ಸೌದಿ ಅರೇಬಿಯಾ: ಜಗತ್ತಿನ ಅತಿ ಎತ್ತರದ ಬಹುಮಹಡಿ ಕಟ್ಟದವಾದ ಬುರ್ಜ್ ಖಲೀಫಾ Burj Khalifa ನಿರ್ಮಿಸಿದ್ದ ಪ್ರತಿಷ್ಠಿತ ಕಂಪನಿ ದಿವಾಳಿಯೆದ್ದಿದೆ. UAE ಮೂಲದ ಅರಬ್ಟೆಕ್ ಹೋಲ್ಡಿಂಗ್ ಕಂಪನಿಯು ಇನ್ನೇನು ಬಾಗಿಲು ಮುಚ್ಚಲಿದೆ.
ದೇಶದಲ್ಲಿ ದಶಕದ ಹಿಂದೆ ಪ್ರಾರಂಭವಾದ ಹಲವಾರು ಕಟ್ಟಡ ನಿರ್ಮಾಣ ಸಂಸ್ಥೆಗಳು ಸಹ ಇದೇ ಪರಿಸ್ಥಿತಿ ಎದುರಿಸುತ್ತಿವೆ. ಕೊರೊನಾ ತಂದೊಡ್ಡಿದ ಸ್ಥಿತಿಯಿಂದ ಎಲ್ಲೆಡೆ ಆರ್ಥಿಕ ಮುಗ್ಗಟ್ಟು ಉಂಟಾಗಿ ಸರ್ಕಾರವು ಹಲವು ಯೋಜನೆಗಳಿಗೆ ನೀಡುತ್ತಿದ್ದ ಅನುದಾನವನ್ನು ಸ್ಥಗಿತಗೊಳಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಂಪನಿಗಳು ಇದೀಗ ಸಂಕಷ್ಟಕ್ಕೆ ಈಡಾಗಿದೆ. ಅರಬ್ಟೆಕ್ ಹೋಲ್ಡಿಂಗ್ ಕಂಪನಿಯ (Arabtec) ಈ ಒಂದು ನಿರ್ಧಾರದಿಂದಲೇ ಸುಮಾರು 40 ಸಾವಿರ ಉದ್ಯೋಗಿಗಳು ಬೀದಿಪಾಲಾಗುವ ಪರಿಸ್ಥಿತಿ ಬಂದಿದೆ.