ಲಂಡನ್: ಸುಮಾರು 13 ವರ್ಷಗಳ 15 ವರ್ಷ ಬಾಲಕನ ಮೇಲೆ ಮನೆಯೊಂದರಲ್ಲಿ ಲೈಂಗಿಕ ಶೋಷಣೆ ನಡೆಸಿದ ಆರೋಪ ಎದುರಿಸುತ್ತಿದ್ದ ಪಾಕಿಸ್ತಾನ ಮೂಲದ ಕನ್ಸರ್ವೇಟಿವ್ ಪಕ್ಷದ (Conservative party) ಉತ್ತರ ಇಂಗ್ಲೆಂಡ್ ಒಬ್ಬ ಸಂಸತ್ ಸದಸ್ಯ (Member of Parliament) ದೋಷಿ ಎಂದು ಸಾಬೀತಾಗಿದೆ. ಲಂಡನ್ನಿನ ಸೌತ್ವಾರ್ಕ್ ಕೋರ್ಟ್ನಲ್ಲಿ ಒಂದು ವಾರದವರೆಗೆ ನಡೆದ ವಿಚಾರಣೆಯ ನಂತರ ಪಶ್ಚಿಮ ಯಾರ್ಕ್ ಶೈರ್ ವೇಕ್ ಫೀಲ್ಡ್ ಸಂಸತ್ ಸದಸ್ಯ ಇಮ್ರಾನ್ ಅಹ್ಮದ ಖಾನ್ (Imran Ahmed Khan) ಅವರನ್ನು ದೋಷಿ ಎಂದು ಕೋರ್ಟ್ ಪರಿಗಣಿಸಿದೆ. 2008 ರಲ್ಲಿ ಪಾರ್ಟಿಯೊಂದು ನಡೆಯುತ್ತಿದ್ದಾಗ ಸಂತ್ರಸ್ತನಿಗೆ ಬಲವಂತವಾಗಿ ಜಿನ್ ಕುಡಿಸಿದ ಇಮ್ರಾನ್ ಬಳಿಕ ಅವನನ್ನು ಮನೆಯ ಮೆಲ್ಮಹಡಿಗೆ ಎಳೆದೊಯ್ದು ಅವನ ಮೇಲೆ ಅಸಹಜ ಲೈಂಗಿಕ ಅತ್ಯಾಚಾರವೆಸಗುವ ಮುನ್ನ ನೀಲಿಚಿತ್ರಗಳನ್ನು ತೋರಿಸಿದ್ದರು ಎಂದು ನ್ಯಾಯಾಲಯಲಕ್ಕೆ ತಿಳಿಸಲಾಗಿತ್ತು.
ತಮ್ಮ ವಿರುದ್ಧ ಮಾಡಿದ ಆರೋಪಗಳನ್ನು ಅಲ್ಲಗಳೆದಿದ್ದ 48-ವರ್ಷ ವಯಸ್ಸಿನ ಇಮ್ರಾನ್ ಅವರನ್ನು ಕನ್ಸರ್ವೇಟಿವ್ ಪಕ್ಷ ಸಸ್ಪೆಂಡ್ ಮಾಡಿದೆ. ಸೋಮವಾರ ತೀರ್ಪು ಹೊರಬೀಳುತ್ತಿದ್ದಂತೆ ಬ್ರಿಟನ್ ಸಂಸತ್ತಿನಲ್ಲಿ ವಿರೋಧ ಪಕ್ಷವಾಗಿರುವ ಲೇಬರ್ ಪಾರ್ಟಿಯು ಇಮ್ರಾನ್ ಕೂಡಲೇ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ.
ಇಮ್ರಾನ್ ಅಹ್ಮದ್ ಖಾನ್ ಕೂಡಲೇ ರಾಜೀನಾಮೆ ಸಲ್ಲಿಸಿದಲ್ಲಿ ಮರು ಚುನಾವಣೆ ನಡೆಯುವುದು ಸಾಧ್ಯವಾಗುತ್ತದೆ ಮತ್ತು ವೇಕ್ ಫೀಲ್ಡ್ ಜನ ಒಬ್ಬ ಯೋಗ್ಯ ಅಭ್ಯರ್ಥಿಯನ್ನು ಆರಿಸಬಹುದು ಎಂದು ಲೇಬರ್ ಪಕ್ಷದ ವಕ್ತಾರೊಬ್ಬರು ಹೇಳಿದ್ದಾರೆ.
ಈಗ 29 ವರ್ಷದವರಾಗಿರುವ ಸಂತ್ರಸ್ತ ಆ ಅಕ್ರಮಣದಿಂದ ತಾನು ಆಘಾತ ಮತ್ತು ಭೀತಿಗೊಳಗಾಗಿದ್ದೆ ಅಂತ ಹೇಳಿದ್ದರು.
2019 ರ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಖಾನ್ ಸ್ಪಧಿಸಿದ್ದಾಗ ಹೆಸರಿಸಲಾಗದ ಈ ಸಂತ್ರಸ್ತ ಲೇಬರ್ ಪಕ್ಷವನ್ನು ಸಂಪರ್ಕಿಸಿದ್ದರು, ಪಕ್ಷ ಯಾವುದೇ ಕ್ರಮ ತೆಗೆದುಕೊಳ್ಳದೆ ಹೋದಾಗ ಮತ್ತು ಖಾನ್ ಸಂಸತ್ತಿಗೆ ಆಯ್ಕೆಯಾದ ಬಳಿಕ ಸಂತ್ರಸ್ತ ಪೊಲೀಸರಿಗೆ ದೂರು ಸಲ್ಲಿಸಿದರು.
ಸಲಿಂಗಿಯಾಗಿರುವ ಖಾನ್ ಸಂತ್ರಸ್ತನ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಅರೋಪವನ್ನು ಅಲ್ಲಗಳೆದಿದ್ದರು ಮತ್ತು ಈ ಹದಿಹರೆಯದ ಕೆಥೋಲಿಕ್ ಹುಡುಗ ತನ್ನ ಲೈಂಗಿಕತೆ ಬಗ್ಗೆ ವಿಪರೀತ ಅನಿಸುವಷ್ಟು ವಿಮುಖನಾದಾಗ ಕೇವಲ ಅವನ ಮೊಣಕೈಯನ್ನು ಮುಟ್ಟಿದ್ದಾಗಿ ಹೇಳಿದ್ದರು.
ಆಗ 34 ವರ್ಷದವನಾಗಿದ್ದ ಖಾನ್, ನೀಲಿ ಚಿತ್ರಗಳ ವಿಷಯ ಚರ್ಚೆಗೆ ಬಂದ ಬಳಿಕ ಉದಾಸೀನನಾಗಿದ್ದ ಹುಡುಗನಿಗೆ ಸಂತೈಸಿ ನೆರವಾಗುವ ಪ್ರಯತ್ನ ಮಾಡಿದಾಗ ಅವನು ಕೋಣೆಯೊಂದನ್ನು ಹೊಕ್ಕು ಬೋಲ್ಟ್ ಹಾಕಿಕೊಂಡ ಎಂದು ಖಾನ್ ಹೇಳಿದ್ದರು.
ಖಾನ್ಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಕೆಲದಿನಗಳ ನಂತರ ಘೋಷಿಸಲಿದೆ.
ಒಂದು ಪಕ್ಷ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದರೆ, ಅವರನ್ನು ಸಂಸತ್ ಸದಸ್ಯನ ಸ್ಥಾನದಿಂದ ಕೂಡಲೇ ಪದಚ್ಯುತಗೊಳಿಸಲಾಗುವುದು ಮತ್ತು ವೇಕ್ ಫೀಲ್ಡ್ನಲ್ಲಿ ಉಪ-ಚುನಾವಣೆ ನಡೆಯುವುದ ಅನಿವಾರ್ಯ ಆಗಿಬಿಡುತ್ತದೆ.
ಶಿಕ್ಷೆಯ ಪ್ರಮಾಣ 12 ತಿಂಗಳುಗಳಿಗಿಂತ ಕಡಿಮೆಯಿದ್ದರೆ, ಮೇಲ್ಮನವಿ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಕ್ಷೇತ್ರದ ಮತದಾರರು ಮರುಸ್ಥಾಪನೆ ವಿಧಾನ ಜಾರಿಗೊಳಿಸಿ ಉಪಚುನಾವಣೆಯನ್ನು ನಡೆಸುವಂತೆ ಆಗ್ರಹಿಸಬಹುದು.
ಇದನ್ನೂ ಓದಿ: Shehbaz Sharif: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅವಿರೋಧ ಆಯ್ಕೆ