ಅತಿಯಾಗಿ ಕುಡ್ದಿದ್ದೀರಾ ಹಾಗಾದ್ರೆ ಟೆನ್ಷನ್ ಬೇಡ, ಸರ್ಕಾರವೇ ಟ್ಯಾಕ್ಸಿಯಲ್ಲಿ ನಿಮ್ಮನ್ನು ಮನೆಗೆ ಬಿಡುತ್ತೆ
ವಿಪರೀತ ಕುಡಿದಿದ್ದರೆ ನಿಮಗೆ ವಾಹನ ಚಲಾಯಿಸಲು ಸಾಧ್ಯವಾಗದಿದ್ದರೆ ಚಿಂತೆ ಬೇಡ ಸರ್ಕಾರವೇ ನಿಮ್ಮನ್ನು ಟ್ಯಾಕ್ಸಿ ಮೂಲಕ ಮನೆಗೆ ಕಳುಹಿಸಲಿದೆ. ಹೌದು ಈ ಯೋಜನೆ ಜಾರಿಗೆ ತಂದಿರುವುದು ಭಾರತ ಸರ್ಕಾರವಲ್ಲ ಬದಲಾಗಿ ಇಟಲಿ ಸರ್ಕಾರ.
ವಿಪರೀತ ಕುಡಿದಿದ್ದರೆ ನಿಮಗೆ ವಾಹನ ಚಲಾಯಿಸಲು ಸಾಧ್ಯವಾಗದಿದ್ದರೆ ಚಿಂತೆ ಬೇಡ ಸರ್ಕಾರವೇ ನಿಮ್ಮನ್ನು ಟ್ಯಾಕ್ಸಿ ಮೂಲಕ ಮನೆಗೆ ಕಳುಹಿಸಲಿದೆ. ಹೌದು ಈ ಯೋಜನೆ ಜಾರಿಗೆ ತಂದಿರುವುದು ಭಾರತ ಸರ್ಕಾರವಲ್ಲ ಬದಲಾಗಿ ಇಟಲಿ ಸರ್ಕಾರ. ಜನರು ಹೆಚ್ಚು ಕುಡೀಲಿ ಎನ್ನುವ ಉದ್ದೇಶವಲ್ಲ ಆದರೆ ಕುಡಿದವರು ವಾಹನ ಚಾಲನೆ ಮಾಡಿ ಅಪಘಾತ ಸಂಭವಿಸಬಾರದು ಎನ್ನುವ ಉದ್ದೇಶದಿಂದ ಪೈಲಟ್ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ.
ನೀವೆಲ್ಲೋ ಪಾರ್ಟಿಗೆ ಹೋಗಿರುತ್ತೀರಿ ವಾಪಸ್ ಮನೆಗೆ ಕಾರು ಚಲಾಯಿಸಿಕೊಂಡು ಬರುವುದು ಕಷ್ಟ ಎನಿಸಿದಲ್ಲಿ ಈ ಟ್ಯಾಕ್ಸಿ ಸಹಾಯ ಪಡೆಯಬಹುದು. ದೇಶದ 6 ನೈಟ್‌ಕ್ಲಬ್‌ಗಳಲ್ಲಿ ಸೆಪ್ಟೆಂಬರ್ ಮಧ್ಯದ ಒಳಗೆ ಪ್ರಾಯೋಗಿಕ ಯೋಜನೆ ಜಾರಿಯಾಗಲಿದೆ.
ಪಾರ್ಟಿ ಸ್ಥಳದಿಂದ ಹೊರಡುವಾಗ ಹೆಚ್ಚು ಕುಡಿದು ವಾಹನ ಚಲಾಯಿಸುವುದನ್ನು ಕಂಡರೆ, ಅವರನ್ನು ಮದ್ಯಪಾನ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮಿತಿ ಮೀರಿ ಮದ್ಯಪಾನ ಮಾಡಿದವರಿಗೆ ಟ್ಯಾಕ್ಸಿ ವ್ಯವಸ್ಥೆ ಮಾಡಲಾಗುತ್ತದೆ. ಈ ಯೋಜನೆಗೆ ಸಾರಿಗೆ ಸಚಿವಾಲಯ ಹಣ ನೀಡುತ್ತಿದೆ.
ರಸ್ತೆ ಅಪಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಪಘಾತವನ್ನು ತಡೆಯಲು ದಂಡ ಹಾಗೂ ಕಾನೂನು ಸಾಕಾಗುವುದಿಲ್ಲ. ಯುರೋಪಿಯನ್ ಟ್ರಾನ್ಸ್‌ಪೋರ್ಟ್ ಸೇಫ್ಟಿ ಕೌನ್ಸಿಲ್ (ಇಟಿಎಸ್‌ಸಿ) 2020 ರ ವರದಿಯ ಪ್ರಕಾರ, ಇಟಲಿಯಲ್ಲಿ ಕುಡಿದು ವಾಹನ ಚಾಲನೆ ಮಾಡುವುದು ಗಂಭೀರ ಸಮಸ್ಯೆಯಾಗಿದೆ.
ಅದೇ ಸಮಯದಲ್ಲಿ, ಇಟಲಿಯಲ್ಲಿ ಮದ್ಯಪಾನ ಮತ್ತು ಚಾಲನೆಯ ಸ್ವೀಕಾರಾರ್ಹತೆಯ ಮಟ್ಟವು ಇತರ EU ದೇಶಗಳಿಗಿಂತ ಹೆಚ್ಚಾಗಿದೆ ಎಂದು ಸಮೀಕ್ಷೆಯು ತೋರಿಸಿದೆ.
ಮತ್ತಷ್ಟು ಓದಿ: Lifestyle Hack: ಮದ್ಯಪಾನ ಮಾಡುವಾಗ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ, ಯಾಕೆ ಗೊತ್ತಾ?
ಈ ಯೋಜನೆ ಅನುಷ್ಠಾನವಾದ ಮೊದಲ ದಿನ ರಾತ್ರಿ 21 ಮಂದಿಯನ್ನು ಟ್ಯಾಕ್ಸಿಯಲ್ಲಿ ಕರೆದೊಯ್ಯಲಾಯಿತು. ಸಮಸ್ಯೆಗಳನ್ನು ಸ್ವಲ್ಪ ಸಮಯಗಳ ಕಾಲ ಮರೆಯಬಹುದು ಎಂದು ಕೆಲವರು ಖುಷಿಯನ್ನು ಎಂಜಾಯ್ ಮಾಡಲು ಬಯಸುತ್ತಾರೆ, ಆದರೆ ಅವರ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಯೋಚನೆಯೇ ಇರುವುದಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ