Shocking News: ಹೆತ್ತವರ ಮುಂದೆಯೇ 8 ವರ್ಷದ ಬಾಲಕನನ್ನು ಎಳೆದುಕೊಂಡು ಹೋಗಿ ಕೊಂದ ಮೊಸಳೆ
ಅಪ್ಪ-ಅಮ್ಮನ ಜೊತೆ ನದಿಯ ದಡದಲ್ಲಿ ಆಟವಾಡುತ್ತಿದ್ದ ಬಾಲಕನ ತಲೆಗೆ ಬಾಯಿ ಹಾಕಿದ ಮೊಸಳೆ ಆತನನ್ನು ಆತನ ಹೆತ್ತವರ ಮುಂದೆಯೇ ಎಳೆದುಕೊಂಡು ಹೋಗಿದೆ.
ನವದೆಹಲಿ: ತಾವು ಹೆತ್ತ ಮಗುವಿನ ಸಾವನ್ನು ತಮ್ಮ ಕಣ್ಣಮುಂದೆಯೇ ನೋಡುವುದು ಬಹಳ ನೋವಿನ ಸಂಗತಿ. ನದಿಯ ಪಕ್ಕದಲ್ಲಿ ವೀಕೆಂಡ್ (Weekend) ಸಮಯವನ್ನು ಕಳೆಯಲು ಹೋಗಿದ್ದ ಕುಟುಂಬಕ್ಕೆ ಜೀವನಪೂರ್ತಿ ಮರೆಯಲಾಗದ ದುಃಖ ಎದುರಾಗಿದೆ. ಕೋಸ್ಟಾ ರಿಕಾದಲ್ಲಿ (Costa Rica) ನದಿಯ ಪಕ್ಕದಲ್ಲಿ ಅಪ್ಪ-ಅಮ್ಮನ ಜೊತೆ ಆಟವಾಡುತ್ತಿದ್ದ 8 ವರ್ಷದ ಬಾಲಕನನ್ನು ಮೊಸಳೆಯೊಂದು (Crocodile) ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ. ಆ ಬಾಲಕನ ಮೃತದೇಹ ಅಥವಾ ದೇಹದ ಅವಶೇಷಗಳು ಇನ್ನೂ ಪತ್ತೆಯಾಗಿಲ್ಲ. ಆತನನ್ನು ನೀರಿನೊಳಗೆ ಎಳೆದುಕೊಂಡು ಹೋದ ಮೊಸಳೆ ಮತ್ತೆ ಹೊರಗೆ ಬಂದಿಲ್ಲ.
ಅಪ್ಪ-ಅಮ್ಮನ ಜೊತೆ ನದಿಯ ದಡದಲ್ಲಿ ಆಟವಾಡುತ್ತಿದ್ದ ಬಾಲಕನ ತಲೆಗೆ ಬಾಯಿ ಹಾಕಿದ ಮೊಸಳೆ ಆತನನ್ನು ಆತನ ಹೆತ್ತವರ ಮುಂದೆಯೇ ಎಳೆದುಕೊಂಡು ಹೋಗಿದೆ. ಜೂಲಿಯೊ ಒಟೆರೊ ಫೆರ್ನಾಂಡಿಸ್ ಎಂಬ 8 ವರ್ಷದ ಬಾಲಕ ತನ್ನ ಮನೆಯ ಸಮೀಪವಿರುವ ಮರೀನಾ ನದಿಗೆ ಭೇಟಿ ನೀಡಿದ್ದ. ತನ್ನ ಅಪ್ಪ, ಅಮ್ಮ, ನಾಲ್ವರು ಅಣ್ಣ-ತಮ್ಮಂದಿರ ಜೊತೆ ಹೋಗಿದ್ದ ಆತ ಎಲ್ಲರೊಂದಿಗೆ ಆಟವಾಡುತ್ತಿದ್ದಾಗ ಮೊಸಳೆ ದಾಳಿ ನಡೆಸಿದೆ.
ಇದನ್ನೂ ಓದಿ: ಕಾರವಾರ: ಜನರ ಎಚ್ಚರಿಕೆ ಕಡೆಗಣಿಸಿ ಈಜಲು ಕಾಳಿ ನದಿಗಿಳಿದವನನ್ನು ನರಭಕ್ಷಕ ಮೊಸಳೆ ನೀರಿನಾಳಕ್ಕೆ ಎಳೆದೊಯ್ಯಿತು!
ಆಟವಾಡುತ್ತಿದ್ದಾಗ ನದಿಗೆ ಇಳಿದ ಆತ ಮೊಣಕಾಲು ಆಳದ ನೀರಿನಲ್ಲಿ ನಿಂತಿದ್ದಾಗ ಮಧ್ಯಾಹ್ನ 2 ಗಂಟೆಯ ವೇಳೆಗೆ ಬೃಹತ್ ಮೊಸಳೆ ಅವನತ್ತ ನುಗ್ಗಿತು. ಆ ಮೊಸಳೆ ಅವನನ್ನು ನದಿಯ ಆಳಕ್ಕೆ ಎಳೆದುಕೊಂಡು ಹೋಗುವ ಮೊದಲು ಅವನ ತಲೆಯನ್ನು ಕಚ್ಚಿ, ತುಂಡು ಮಾಡಿರುವುದನ್ನು ಕುಟುಂಬಸ್ಥರು ನೋಡಿದ್ದಾರೆ. ಆಮೇಲೆ ಏನಾಯಿತೆಂದು ಯಾರಿಗೂ ಸುಳಿವು ಸಿಕ್ಕಿಲ್ಲ.