Rishi Sunak: ಬ್ರಿಟನ್ ಪ್ರಧಾನಿ ರಿಷಿ ಸುನಕ್ ನಿವಾಸದ ಗೇಟ್‌ಗೆ ಡಿಕ್ಕಿ ಹೊಡೆದ ಕಾರು, ಚಾಲಕ ಅರೆಸ್ಟ್
ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak)ಅವರ ನಿವಾಸ ಡೌನಿಂಗ್ ಸ್ಟ್ರೀಟ್ ಗೇಟ್‌ಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak)ಅವರ ನಿವಾಸ ಡೌನಿಂಗ್ ಸ್ಟ್ರೀಟ್ ಗೇಟ್‌ಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸಂಜೆ 4.30ರ ಸುಮಾರಿಗೆ ವೈಟ್ಹಾಲ್ನಲ್ಲಿರುವ ಡೌನಿಂಗ್ ಸ್ಟ್ರೀಟ್ ಗೇಟ್‌ಗೆ ಕಾರೊಂದು ಡಿಕ್ಕಿ ಹೊಡೆದಿದೆ. ಅಪಘಾತ ಉದ್ದೇಶಪೂರ್ವಕವೋ ಅಥವಾ ಅಪಘಾತವೋ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಘಟನೆಯಲ್ಲಿ ಗಾಯಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಾನಿ ಮತ್ತು ಅಪಾಯಕಾರಿ ಚಾಲನೆಯ ಅನುಮಾನದ ಮೇಲೆ ಸಶಸ್ತ್ರ ಅಧಿಕಾರಿಗಳು ವ್ಯಕ್ತಿಯನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ಬಿಳಿ ಕಾರೊಂದು ವೈಟ್‌ಹಾಲ್ ಬಳಿ ಕಡಿಮೆ ವೇಗದಲ್ಲಿ ಚಲಿಸುತ್ತಿರುವುದು ವೀಡಿಯೊ ದೃಶ್ಯಾವಳಿಗಳಲ್ಲಿ ಕಂಡುಬರುತ್ತದೆ.
ವಿಡಿಯೋದಲ್ಲಿ ಪ್ರಧಾನಿಯವರ ಅಧಿಕೃತ ನಿವಾಸವಾದ ಡೌನಿಂಗ್ ಸ್ಟ್ರೀಟ್‌ನ ಗೇಟ್‌ಗೆ ಕಾರು ಅಪ್ಪಳಿಸುತ್ತಿರುವುದು ಕಂಡುಬಂದಿದೆ. ಈ ಘಟನೆಯ ನಂತರ, ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್ ಮತ್ತು ಫೇಮಸ್ ಟ್ರಾಫಲ್ಗರ್ ಸ್ಕ್ವೇರ್ ನಡುವೆ ಇರುವ ವೈಟ್‌ಹಾಲ್ ಅನ್ನು ಮುತ್ತಿಗೆ ಹಾಕಲಾಯಿತು. ತಕ್ಷಣವೇ ಹಲವು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.
ಮತ್ತಷ್ಟು ಓದಿ: ಯುಕೆ ಪ್ರಧಾನಿ ರಿಷಿ ಸುನಕ್ ಯಾರು?, ಭಾರತದೊಂದಿಗೆ ಅವರಿಗಿರುವ ಸಂಬಂಧ ಏನು?
ಶಸ್ತ್ರಸಜ್ಜಿತ ಅಧಿಕಾರಿಗಳು ಡೌನಿಂಗ್ ಸ್ಟ್ರೀಟ್‌ನ ಅಧಿಕಾರಿಗಳಿಗೆ ಒಳಗೆ ಇರಲು ಹೇಳಿದರು. ಆದರೆ, ಕಾರು ಡೌನಿಂಗ್ ಸ್ಟ್ರೀಟ್ ಗೇಟ್‌ಗೆ ಢಿಕ್ಕಿ ಹೊಡೆದ ಸಮಯದಲ್ಲಿ ಪ್ರಧಾನಿ ಸುನಕ್ ಅವರ ಕಚೇರಿಯಲ್ಲಿದ್ದರೇ ಎಂಬುದು ತಿಳಿದಿಲ್ಲ.
#Breaking Gates at Downing Street Rammed by car! Credit Bigsy from the protest pen! pic.twitter.com/aNAqk1sfJx
— Shillitz (@shillitz) May 25, 2023
ಸಶಸ್ತ್ರ ಪಡೆಗಳು ಯಾವಾಗಲೂ ಈ ದ್ವಾರದಲ್ಲಿ ನೆಲೆಸಿರುತ್ತವೆ. ಅಲ್ಲಿ ಬರುವ ಕಾರುಗಳ ತಪಾಸಣೆ ನಡೆಸಲಾಗುತ್ತದೆ, ಇದು ಡೌನಿಂಗ್ ಸ್ಟ್ರೀಟ್ ಪಾರ್ಲಿಮೆಂಟ್ ಹೌಸ್ನಿಂದ ಸ್ವಲ್ಪವೇ ದೂರದಲ್ಲಿದೆ.
ಇಲ್ಲಿ ಯಾವಾಗಲೂ ಹೆಚ್ಚಿನ ಭದ್ರತೆ ಇರುತ್ತದೆ. 1989 ರಲ್ಲಿ ಡೌನಿಂಗ್ ಸ್ಟ್ರೀಟ್‌ನ ಗೇಟ್‌ಗಳ ಹೊರಗೆ IRA ಬಾಂಬ್ ಸ್ಫೋಟ ಸಂಭವಿಸಿತ್ತು ಹೀಗಾಗಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ