದರೆ ಈ ಘಟನೆ ಹಿನ್ನೆಲೆ ಏನು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್​ ಪ್ರಕಾರ, ಚೀನಾದ ಜಿಯಾಂಗ್ಸು ಪ್ರಾಂತ್ಯದ ಲಿಯಾನ್ಯುಂಗಾಂಗ್​ನಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಶಾಂಘೈನಲ್ಲಿ ಯುವತಿಯೊಬ್ಬಳನ್ನು ಭೇಟಿಯಾಗಿ 2007ರಲ್ಲಿ ಮದುವೆಯಾಗುತ್ತಾರೆ. 2013ರಲ್ಲಿ ವಿಚ್ಛೇದನ ಪಡೆಯುತ್ತಾರೆ. ವಿಚ್ಛೇದನ ಬಳಿಕ ರಾಜಿ ಮಾಡಿಕೊಂಡು ಮತ್ತೆ ಮದುವೆಯಾಗಿದ್ದರು. ನಂತರ ಓರ್ವ ಮಗ, ಮಗಳು ಜನಿಸಿದರು. ಕೆಲವು ದಿನಗಳ ನಂತರ ಮತ್ತೆ ಜಗಳ ಶುರುವಾಗಿತ್ತು. ಮತ್ತೆ ಇಬ್ಬರು ಬೇರ್ಪಟ್ಟರು.

ನಮ್ಮ ನದುವೆ ಯಾವುದೇ ಗಂಭೀರ ಸಮಸ್ಯೆಯಿಲ್ಲ ಇಬ್ಬರೂ ಹಠಮಾರಿಗಳು, ಈ ನಮ್ಮ ಗುಣವೇ ನಾವು ದೂರವಾಗುವುದಕ್ಕೆ ಕಾರಣ ಎಂದು ವ್ಯಕ್ತಿ ಹೇಳಿದ್ದಾರೆ. ಬ್ರೇಕಪ್ ಆದ ಬಳಿಕವೂ ಅವರಿಬ್ಬರು ಸಂಪರ್ಕದಲ್ಲಿದ್ದರು. ಒಂದೊಮ್ಮೆ ನಾನು ಮರಳಿ ಬರಬೇಕೆಂದರೆ ನೀವು ಲಾಸಾಗೆ ಸೈಕಲ್​ನಲ್ಲಿ ತೆರಳಬೇಕು ಎಂದು ಪತ್ನಿ ಸವಾಲು ಹಾಕಿದ್ದಳು.

ಮತ್ತಷ್ಟು ಓದಿ: Viral: ಕುಡಿದು ವಾಹನ ಚಲಾಯಿಸುವವರನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿಯಲು ಪೊಲೀಸರ ವಿಶೇಷ ತಂತ್ರ

ಹಾಗಾಗಿ 100 ದಿನಗಳ ಕಾಲ 4,400 ಕಿ.ಮೀ ದೂರ ಸೈಕಲ್​ನಲ್ಲಿ ಕ್ರಮಿಸಿದ್ದಾರೆ. ಅಕ್ಟೋಬರ್ 28ರಂದು ಲಾಸಾ ತಲುಪಿದ್ದರು. ಅಲ್ಲಿ ವಿಪರೀತ ಸೆಕೆ ಇದ್ದ ಕಾರಣ ಎರಡು ಬಾರಿ ಹೀಟ್​ಸ್ಟ್ರೋಕ್ ಆಗಿತ್ತು, ಕುಸಿದು ಬಿದ್ದಿದ್ದರು ಅವರ ಬಳಿ ನೀರು ಕೂಡ ಇರಲಿಲ್ಲ. ನೂರಾರು ಕಿ.ಮೀ ಹೋದ ಬಳಿಕ ಪತ್ನಿಯೇ ತನ್ನನ್ನು ನೋಡಿಕೊಳ್ಳಲು ಬಂದಿದ್ದಾಗಿ ಖುಷಿಯಿಂದ ಹೇಳಿದ್ದಾರೆ.

ನಿನ್ನ ಆರೋಗ್ಯಕ್ಕಿಂತ ಸವಾಲು ಮುಖ್ಯವಲ್ಲ ಇದನ್ನು ಇಲ್ಲಿಯೇ ಬಿಟ್ಟುಬಿಡುವಂತೆ ಕೇಳಿಕೊಂಡಿದ್ದಳು. ಆದರೆ ಝೌ ಒಪ್ಪಿರಲಿಲ್ಲ. ಸೈಕ್ಲಿಂಗ್ ಮುಂದುವರೆಸಿದರು. ಬಳಿಕ ಅಕ್ಟೋಬರ್ 28ರಂದು ಝೌ ಲಾಸಾಗೆ ತೆರಳಿದ ಬಳಿಕ ಮತ್ತೆ ಅವರಿಬ್ಬರು ಒಂದಾದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ