ಭಾರತವನ್ನು ಕೆರಳಿಸಲು ಪ್ರಯತ್ನಿಸುತ್ತಿಲ್ಲ, ನಮಗೆ ಉತ್ತರ ಬೇಕು: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ

ಭಾರತ ಸರ್ಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ. ನಾವು ಅದನ್ನು ಮಾಡುತ್ತಿದ್ದೇವೆ, ನಾವು ಪ್ರಚೋದಿಸಲು ಅಥವಾ ಉಲ್ಬಣಗೊಳಿಸಲು ನೋಡುತ್ತಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರುಡೋ ಹೇಳಿದ್ದಾರೆ. ಭಾರತವು ಕೆನಡಾ ಸರ್ಕಾರದ ಆರೋಪಗಳನ್ನು ಅಸಂಬದ್ಧವೆಂದು ತಳ್ಳಿಹಾಕಿದೆ.

ಭಾರತವನ್ನು ಕೆರಳಿಸಲು ಪ್ರಯತ್ನಿಸುತ್ತಿಲ್ಲ, ನಮಗೆ ಉತ್ತರ ಬೇಕು: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ
ಜಸ್ಟಿನ್ ಟ್ರುಡೊ
ರಶ್ಮಿ ಕಲ್ಲಕಟ್ಟ

Updated on: Sep 19, 2023 | 8:52 PM

ಒಟ್ಟಾವಾ ಸೆಪ್ಟೆಂಬರ್ 19: ಖಲಿಸ್ತಾನಿ ಭಯೋತ್ಪಾದಕನ (Khalistani terrorist) ಹತ್ಯೆಯಲ್ಲಿ ತನ್ನ ಏಜೆಂಟ್‌ಗಳಿಗೆ ಸಂಬಂಧವಿದೆ ಎಂದು ಹೇಳುವ ಮೂಲಕ ಕೆನಡಾ ಭಾರತವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿಲ್ಲ. ಆದರೆ ಕೆನಡಾ ಸರ್ಕಾರವು ಭಾರತ ಈ ಸಮಸ್ಯೆಯನ್ನು ಸರಿಯಾಗಿ ಪರಿಹರಿಸಬೇಕೆಂದು ಬಯಸುತ್ತದೆ ಎಂದು ಕೆನಡಾ (Canada) ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಮಂಗಳವಾರ ಹೇಳಿದ್ದಾರೆ. ಭಾರತ ಸರ್ಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ. ನಾವು ಅದನ್ನು ಮಾಡುತ್ತಿದ್ದೇವೆ, ನಾವು ಪ್ರಚೋದಿಸಲು ಅಥವಾ ಉಲ್ಬಣಗೊಳಿಸಲು ನೋಡುತ್ತಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರುಡೋ ಹೇಳಿದ್ದಾರೆ. ಭಾರತವು ಕೆನಡಾ ಸರ್ಕಾರದ ಆರೋಪಗಳನ್ನು ಅಸಂಬದ್ಧವೆಂದು ತಳ್ಳಿಹಾಕಿದೆ.

ಜೂನ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಟ್ರುಡೊ ಆರೋಪದ ನಂತರ ಭಾರತವು ಇಂದು ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಉಚ್ಛಾಟಿಸಿದೆ. ರಾಜತಾಂತ್ರಿಕರು ದೇಶ ತೊರೆಯಲು ಐದು ದಿನಗಳನ್ನು ಭಾರತ ನೀಡಿದೆ.

ನಿಜ್ಜರ್ ಹತ್ಯೆ ಮತ್ತು ಉಚ್ಚಾಟನೆ ಸರಣಿ

ಖಲಿಸ್ತಾನಿ ಟೈಗರ್ ಫೋರ್ಸ್​​  ಮುಖ್ಯಸ್ಥ ಹಾಗೂ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಕೆನಡಾ ವಿಭಾಗದ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್​​ನ್ನು ಕೆನಡಾದ ಸರೇ ನಗರದ ಗುರುದ್ವಾರವೊಂದರಲ್ಲಿ ಆಗಂತುಕರು ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂಬುದು ಕೆನಡಾದ ಶಂಕೆ. ಒಂದು ವೇಳೆ ಭಾರತದ ಪಾತ್ರ ಇದ್ದಲ್ಲಿ ಅದು ಕೆನಡಾದ ಸಾರ್ವಭೌಮತ್ವಕ್ಕೆ ಧಕ್ಕೆ ಮಾಡಿದಷ್ಟು ಗಂಭೀರವಾಗಿ ಪ್ರಕರಣವನ್ನ ಪರಿಗಣಿಸಲು ಕೆನಡಾ ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: ನಿಜ್ಜಾರ್ ಹತ್ಯೆ ಪ್ರಕರಣ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಬಹಿರಂಗ ಆರೋಪಕ್ಕೆ ಕಳವಳ ವ್ಯಕ್ತಪಡಿಸಿದ ಯುಎಸ್​​​

ಆದಾಗ್ಯೂ ನಿಜ್ಜರ್ ಹತ್ಯೆಗೂ ತನಗೂ ಸಂಬಂಧ ಇಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. ಕೆನಡಾದಲ್ಲಿ ಹಿಂದೂಗಳ ಮೇಲಿನ ದಾಳಿ ಘಟನೆಗಳಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಕೈವಾಡ ಇತ್ತು. ಮಾನವ ಕಳ್ಳಸಾಗಣೆ, ವ್ಯವಸ್ಥಿತ ಅಪರಾಧ ಇತ್ಯಾದಿಗಳಲ್ಲೂ ಆತ ಶಾಮೀಲಾಗಿದ್ದಾನೆ ಎಂದು ಭಾರತ ಪದೇ ಪದೇ ಕೆನಡಾವನ್ನು ಎಚ್ಚರಿಸುತ್ತಿತ್ತು. ಆದರೂ ಕೂಡ ಆತನನ್ನು ಕೆನಡಾ ಮುಕ್ತವಾಗಿ ಬಿಟ್ಟಿತ್ತು. ಭಾರತದ ಪಂಜಾಬ್ನ ಜಲಂಧರ್ನಲ್ಲಿ ಹಿಂದೂ ಅರ್ಚಕನ ಹತ್ಯೆ ಸಂಬಂಧ ನಿಜ್ಜರ್ ಕೈವಾಡ ಇದ್ದು ಆತನ ಸುಳಿವು ನೀಡಿದವರಿಗೆ 10 ಲಕ್ಷ ರೂ ಬಹುಮಾನ ಕೂಡ ಘೋಷಿಸಲಾಗಿತ್ತು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us