ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಕರ್ನಾಟಕದ ತಾಯಿ ಎಂದೇ ಪ್ರಸಿದ್ಧಿಯನ್ನು ಪಡೆದ ಸುಧಾಮೂರ್ತಿ (Sudha murthy) ಅವರು ಏ.5ರಂದು ರಾಷ್ಟ್ರಪತಿ ಭವನದಲ್ಲಿ ಸ್ವೀಕರಿಸಿದರು. ಇದೀಗ ಈ ಬಗ್ಗೆ ಬ್ರಿಟನ್ ಪ್ರಧಾನಿ ಹಾಗೂ ಸುಧಾ ಮೂರ್ತಿಯ ಅವರ ಮಗಳ ಗಂಡ ರಿಷಿ ಸುನಕ್( ಅಳಿಯ) ತಮ್ಮ ಅತ್ತೆಯರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದಕ್ಕೆ ಹರ್ಷ ವ್ಯಕ್ತಪಡಿಸಿದರು. ಬ್ರಿಟನ್ ಪ್ರಧಾನಿ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ರಿಷಿ ಸುನಕ್ ಹೆಮ್ಮೆಯ ದಿನ ಎಂದು ಹೇಳಿದರು. 72 ವರ್ಷದ ಸುಧಾ ಮೂರ್ತಿ ಅವರು ಸಮಾಜ ಸೇವೆಗೆ ನೀಡಿದ ಕೊಡುಗೆಗಾಗಿ ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು. ಕರ್ನಾಟಕದ ಜನಪ್ರಿಯ ಲೇಖಕಿ ಮತ್ತು ಲೋಕೋಪಕಾರಿ ಸುಧಾ ಮೂರ್ತಿ ಅವರು ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪತಿ, ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಕೂಡ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರಪತಿ ಭವನದ ಭವ್ಯ ದರ್ಬಾರ್ ಹಾಲ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರ ಮುಂದಿನ ಸಾಲಿನಲ್ಲಿ ಸುಧಾಮೂರ್ತಿ ಅವರ ಪುತ್ರಿ ಅಕ್ಷತಾ ಇತರ ಗಣ್ಯರೊಂದಿಗೆ ಕುಳಿತಿದ್ದರು. ನಿನ್ನೆ ನನ್ನ ತಾಯಿಯವರು ಸಾಮಾಜಿಕ ಕಾರ್ಯದಲ್ಲಿ ಅವರ ಕೊಡುಗೆಗಳನ್ನು ಗುರುತಿಸಿ, ನವದೆಹಲಿಯಲ್ಲಿ ನಡೆದ ಪದ್ಮ ಪ್ರಶಸ್ತಿ 2023 ಸಮಾರಂಭದಲ್ಲಿ (ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು) ಭಾರತದ ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ನಾನು ಹೆಮ್ಮೆಯಿಂದ ನೋಡಿದೆ ಎಂದು ಅಕ್ಷತಾ ಅವರ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Sudha Murthy: ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರ ವೀಕ್ಷಿಸಿ ಸುಧಾ ಮೂರ್ತಿ ಹೇಳಿದ್ದೇನು? ಇಲ್ಲಿದೆ ನೋಡಿ
ನನ್ನ ಅಮ್ಮ ಈ ಸಮಾಜಕ್ಕೆ ಮಾಡಿ ಕೆಲಸಕ್ಕೆ ಇದು ದೊಡ್ಡ ಗೌರವ, ಅವರು ಮಾಡಿದ ಕೆಲಸದ ಬಗ್ಗೆ ಅವರಿಗೆ ಇಂದು ತೃಪ್ತಿ ತಂದಿರಬಹುದು. ನಮಗೆಲ್ಲ ಅವರು ದೊಡ್ಡ ಸ್ಫೂರ್ತಿ. 25 ವರ್ಷಗಳ ಕಾಲ ಪರೋಪಕಾರಿ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಬಡಕುಟುಂಬಗಳಿಗೆ ಸೇವೆ ನೀಡಿದ್ದಾರೆ. ಹಲವಾರು ಸಾಕ್ಷರತಾ ಕೆಲಸಗಳಿಗೆ ಧನಸಹಾಯ, ನೈಸರ್ಗಿಕ ವಿಕೋಪಗಳಿಂದ ಜೀವನ ಕಳೆದುಕೊಂಡ ಜನರಿಗೆ ಅಗತ್ಯ ಸಹಾಯ, ದೇಶದ ಅನೇಕ ಕಡೆಗಳಲ್ಲಿ ಸುತ್ತಿ, ಬೇರೆ ಬೇರೆ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ ಎನ್ನುವುದೇ ದೊಡ್ಡ ಹೆಮ್ಮೆ ಎಂದು ಹೇಳಿದ್ದಾರೆ. ತನ್ನ ತಾಯಿ ಹೆಸರು ಗಳಿಸಲು ಬದುಕುವುದಿಲ್ಲ, ನನ್ನ ಪೋಷಕರು ನನ್ನ ಸಹೋದರ, ನನ್ನಲ್ಲಿ ತುಂಬಿದ ಮೌಲ್ಯಗಳು, ಕಠಿಣ ಪರಿಶ್ರಮ, ನಮ್ರತೆ, ನಿಸ್ವಾರ್ಥತೆ ಅದು ಯಾವತ್ತೂ ನನ್ನ ಎಲ್ಲ ಕೆಲಸದಲ್ಲೂ ಇರುತ್ತದೆ ಎಂದು ಹೇಳಿದರು.
Published On - 6:28 pm, Fri, 7 April 23