ನಾನು ಓರ್ವ ಹಿಂದೂವಾಗಿ ಇಲ್ಲಿಗೆ ಬಂದಿದ್ದೇನೆ, ಪ್ರಧಾನಿಯಾಗಿ ಅಲ್ಲ, ರಾಮಕಥೆಯಲ್ಲಿ ಪಾಲ್ಗೊಂಡ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮಾತು

ನಾನು ಪ್ರಧಾನಿಯಾಗಿ ಅಲ್ಲ, ಓರ್ವ ಹಿಂದೂ ಆಗಿ ಬಂದಿದ್ದೇನೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದ ಜೀಸಸ್ ಕಾಲೇಜಿನಲ್ಲಿ ನಡೆದ ರಾಮಕಥಾ ಕಾರ್ಯಕ್ರಮಕ್ಕೆ ಭೇಟಿ ನೀಡಿದ ರಿಷಿ ಸುನಕ್, ನಾನು ಇಂದು ಬ್ರಿಟನ್ ಪ್ರಧಾನಿಯಾಗಿ ಬಂದಿಲ್ಲ ಓರ್ವ ಹಿಂದೂವಾಗಿ ಬಂದಿದ್ದೇನೆ ಎಂದರು

ನಾನು ಓರ್ವ ಹಿಂದೂವಾಗಿ ಇಲ್ಲಿಗೆ ಬಂದಿದ್ದೇನೆ, ಪ್ರಧಾನಿಯಾಗಿ ಅಲ್ಲ, ರಾಮಕಥೆಯಲ್ಲಿ ಪಾಲ್ಗೊಂಡ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮಾತು
ರಿಷಿ ಸುನಕ್
Follow us
ನಯನಾ ರಾಜೀವ್
|

Updated on: Aug 16, 2023 | 1:05 PM

‘ನಾನು ಪ್ರಧಾನಿಯಾಗಿ ಅಲ್ಲ, ಓರ್ವ ಹಿಂದೂ ಆಗಿ ಬಂದಿದ್ದೇನೆ’ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak)  ಹೇಳಿದ್ದಾರೆ. ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದ ಜೀಸಸ್ ಕಾಲೇಜಿನಲ್ಲಿ ನಡೆದ ರಾಮಕಥಾ ಕಾರ್ಯಕ್ರಮಕ್ಕೆ ಭೇಟಿ ನೀಡಿದ ರಿಷಿ ಸುನಕ್, ನಾನು ಇಂದು ಬ್ರಿಟನ್ ಪ್ರಧಾನಿಯಾಗಿ ಬಂದಿಲ್ಲ ಓರ್ವ ಹಿಂದೂವಾಗಿ ಬಂದಿದ್ದೇನೆ ಎಂದರು. ಭಾರತದ ಸ್ವಾತಂತ್ರ್ಯ ದಿನಾಚರಣೆಯಂದೇ ರಾಮಕಥಾ ಕಾರ್ಯಕ್ರಮ ನಡೆಯಿತು. ನನ್ನ ನಂಬಿಕೆ ವೈಯಕ್ತಿಕವಾದದ್ದು, ಪ್ರಧಾನಿಯಾಗಿರುವುದು ದೊಡ್ಡ ಗೌರವವಾದರೂ ಈ ಹುದ್ದೆಯನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಕಠಿಣ ಆಯ್ಕೆಗಳನ್ನು ಮಾಡಬೇಕು, ಜನರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು.

ನನ್ನ ಧರ್ಮವು ನನಗೆ ಈ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ನೀಡುತ್ತದೆ, ಯಾವುದೇ ಕೆಲಸವನ್ನು ಮಾಡುವ ಮೊದಲು ಸಮಸ್ಯೆಗಳನ್ನು ಆಲಿಸಿ, ಸಮಾಧಾನದಿಂದ ನಿರ್ಧಾರ ತೆಗೆದುಕೊಳ್ಳುವಂತೆ ನನ್ನ ಧರ್ಮವು ಹೇಳುತ್ತದೆ.

ನನ್ನ ಕಚೇರಿಯ ಮೇಜಿನ ಮೇಲೆ ಗಣೇಶ ಮೂರ್ತಿ ಇದೆ

ಮೊರಾರಿ ಬಾಪು ಅವರ ಆಸನದ ಹಿಂದೆ ಹನುಮಂತನ ವಿಗ್ರಹವನ್ನು ಹೇಗೆ ಇರಿಸಲಾಗಿದೆಯೋ ಅದೇ ರೀತಿ ಗಣೇಶನ ವಿಗ್ರಹವನ್ನು 10 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ನನ್ನ ಕಚೇರಿಯ ಮೇಜಿನ ಮೇಲೆ ಇರಿಸಲಾಗಿದೆ ಎಂದು ಬ್ರಿಟನ್ ಪ್ರಧಾನಿ ಸುನಕ್ ಹೇಳಿದ್ದಾರೆ.

ಮತ್ತಷ್ಟು ಓದಿ:ಯುಕೆ ಪ್ರಧಾನಿ ರಿಷಿ ಸುನಕ್ ಯಾರು?, ಭಾರತದೊಂದಿಗೆ ಅವರಿಗಿರುವ ಸಂಬಂಧ ಏನು?

ಸುನಕ್ ಅವರು ಬ್ರಿಟಿಷ್ ಚಾನ್ಸೆಲರ್ ಆಗಿದ್ದಾಗ (2020) ದೀಪಾವಳಿಯ ದಿನದಂದು ಅಧಿಕೃತ ನಿವಾಸವಾದ 11 ಡೌನಿಂಗ್ ಸ್ಟ್ರೀಟ್‌ನಲ್ಲಿ ಮೊದಲ ಬಾರಿಗೆ ದೀಪವನ್ನು ಬೆಳಗಿಸಿದ್ದೆ. ಪ್ರತಿಯೊಂದು ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತೇನೆ ಎಂದು ಬ್ರಿಟನ್ ಪ್ರಧಾನಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ, ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ, ಜನ್ಮಾಷ್ಟಮಿ ಆಚರಿಸಲು ನಾನು ನನ್ನ ಹೆಂಡತಿಯೊಂದಿಗೆ ಭಕ್ತಿ ವೇದಾಂತ ಮ್ಯಾನರ್ ದೇವಸ್ಥಾನಕ್ಕೆ ಹೋಗಿದ್ದೆವು ಎಂದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ