ಅಫ್ಘಾನಿಸ್ತಾನದ ಮದರಸಾದಲ್ಲಿ ಬಾಂಬ್ ಸ್ಫೋಟ; 15 ಸಾವು, 27 ಮಂದಿಗೆ ಗಾಯ

| Updated By: ರಶ್ಮಿ ಕಲ್ಲಕಟ್ಟ

Updated on: Nov 30, 2022 | 6:38 PM

ಉತ್ತರ ಸಮಂಗನ್ ಪ್ರಾಂತ್ಯದ ರಾಜಧಾನಿ ಅಯ್ಬಕ್‌ನಲ್ಲಿರುವ ಮದರಸಾದಲ್ಲಿ ನಡೆದ ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಾಕೋರ್ ಹೇಳಿದ್ದಾರೆ.

ಅಫ್ಘಾನಿಸ್ತಾನದ ಮದರಸಾದಲ್ಲಿ ಬಾಂಬ್ ಸ್ಫೋಟ; 15 ಸಾವು, 27 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ
Follow us on

ಅಫ್ಘಾನಿಸ್ತಾನದ (Afghanistan) ಅಯ್ಬಕ್  (Aybak)ನಗರದ ಜಹ್ದಿಯಾ ಮದರಸಾದಲ್ಲಿ ಬುಧವಾರ (ನವೆಂಬರ್ 30) ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದು 27 ಮಂದಿ ಗಾಯಗೊಂಡಿದ್ದಾರೆ. ಮಧ್ಯಾಹ್ನದ ಪ್ರಾರ್ಥನೆಯ ವೇಳೆ ಈ ಸ್ಫೋಟ ಸಂಭವಿಸಿದೆ ಎಂದು ಪ್ರಾಂತೀಯ ಆಸ್ಪತ್ರೆ ವೈದ್ಯರನ್ನು ಉಲ್ಲೇಖಿಸಿ ಅಫ್ಘಾನಿಸ್ತಾನದ TOLO ಸುದ್ದಿ ವರದಿ ಮಾಡಿದೆ.  ಉತ್ತರ ಸಮಂಗಮ್ ಪ್ರಾಂತ್ಯದ ರಾಜಧಾನಿ ಅಯ್ಬಕ್‌ನಲ್ಲಿರುವ ಧಾರ್ಮಿಕ ಶಾಲೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಅಫ್ಘಾನಿಸ್ತಾನದ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಾಕೋರ್ ಹೇಳಿದ್ದಾರೆ. ಪ್ರಬಲ ಸ್ಫೋಟದ ಹೊಣೆಯನ್ನು ಇದುವರೆಗೆ ಯಾವುದೇ ಗುಂಪು ಹೊತ್ತುಕೊಂಡಿಲ್ಲ. ಇಸ್ಲಾಮಿಕ್ ಸ್ಟೇಟ್ ಗುಂಪಿನ ಆಫ್ಘನ್ ಅಂಗಸಂಸ್ಥೆಯು ಆಗಸ್ಟ್ 2021 ರಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡಾಗಿನಿಂದ ಹಿಂಸಾಚಾರ ನಡೆದಿದೆ. ಇಸ್ಲಾಮಿಕ್ ಸ್ಟೇಟ್ (IS) ನಿರ್ದಿಷ್ಟವಾಗಿ ಅಫ್ಘಾನಿಸ್ತಾನದ ಶಿಯಾ ಮುಸ್ಲಿಂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿಗಳನ್ನು ನಡೆಸಿದ್ದು ಸುನ್ನಿ ಮಸೀದಿಗಳು ಮತ್ತು ಮದರಸಾಗಳನ್ನು ಗುರಿಯಾಗಿರಿಸಿಕೊಂಡಿದೆ. ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಗುಂಪು ಎರಡೂ ಕಠಿಣವಾದ ಸಿದ್ಧಾಂತಕ್ಕೆ ಬದ್ಧವಾಗಿದ್ದರೂ ಪರಸ್ಪರ ಪ್ರತಿಸ್ಪರ್ಧಿಗಳಾಗಿವೆ.

ರಾಜಧಾನಿ ಕಾಬೂಲ್‌ನ ಉತ್ತರಕ್ಕೆ ಸುಮಾರು 200 ಕಿಲೋಮೀಟರ್ (130 ಮೈಲುಗಳು) ದೂರದಲ್ಲಿರುವ ಅಯ್ಬಕ್‌ನಲ್ಲಿರುವ ವೈದ್ಯರು, ಸಾವಿಗೀಡಾದವರು ಹೆಚ್ಚಾಗಿ ಯುವಕರು ಎಂದಿದ್ದಾರೆ. ಅವರೆಲ್ಲರೂ ಮಕ್ಕಳು ಮತ್ತು ಸಾಮಾನ್ಯ ಜನರು ಅವರು ಹೇಳಿರುವುದಾಗಿ ಎಎಫ್ ಪಿ ವರದಿ ಮಾಡಿದೆ.

Published On - 5:37 pm, Wed, 30 November 22