Mahatma Gandhi Statue : ಕೆನಡಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ ಖಲಿಸ್ತಾನಿ ಬೆಂಬಲಿಗರು
ಕೆನಡಾದಲ್ಲಿ ಖಲಿಸ್ತಾನಿ ಬೆಂಬಲಿಗರು ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ.
ಕೆನಡಾದಲ್ಲಿ ಖಲಿಸ್ತಾನಿ ಬೆಂಬಲಿಗರು ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಅಮೆರಿಕ, ಬ್ರಿಟನ್-ಕೆನಡಾದಂತಹ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಖಲಿಸ್ತಾನ್ ಬೆಂಬಲಿಗರ ನೀಚ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇದೀಗ ಕೆನಡಾದಲ್ಲಿ ಖಲಿಸ್ತಾನಿ ಬೆಂಬಲಿಗರು ಮಹಾತ್ಮಾ ಗಾಂಧಿ ಪ್ರತಿಮೆಗೆ ಹಾನಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಒಂಟಾರಿಯೊ ಪ್ರಾಂತ್ಯದ ಹ್ಯಾಮಿಲ್ಟನ್ ನಗರದ ಸಿಟಿ ಹಾಲ್ ಬಳಿಯ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಖಲಿಸ್ತಾನಿ ಬೆಂಬಲಿಗರು ಹಾನಿ ಮಾಡಿದ್ದಾರೆ.
ಹ್ಯಾಮಿಲ್ಟನ್ ಪೊಲೀಸರು ಗುರುವಾರ ಮಧ್ಯಾಹ್ನ ಈ ಬಗ್ಗೆ ದೂರು ಸ್ವೀಕರಿಸಿದ್ದಾರೆ. 2012ರಲ್ಲಿ ಇಲ್ಲಿ ಆರು ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು ಎಂದು ಹೇಳಲಾಗುತ್ತಿದೆ.
ಗುರುವಾರ ನಸುಕಿನ ವೇಳೆ ಈ ಸ್ಥಳದಲ್ಲಿ ಖಾಲಿಸ್ತಾನಿ ಘೋಷಣೆಯನ್ನು ಕೆತ್ತಲಾಗಿದೆ. ಇದನ್ನು ತಿಳಿದ ತಕ್ಷಣ ಭಾರತೀಯ ಸಮುದಾಯ ಪ್ರತಿಭಟನೆ ಆರಂಭಿಸಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮತ್ತಷ್ಟು ಓದಿ: Pakistan: ಹಿಂದೂ ದೇವಾಲಯದ ಮೇಲೆ ದಾಳಿ, ದೇವತೆಗಳ ವಿಗ್ರಹಗಳು ಧ್ವಂಸ!
ಈ ಹಿಂದೆ ಕೆನಡಾದಲ್ಲಿ ರಾಷ್ಟ್ರಪತಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು, ಕಳೆದ ವರ್ಷದ ಆರಂಭದಲ್ಲಿಯೂ ಸಹ ಕೆನಡಾದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಗುರಿಯಾಗಿಸಲಾಗಿತ್ತು. ಜುಲೈ 2022ರಲ್ಲಿ ಗಾಂಧೀಜಿ ಧ್ವಂಸಗೊಳಿಸಲಾಯಿತು ಮತ್ತು ಅಪವಿತ್ರಗೊಳಿಸಲಾಯಿತು.
ಗ್ರೇಟರ್ ಟೊರೊಂಟೊದಲ್ಲಿನ ಹಿಂದೂ ದೇವಾಲಯವನ್ನು ಗುರಿಯಾಸಿಕೊಂಡು ಕೆಲವು ಕೃತ್ಯಗಳನ್ನು ನಡೆಸುತ್ತಿದ್ದಾರೆ. ಫೆಬ್ರವರಿಯಲ್ಲಿ, ಗ್ರೇಟರ್ ಟೊರೊಂಟೊ ಏರಿಯಾದ (GTA) ಹಿಂದೂ ದೇವಾಲಯದ ಹಿಂಭಾಗದ ಗೋಡೆಯ ಮೇಲೆ ಭಾರತ-ವಿರೋಧಿ ಮತ್ತು ಖಲಿಸ್ತಾನಿ ಪರ ಬರಹವನ್ನು ಗೋಚಿದ್ದರು.
ಎಂಟು ತಿಂಗಳ ಅವಧಿಯಲ್ಲಿ ಇದು ನಾಲ್ಕನೇ ಘಟನೆಯಾಗಿದೆ. ಖಲಿಸ್ತಾನಿ ಬೆಂಬಲಿಗರು ಮಿಸ್ಸಿಸೌಗಾ ನಗರದಲ್ಲಿರುವ ಶ್ರೀರಾಮ ಮಂದಿರವನ್ನು ಅಪವಿತ್ರಗೊಳಿಸಲು ಯತ್ನಿಸಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Fri, 24 March 23