ಬೆಲ್ಜಿಯಂನಲ್ಲೊಬ್ಬ ತಿವಾರಿ: ಮಾಜಿ ರಾಜನ ಮಗಳಿಗೆ ಕೊನೆಗೂ ಸಿಕ್ತು ಪ್ರಿನ್ಸೆಸ್​ ಪಟ್ಟ!

ಏಳು ವರ್ಷಗಳ ಸತತ ಕಾನೂನು ಹೋರಾಟದ ಬಳಿಕ ಮಹಿಳೆಯೊಬ್ಬಳಿಗೆ ತನ್ನನ್ನು ರಾಜಕುಮಾರಿ ಎಂದು ಕರೆಸಿಕೊಳ್ಳುವ ಅಧಿಕಾರಿ ಲಭಿಸಿದೆ. ಹೌದು, ಈ ಸ್ವಾರಸ್ಯಕರ ಸಂಗತಿ ನಡೆದಿರೋದು ಬೆಲ್ಜಿಯಂ ದೇಶದಲ್ಲಿ. ಬೆಲ್ಜಿಯಂನ ಮಾಜಿ ಅರಸ ಇಮ್ಮಡಿ ಌಲ್ಬರ್ಟ್​ ಹೊಂದಿದ್ದ ಅನೈತಿಕ ಸಂಬಂಧದ ಪರಿಣಾಮವಾಗಿ ಆತನಿಗೆ 1968ರಲ್ಲಿ ಹೆಣ್ಣು ಮಗುವೊಂದು ಪ್ರಾಪ್ತವಾಗಿತ್ತು. ಮಗುವಿಗೆ ಡೆಲ್ಫಿನ್​ ಬೋಯೆಲ್​ ಎಂದು ನಾಮಕರಣ ಸಹ ಮಾಡಲಾಗಿತ್ತು. ಆದರೆ, ಎಲ್ಲಿ ಈ ಕೂಸು ತನ್ನ ಅರಸೊತ್ತಿಗೆಗೆ ಕಂಟಕವಾಗುತ್ತಾಳೋ ಅನ್ನೋ ಭೀತಿಯಲ್ಲಿ ಌಲ್ಬರ್ಟ್​ ಡೆಲ್ಫಿನ್​ನ ತನ್ನ ಮಗಳೆಂದು ಒಪ್ಪಿಕೊಂಡಿರಲಿಲ್ಲ. […]

ಬೆಲ್ಜಿಯಂನಲ್ಲೊಬ್ಬ ತಿವಾರಿ: ಮಾಜಿ ರಾಜನ ಮಗಳಿಗೆ ಕೊನೆಗೂ ಸಿಕ್ತು ಪ್ರಿನ್ಸೆಸ್​ ಪಟ್ಟ!
Follow us
KUSHAL V
|

Updated on: Oct 02, 2020 | 7:20 PM

ಏಳು ವರ್ಷಗಳ ಸತತ ಕಾನೂನು ಹೋರಾಟದ ಬಳಿಕ ಮಹಿಳೆಯೊಬ್ಬಳಿಗೆ ತನ್ನನ್ನು ರಾಜಕುಮಾರಿ ಎಂದು ಕರೆಸಿಕೊಳ್ಳುವ ಅಧಿಕಾರಿ ಲಭಿಸಿದೆ. ಹೌದು, ಈ ಸ್ವಾರಸ್ಯಕರ ಸಂಗತಿ ನಡೆದಿರೋದು ಬೆಲ್ಜಿಯಂ ದೇಶದಲ್ಲಿ.

ಬೆಲ್ಜಿಯಂನ ಮಾಜಿ ಅರಸ ಇಮ್ಮಡಿ ಌಲ್ಬರ್ಟ್​ ಹೊಂದಿದ್ದ ಅನೈತಿಕ ಸಂಬಂಧದ ಪರಿಣಾಮವಾಗಿ ಆತನಿಗೆ 1968ರಲ್ಲಿ ಹೆಣ್ಣು ಮಗುವೊಂದು ಪ್ರಾಪ್ತವಾಗಿತ್ತು. ಮಗುವಿಗೆ ಡೆಲ್ಫಿನ್​ ಬೋಯೆಲ್​ ಎಂದು ನಾಮಕರಣ ಸಹ ಮಾಡಲಾಗಿತ್ತು. ಆದರೆ, ಎಲ್ಲಿ ಈ ಕೂಸು ತನ್ನ ಅರಸೊತ್ತಿಗೆಗೆ ಕಂಟಕವಾಗುತ್ತಾಳೋ ಅನ್ನೋ ಭೀತಿಯಲ್ಲಿ ಌಲ್ಬರ್ಟ್​ ಡೆಲ್ಫಿನ್​ನ ತನ್ನ ಮಗಳೆಂದು ಒಪ್ಪಿಕೊಂಡಿರಲಿಲ್ಲ.

ಇದೀಗ, ಪ್ರತಿಷ್ಠಿತ ಕಲಾವಿದೆಯಾಗಿ ಹೆಸರು ಮಾಡಿರುವ ಡೆಲ್ಫಿನ್​ ಌಲ್ಬರ್ಟ್​ ತನ್ನನ್ನು ಮಗಳೆಂದು ಒಪ್ಪಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಳು. ಇದಕ್ಕೆ ಮಾಜಿ ಅರಸ ಒಪ್ಪದಿದ್ದಾಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಳು. ಸತತ ಏಳು ವರ್ಷಗಳ ಕಾಲ ನಡೆದ ಕಾನೂನು ಹೋರಾಟದಲ್ಲಿ ಕೊನೆಗೂ ಜಯಶಾಲಿಯಾಗಿದ್ದಾಳೆ. ಕೋರ್ಟ್​ ಆದೇಶಿಸಿದ DNA ಪರೀಕ್ಷೆಯಲ್ಲಿ ಡೆಲ್ಫಿನ್ ಌಲ್ಬರ್ಟ್​ ಮಗಳು ಎಂದು ಸಾಬೀತಾಗಿದೆ. ಇದೀಗ, ಡೆಲ್ಫಿನ್​ ತನ್ನ ಉಪನಾಮವನ್ನು ರಾಜಮನೆತನಕ್ಕಿರುವ ಸಾಕ್ಸೆ ಕೋಬರ್ಗ್​ಗೆ ಬದಲಾಯಿಸಲು ಅನುಮತಿ ಸಿಕ್ಕಿದೆ. ಜೊತೆಗೆ, ಇನ್ಮುಂದೆ ಎಲ್ಲರೂ ತನ್ನನ್ನು ರಾಜಕುಮಾರಿ ಎಂದೇ ಸಂಬೋಧಿಸಬೇಕು ಎಂಬ ಅಧಿಕಾರ ಸಹ ದೊರೆತಿದೆ.

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!