ಪಾಕಿಸ್ತಾನದಲ್ಲಿ ನೆಲ ಬಾಂಬ್ ಸ್ಫೋಟ, 7 ಮಂದಿ ಸಾವು

|

Updated on: Aug 08, 2023 | 7:29 AM

Pakistan Bomb Blast: ಪಾಕಿಸ್ತಾನದಲ್ಲಿ ನೆಲ ಬಾಂಬ್ ಸ್ಪೋಟಗೊಂಡಿದ್ದು 7 ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಬಲೂಚಿಸ್ತಾನದ ಪಂಜ್ಗರ್​​ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಪಾಕಿಸ್ತಾನದಲ್ಲಿ ನೆಲ ಬಾಂಬ್ ಸ್ಫೋಟ, 7 ಮಂದಿ ಸಾವು
ಆಂಬ್ಯುಲೆನ್ಸ್​- ಸಾಂದರ್ಭಿಕ ಚಿತ್ರ
Image Credit source: Tribune.com
Follow us on

ಪಾಕಿಸ್ತಾನದಲ್ಲಿ ನೆಲ ಬಾಂಬ್ ಸ್ಪೋಟ(Bomb Blast) ಗೊಂಡಿದ್ದು 7 ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಬಲೂಚಿಸ್ತಾನದ ಪಂಜ್ಗರ್​​ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಲ್ಗತಾರ್​ ಯೂನಿಯನ್ ಕೌನ್ಸಿಲ್​ ಮುಖ್ಯಸ್ಥ ಸೇರಿ 7 ಜನ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಯೂನಿಯನ್​​ ಕೌನ್ಸಿಲ್​ ಮುಖ್ಯಸ್ಥ ಇಸ್ತಿಕ್​​ ಯಾಕೂಬ್ ಕುಟುಂಬ ಸದಸ್ಯರು, ಭದ್ರತಾ ಸಿಬ್ಬಂದಿ ಸೇರಿ 7 ಜನ ಸಾವು

ಮದುವೆ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಯಾಕೂಬ್ ಗುರಿಯಾಗಿಸಿಕೊಂಡು ನೆಲಬಾಂಬ್ ಸ್ಫೋಟಿಸಿರುವ ಶಂಕೆ ವ್ಯಕ್ತವಾಗಿದೆ.

ಹತ್ಯೆಗೀಡಾದ ರಾಜಕಾರಣಿ ಇಶಾಕ್ ಯಾಕೂಬ್ ಬಲೂಚಿಸ್ತಾನದ ಅವಾಮಿ ಪಕ್ಷದವರಾಗಿದ್ದು ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದು ಸ್ಪಷ್ಟವಾಗಿಲ್ಲ.

ಮತ್ತಷ್ಟು ಓದಿ: ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಆಟೋ ಚಾಲಕ ಪುರಷೋತ್ತಮ ಮನೆ ನವೀಕರಿಸಿ ಯುಗಾದಿ ಗಿಫ್ಟ್​​ ನೀಡಿದ ಟ್ರಸ್ಟ್

ಪಾಕಿಸ್ತಾನದ ತಾಲಿಬಾನ್​ನ ಹಿಂದಿನ ಭದ್ರಕೋಟೆಯಲ್ಲಿ ಆತ್ಮಹತ್ಯಾ ಬಾಂಬರ್ ತನ್ನ ಸ್ಫೋಟಗಳನ್ನು ತುಂಬಿದ ವಾಹನವನ್ನು ಸ್ಫೋಟಿಸಿದ ಕೆಲವೇ ಗಂಟೆಗಳ ನಂತರ ಬಲೂಚಿಸ್ತಾನದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ವಾಯುವ್ಯ ಗಡಿಯಲ್ಲಿ ಸ್ಪೋಟ ಸಂಭವಿಸಿತ್ತು.

 

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ